ಅಪ್ಪ ಎಂದರೆ ನಮ್ಮ ಜೀವನದ ಬುನಾದಿ ನಮಗೆ ಉಸಿರು ನೀಡಿದ ಮಹಾತ್ಮ ಜೀವನದಲ್ಲಿ ಅಪ್ಪನ ಪಾತ್ರ ಮುಗಿಯಲಾರದ ಅಳಿಸಲಾಗದ ನಮ್ಮ ಉಸಿರು ಇರುವವರೆಗೂ ಜೀವದಲ್ಲಿ ಹಸಿರಾಗಿರುವ ಉಸಿರು ಅಪ್ಪ ಇದು ಅಪ್ಪ ನೀಡಿದ ಉಸಿರು.
ಜೀವನದ ಪ್ರತೀ ಹಂತದಲ್ಲಿಯೂ ಮಕ್ಕಳ ತಪ್ಪುಗಳನ್ನು ತಿದ್ದಿ, ಸರಿ ದಾರಿಗೆ ಕಳಿಸುವ ಸಲಹೆಗಾರ,ನ್ಯಾಯ ನೀತಿಗಳನ್ನು ಕಲಿಸಿ ಆದರ್ಶ ಮಾರ್ಗಗಳನ್ನು ತೋರಿಸಿದ ಗುರು ಅಪ್ಪ ಮಕ್ಕಳ ಬೇಕು ಬೇಡಗಳನ್ನು ತಿಳಿದು,ವರ ಅವರ ಕಷ್ಟಗಳನ್ನು ತೋರ್ಪಡಿಸದೆ ಮಡದಿ ಮಕ್ಕಳನ್ನು ಸಲಹುವ ಸಾಹುಕಾರನೇ ಅಪ್ಪ. ಅಪ್ಪನ ಸಮಾನ ಪ್ರೀತಿಯನ್ನು ಅಮ್ಮ ತೋರಿಸಿದರೂ ಕುಟುಂಬವನ್ನು ನಿಬಾಯಿಸುವ ಒಡೆಯ ಅಪ್ಪ. ಸಂಸಾರದ ದೋಣಿಯನ್ನು ಎಲ್ಲಿಯೂ ಎಡವದಂತೆ, ಎಡವಿದರೂ ಎತ್ತಿ ಮುನ್ನಡೆಸುವ ಬಾಳ ನಾವಿಕನೇ ಅಪ್ಪ. ಜೀವನದ ಉದ್ದಕ್ಕೂ ತನಗೆ ಏನನ್ನೂ ಬಯಸದೆ ತನ್ನಾಸೆಗಳನ್ನೂ ಎಲ್ಲೂ ತೋರಿಸಿಕೊಳ್ಳದೆ ಮಕ್ಕಳ ಖುಷಿಯನ್ನೇ ನೋಡಿ ತಾನು ಖುಷಿ ಪಡುವ ನಿಸ್ವಾರ್ಥ ಜೀವಿ ಅದು ಅಪ್ಪ.
ಇವತ್ತು ಅಪ್ಪಂದಿರ ದಿನ ಈ ದಿನ ಎಲ್ಲರೂ ಅಪ್ಪಂದಿರಿಗೊಂದು ದೊಡ್ಡ ಸಲಾಂ ಹೇಳಬೇಕಾದ ದಿನ. ಈ ದಿನ ಸಿನೆಮಾ ರಂಗದಲ್ಲೂ ನಟ ನಟಿಯರೂ ಅಪ್ಪನ ಬಗ್ಗೆ ಹೇಳಿಕೊಂಡು ಶುಭಾಷಯ ಗಳನ್ನು ಹೇಳಿಕೊಳ್ಳುತ್ತಾರೆ. ಅಪ್ಪನ ಬಗ್ಗೆ ಅರ್ಜುನ್ ಜನ್ಯಾರವರು ಬರೆದ ಹಾಡಂತೂ ಸಖತ್ ಹಿಟ್ಟಾಗಿದೆ. ಅಪ್ಪನ ಬಗ್ಗೆ ಎಷ್ಟು ಹೇಳೀದರೂ ಮುಗಿಯದ ಕತೆಗಳಿವೆ.
ತಪ್ಪು ಮಾಡಿದಾಗ ಸಿಡಿಲಂತೆ ಗುಡುಗಿದರೂ ಹೊಡೆದು ಬೈದರೂ ಅಲ್ಲಿ ಮಕ್ಕಳನ್ನು ತಿದ್ದುವ ಹಾಗೂ ಸರಿದಾರಿಗೆ ತರುವ ಅಗಾಧ ಪ್ರೀತಿ ಇರುತ್ತದೆ ಎಂದು ಅಪ್ಪ ಹೊಡೆದಲ್ಲಿನ ನೋವಿಗೆ ಎಣ್ಣೆ ಹಚ್ಚಿ ತಲೆ ಸವರಿ ತಬ್ಬಿಕೊಂಡಾಗ ಮತ್ತು ತನ್ನ ತಟ್ಟೆಯಿಂದ ತುತ್ತು ತಿನ್ನಿಸುವಾಗ ಅವರಲ್ಲಿರುವ ಅನಂತ ಪ್ರೀತಿಯ ಅರಿವು ನಮಗಾಗುತ್ತದೆ. ಸಂಜೆ ಮಕ್ಕಳು ಮನೆಗೆ ಬರುವುದನ್ನೇ ಕಾಯುತ್ತಾ ಮನೆಗೆ ತಡವಾಗಿ ಬಂದಾಗ ಅಂಗಳದಲ್ಲೇ ನಿಲ್ಲಿಸಿ ತಡವಾದ ಕಾರಣವನ್ನು ತಿಳಿದು ಮುಂದೆ ಸರಿಯಾದ ಸಮಯದಲ್ಲೇ ಮನೆಗೆ ಬರಬೇಕು ಎಂಬ ಕಟ್ಟಪ್ಪಣೆಯೊಂದಿಗೆ ಒಳಗೆ ಕರೆಸಿಕೊಂಡು ತಲೆಸವರಿ ಊಟ ಬಡಿಸಲು ಅಮ್ಮನಿಗೆ ಆದೇಶಿಸುವ ಅಪರಿಮಿತ ಪ್ರೀತಿಯ ಒಡೆಯನೇ ಅಪ್ಪ.
ದುಡಿದು ಬಳಲಿದರೂ ಬೇಸರಿಸದೆ ಕಾಯಿಲೆ ಬಿದ್ದರೂ ತೋರಿಸದೆ, ಹರಿದ ಬಟ್ಟೆಯನ್ನೂ ಗಮನಿಸದೆ,ಹೆಂಡತಿ ಮಕ್ಕಳಿಗಾಗಿ ಜೀವ ತೇದ ಮಹಾನುಭಾವ ಅಪ್ಪ. ಮಕ್ಕಳು ಬೆಳೆದು ನಿಂತಾಗ ನೋಡಿ ಸಂತೋಷ ಪಡಲು ಅಪ್ಪ ಇರಬೇಕು. ಅವರು ಕಲಿಸಿದ ಆದರ್ಷಗಳನ್ನು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಬದುಕಬೇಕು ಇದು ಅಪ್ಪಂದಿರ ದಿನ ಅವರಿಗೆ ನಾವು ಕೊಡುವ ಗೌರವ. ಅಪ್ಪಂದಿರ ದಿನದ ಈ ಶುಭ ದಿನದಲ್ಲಿ ಎಲ್ಲಾರಿಗೂ ಹ್ರಯಯಪೂರ್ವಕ ಶುಭಾಷಯಗಳು,,,