ಭಾರತೀಯ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕ ಸಮಗ್ರ ಅಧಿವೇಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಭಾಷಣ ಮಾಡಿದ್ದಾರೆ.ಕಳೆದ ೫ ವರ್ಷದಲ್ಲಿ ದೇಶ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಭಾರತವನ್ನು ಆತ್ಮನಿರ್ಭಯ ಮಾಡೋ ಸಮಯ ಬಂದಿದೆ.ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಇದರ ಜೊತೆ ಕೊರೋನಾ ಸೋಂಕು ಹಾಗೂ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಇವರು ಮರುಭೂಮಿ ಮಿಡತೆ, ಆಲಿಕಲ್ಲು, ತೈಲ ಬಾವಿಯಲ್ಲಿ ಅನಿಲ ಸೋರಿಕೆ, ಭೂಕಂಪದಂತಹ ಸವಾಲುಗಳನ್ನು ಎದುರಿಸುತ್ತಿದೆ ಎಂದಿದ್ದಾರೆ.
ಇನ್ನು ಪ್ರಧಾನಿ ಮೋದಿ ಮಾತನಾಡಿದ ಪ್ರಮುಖ ಅಂಶಗಳತ್ತ ನೋಡಿದ್ರೆ ಆತ್ಮನಿರ್ಭರ ಪರಿಕಲ್ಪನೆಯನ್ನು ಮನೆಯಲ್ಲೇ ಸ್ವಾಲಂಭಿಯಾಗಿ ಭಾರತದಲ್ಲಿ ಆರಂಭಿಸಲು ಯೋಚನೆ.ಬೇರೆ ದೇಶಗಳಿಂದ ಆಮದು ಮಾಡುಕೊಳ್ಳುತ್ತಿದ್ದ ವಸ್ತುಗಳನ್ನು ಭಾರದಲ್ಲೇ ತಯಾರಿಸಲು ತೀರ್ಮಾನ ಕೈಗೊಳ್ಳಬೇಕು ಜೊತೆಗೆ ನಮ್ಮ ವಸ್ತುಗಳನ್ನು ರಫ್ತು ಮಾಡುವಷ್ಟು ನಾವು ಬೆಳೆಯಬೇಕು.ರೈತರಿಗೆ ಅನುಕೂಲವಾಗುವ ಕಾರಣಕ್ಕಾಗಿ ಸ್ವತ: ರೈತರಿಗೆ ತಮ್ಮ ಬೆಳೆಯನ್ನು ರಫ್ತು ಮಾಡಲು ಅವಕಾಶ ನೀಡಲಾಗಿದೆ.ಇನ್ನು ರಫ್ತು ವಿಚಾರವಾಗಿ ಕಾರ್ಖಾನೆಗಳು ಯಾವ ರೀತಿ ನಮ್ಮ ಉತ್ಪಾದನೆಯನ್ನು ಹೆಚ್ಚಿಸಬೇಕು ಅನ್ನೋದನ್ನು ಯೋಚಿಸಬೇಕಾಗಿದೆ ಎಂದಿದ್ದಾರೆ.
ಇನ್ನು ಮಾತು ಮುಂದುವರೆಸಿದ ಪ್ರಧಾನಿ ಎಲ್‌ಇಡಿ ಬಲ್ಬ್ ಬಳಕೆಯಿಂದ ಭಾರತವು 19,000 ಕೋಟಿ ರೂ. ಹಣವನ್ನು ಉಳಿತಾಯ ಮಾಡುತ್ತಿದೆ.ಭಾರತದ ಆರ್ಥಿಕತೆಯನ್ನು ಕಮ್ಯಾಂಡ್ ಆಂಡ್ ಕಂಟ್ರೋಲ್‌ನಿಂದ ಪ್ಲಗ್ ಆಂಡ್ ಪ್ಲೇ ಕಡೆಗೆ ಕರೆದೊಯ್ಯಬೇಕಿದೆ.DBT,JAM ಲಕ್ಷಾಂತರ ಫಲಾನುಭವಿಗಳಿಗೆ ಸಹಾಯ ಮಾಡಿದೆ.ನಾವು ಪಶ್ಚಿಮ ಬಂಗಾಳದಲ್ಲಿ ಉತ್ಪಾದನಾ ವಲಯವನ್ನು ಪುನರುಜ್ಜೀವನಗೊಳಿಸಬೇಕು, ಇದು ಹೆಚ್ಚು ಹೂಡಿಕೆಯ ಸಮಯ, ಸಂಪ್ರದಾಯವಾದಿ ನಿರ್ಧಾರಗಳಲ್ಲ.ಎಂದು ಹೇಳಿದ್ದಾರೆ.