ಬೆಂಗಳೂರು ಆ 26 : ಇನ್ನು ಮುಂದೆ ಟೋಯಿಂಗ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದರೆ ಸಿ ಕ್ಯಾಟಗರಿ ರೌಡಿ ಪಟ್ಟಿ ಜಾರಿಗೊಳಿಸಿಲಾಗುತ್ತದೆ ಎಂದು ಪೋಲಿಸರು ತಿಳಿಸಿದ್ದಾರೆ.
ಕಳೆದ ತಿಂಗಳು ಬೆಂಗಳೂರಿನ ಯಲಹಂಕದಲ್ಲಿ ಬಳಿ ಟೋಯಿಂಗ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ಸಿ ಕ್ಯಾಟಗರಿ ರೌಡಿ ಪಟ್ಟಿ ಜಾರಿಗೊಳಿಸಿದ್ದಾರೆ. ಯಲಹಂಕದಲ್ಲಿ ಜುಲೈ 28ರಂದು ಬೈಕ್ ಸವಾರರು ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಘಟನೆ ಸಂಬಂಧ ವಿಜಯ್ ಮತ್ತು ರಾಜಶೇಖರ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಬ್ಬರ ವಿರುದ್ಧ ರೌಡಿ ಶೀಟ್ ಓಪನ್ ಆಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಿಬ್ಬಂದಿ ಬೈಕ್ ಟೋಯಿಂಗ್ ಮಾಡುತ್ತಿದ್ದರು. ಈ ವೇಳೆ ಟೋಲ್ ವಾಹನ ಏರಿ ಹೆಲ್ಮಟ್ನಿಂದ ಬೈಕ್ ಟೋಯಿಂಗ್ ಸಿಬ್ಬಂದಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದರು. ಕಳೆದ ವಾರ ಇಂದಿರಾನಗರ ಮೇಟ್ರೋ ನಿಲ್ದಾಣದ ಬಳಿ ಕೂಡ ಟೋಯಿಂಗ್ ಸಿಬ್ಬಂದಿಯ ಮೇಲ ಹಲ್ಲೆಯಾಗಿತ್ತು.