ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 787 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತೆ ತಮ್ಮ ತನಿಖೆಯನ್ನು ಚುರುಕುಗೊಳಿಸಿದೆ. ಇಂದು ಮುಂಜಾನೆ ಮೋಸರ್ ಬಾಗಿರ್ ಸಂಸ್ಥೆಗೆ ಸೇರಿದ ೭ ಸ್ಥಳಗಳ ಮೇಲೆ ದಾಳಿ ನಡೆಸಿ ಕಡತಗಳನ್ನು ವಶಪಡಿಸಿಕೊಂಡಿದೆ.
ಇದೇ ಸಂಸ್ಥೆಯ ಸಂಸ್ಥಾಪಕ ಮತ್ತು ಉದ್ಯಮಿ ರತುಲ್ ಪುರಿ ಅವರ ನಿವಾಸ, ಕಚೇರಿಗಳು ಮತ್ತು ಕಂಪನಿಯ ಶಾಖೆಗಳ ಮೇಲೆ ಬೆಳಗಿನಿಂದ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು 787 ಕೋಟಿ ರೂ. ವಂಚನೆಗೆ ಸಂಬಂಧಪಟ್ಟಂತೆ ದಾಖಲೆ ಪತ್ರಗಳು ಮತ್ತು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂದಹಾಗೆ ಪಿಎನ್‍ಬಿ ಬ್ಯಾಂಕ್‍ನಿಂದ ಸಾಲ ಪಡೆದ ನಂತರ ಅದನ್ನು ಮರುಪಾವತಿಸದೆ 787 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಿಕೊಂಡ ಆರೋಪವನ್ನು ರತುಲ್ ಪುರಿ ಎದುರಿಸುತ್ತಿದ್ದರು.