ಬೆಂಗಳೂರು: ದೇಶದ ಜನರಿಗೆ ಭಾರತೀಯ ತೈಲ ನಿಗಮವು ಸಿಹಿಸುದ್ದಿಯನ್ನು ನೀಡಿದೆ. ಇನ್ನು ಮುಂದೆ ದೇಶಾದ್ಯಂತ ಇಂಡೇನ್ ಅಡುಗೆ ಅನಿಲ ಮರುಪೂರಣ ಸಿಲಿಂಡರ್ ಬುಕಿಂಗ್ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ 24-7 ಸೇವೆಯನ್ನು ನೀಡುವ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಸಂಖ್ಯೆ 7718955555 ಆಗಿದೆ ಎಂದು ಭಾರತೀಯ ತೈಲ ನಿಗಮದ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರ ಮಟ್ಟದಲ್ಲಿ ಎಲ್ಪಿಜಿ ಬುಕ್ಕಿಂಗ್ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್ಎಂಎಸ್ ಮತ್ತು ಐವಿಆರ್ಎಸ್ ಮೂಲಕ ಮಾಡಬಹುದಾಗಿದ್ದು, ಇದು ಇಂಡೇನ್ ಎಲ್ಪಿಜಿ ಮರುಪೂರಣ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಮಹತ್ವದ ಕ್ರಮವಾಗಿದೆ.
ಶನಿವಾರ ಮಧ್ಯರಾತ್ರಿಯಿಂದ ಎಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ನ ಸಮಾನ ಸಂಖ್ಯೆ ಅಂದರೆ 7718955555 ಜಾರಿಗೆ ಬರುತ್ತದೆ ಎಂದು ತಿಳಿಸಿದೆ. ಇಂಡೇನ್ ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರವೇ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.