ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ವಿಶ್ವದಾದ್ಯಂತ ಏರುತ್ತಲೇ ಇದೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ(WHO) ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಿದೆ. ಜಾಗತಿಕವಾಗಿ ಪ್ರತೀ 10 ಜನರ ಪೈಕಿ ಒಬ್ಬರಿಗೆ ಸೋಂಕು ದೃಢವಾಗುತ್ತಿದೆ ಎಂದು, ಈ ಪ್ರಮಾಣದಲ್ಲಿ ಸೋಂಕು ಹರಡುವುದರಿಂದ ಈಗ ಇರುವ ಸೋಂಕಿತರಿಗಿಂತ 20 ರಷ್ಟು ಜನ ಸೋಂಕಿಗಿ ಒಳಗಾಗಿರುವ ಸಾಧ್ಯತೆ ಇದೆ ಎಂದು ವಿಶ್ವ ತುರ್ತು ಪರಿಸ್ಥಿತಿಗಳ ಮುಖ್ಯಸ್ಥ ಡಾ.ಮೈಕೆಲ್ ರಮಾನ್ ತಿಳಿಸಿದ್ದಾರೆ.
ವಿಶ್ವದಲ್ಲಿ ಈಗಾಗಲೇ 76 ಕೋಟಿ ಜನರು ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿನ ಪ್ರಮಾಣ ತೀವೃಗತಿಯಲ್ಲಿ ಮುಂಚೂಣಿಯಲ್ಲಿದೆ, ಸಾವಿನ ಪ್ರಮಾಣ ನಿಯಂತ್ರಿಸಲಾಗುತ್ತಿದೆ. ಸೋಂಕಿನ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.