ಕೇರಳದ ಕೊಲ್ಲಂ ಜಿಲ್ಲೆಯ ಉಪ ಜಿಲ್ಲಾಧಿಕಾರಿ ಅನುಪಮ್ ಮಿಶ್ರಾ ಹೋಮ್ ಕ್ವಾರೆಂಟೈನ್ ಸೂಚನೆ ಉಲ್ಲಂಘಿಸಿ ಊರಿಗೆ ತೆರಳಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ. ಮಾರ್ಚ್ 18 ರಂದು ಸಿಂಗಾಪುರಕ್ಕೆ ತೆರಳಿದ್ದ ಕಲೆಕ್ಟರ್ ಅನುಪಮ್ ಮಿಶ್ರಾ ಅವ ರು, ಲಖನೌಗೆ ಭೇಟಿ ನೀಡಿದ್ದರು. ಬಳಿಕ ಕೇರಳಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯನ್ನು 14 ದಿನಗಳ ಕಾಲ ಗೃಹ ಬಂಧನದಲ್ಲಿರಿಸಲಾಗಿತ್ತು ಎಂದು ಅಧಿಕಾಱಿಗಳು ಮಾಹಿತಿ ನೀಡಿದ್ದಾರೆ.
ಹೋಂ ಕ್ವಾರಂಟೈನ್ ನಲ್ಲಿರುವ ಅಧಿಕಾರಿಯನ್ನು ದಿನನಿತ್ಯ ಅಧಿಕಾರಿಗಳು ತಪಾಸಣೆಗೊಳಪಡಿಸುತ್ತಿದ್ದು, ಇದರಂತೆ ಗುರುವಾರ ಅಧಿಕಾರಿಗಳು ತಪಾಸಣೆಗೆಂದು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಧಿಕಾರಿ ಮನೆಯಲ್ಲಿಲ್ಲದಿರುವುದು ಕಂಡು ಬಂದಿದೆ. ದೂರವಾಣಿ ಕರೆ ಮಾಡಿದಾಗ ಬೆಂಗಳೂರಿನಲ್ಲಿ ತನ್ನ ಸಹೋದರನೊಂದಿಗೆ ಇರುವುದಾಗಿ ತಿಳಿಸಿದ್ದಾರೆ. ಅಧಿಕಾರಿಯ ಸಹೋದರ ವೈದ್ಯರಾಗಿದ್ದು, ಗೃಹ ಬಂಧನದಲ್ಲಿರುವಂತೆ ಸೂಚಿಸಿದ ದಿನವೇ ರಾಜ್ಯ ತೊರೆದಿರುವುದಾಗಿ ತಿಳಿಸಿದ್ದಾರೆ.