vijaya times advertisements
Visit Channel

ಹೊಸ ರೀತಿಯಲ್ಲಿ ಟ್ರಾಫಿಕ್ ರೂಲ್ಸ್ ಹೇಳಿಕೊಡ್ತಿದ್ದಾರೆ ಟ್ರಾಫಿಕ್ ಪೊಲೀಸರು..

untitled-1-jpg_710x400xt

ಬೆಂಗಳೂರು,ನ.29: ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಉಲ್ಲಂಘನೆ ತಡೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಹೌದು…ನಗರದ ಕೆಲವು ಜಂಕ್ಷನ್ ಗಳಲ್ಲಿ ಗೊಂಎ ಆಕಾರದ ಪೊಲೀಸ್ ಗಳನ್ನು ನಿಲ್ಲಿಸುವ ಹೊಸ ವಿಧಾನ ಇದಾಗಿದೆ.

ಅಷ್ಟಕ್ಕೂ ಈ ಗೊಂಬೆ ಪೊಲೀಸ್ ವಿಚಾರ ಏನು ಗೊತ್ತಾ..? ಸಾಮಾನ್ಯವಾಗಿ ಜನ ಜಂಕ್ಷನ್ಸ್ ನಲ್ಲಿ ಪೊಲೀಸರಿದ್ದಾರಾ ಎಂದು ದೂರದಿಂದಲೇ ನೋಡಿಕೊಂಡು, ಇದ್ದರೆ ಮಾತ್ರ ರೂಲ್ಸ್ ಫಾಲೋ ಮಾಡ್ತಾರೆ. ಇಲ್ಲವಾದರೆ ನಿಯಮಗಳನ್ನು ಗಾಳಿಗೆ ತೂರಿ ಸುಮ್ಮನಾಗ್ತಾರೆ..ಈ ಕಾರಣದಿಂದ ಪೊಲೀಸರಂತೆಯೇ ಕಾಣುವ ಗೊಂಬೆಗಳನ್ನು ನಿಲ್ಲಿಸಿ, ಜನರನ್ನು ಜಾಗರೂಕರಾಗಿರುವಂತೆ ನೋಡಿಕೊಳ್ಳುವ ಹಾಗೂ ರೂಲ್ಸ್ ಬ್ರೇಕ್ ಮಾಡದಂತೆ ನೋಡಿಕೊಳ್ಳುವುದು ಟ್ರಾಫಿಕ್ ಪೋಲೀಸರ ಹೊಸ ಪ್ರಯತ್ನವಾಗಿದೆ.

ಈ ಪ್ರಯತ್ನದ ಫಲವಾಗಿ ಈಗಾಗಲೇ ಚಿಕ್ಕಪೇಟೆ ಜಂಕ್ಷನ್ ಬಳಿ ಗೊಂಬೆ ಪೊಲೀಸ್ ನನ್ನು ಸ್ಥಾಪನೆ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆಯಂತೆ. ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಇಂತಹ ಹೊಸ ಕ್ರಮಕ್ಕೆ ಕೈ ಹಾಕಲಾಗಿದೆ ಎಂಬುದು ಸಂಚಾರಿ ಪೊಲೀಸ್ ಅಧಿಕಾರಿಗಳ ಮಾತು..ಒಟ್ಟಿನಲ್ಲಿ ಟ್ರಾಫಿಕ್ ಪೊಲೀಸರ ಈ ಪ್ರಯತ್ನದಿಂದಲಾದರೂ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ರೂಲ್ಸ್ ಬ್ರೇಕರ್ಸ್ ಸಂಖ್ಯೆ ಕಡಿಮೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Latest News

ರಾಜಕೀಯ

ಇಸ್ಲಾಂ ಹುಟ್ಟುವ ಸಾವಿರಾರೂ ವರ್ಷಗಳ ಹಿಂದೆಯೇ ಚಂದ್ರದ್ರೋಣ ಪರ್ವತದಲ್ಲಿ ದತ್ತಪೀಠವಿತ್ತು : ಸಿಟಿ ರವಿ

ಇಸ್ಲಾಂ ಧರ್ಮ ಹುಟ್ಟುವದಕ್ಕೂ ಸಾವಿರಾರೂ ವರ್ಷಗಳ ಹಿಂದೆಯೇ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ದತ್ತಪೀಠವಿತ್ತು. ಬಾಬಾ ಬುಡನ್‌ದರ್ಗಾವೇ ಬೇರೆ, ದತ್ತ ಪೀಠವೇ ಬೇರೆ.

ಮನರಂಜನೆ

60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು

ಈ ಫೋಟೊ ಹಾಗೂ ನಿನ್ನೆ ಮಾಧ್ಯಮದಲ್ಲಿ ಆಡಿದ ಮಾತಿಗೆ ತಳುಕು ಹಾಕಿದಾಗ 1980ರಲ್ಲಿ ಜಗ್ಗೇಶ್‌ ಹೇಗಿದ್ದ ಈಗ ಹೇಗಾದ ಅರಿವಾಗುತ್ತದೆ.