ನವದೆಹಲಿ, ಅ. 14: ಇದೀಗ ಇ-ಮೇಲ್ ಎಂದರೆ ಜಿ-ಮೇಲ್ ಎನ್ನುವ ಪರಿಸ್ಥಿತಿ ಇದೆ. ಆದರೆ ಇದಕ್ಕೂ ಮೊದಲು ಪ್ರಚಲಿತವಾಗಿದ್ದ ಇ-ಮೇಲ್ಗಳಲ್ಲಿ ಯಾಹೂ ಡಾಟ್ ಕಾಮ್ ಒಂದು. ಆದರೆ ಯಾಹು ಡಾಟ್ ಕಾಮ್ ಒಂದು ವರ್ಷದಿಂದ ಅತೀವ ಸಂಕಷ್ಟಕ್ಕೆ ಒಳಗಾಗಿದೆ. ಇದೀಗ ಇದು ತೀವ್ರ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಇನ್ನೆರಡು ತಿಂಗಳಿನಲ್ಲಿ ಮುಚ್ಚಲಾಗುತ್ತಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.
ಯಾಹೂ ಡಾಟ್ ಕಾಮ್ ಒಡೆತನದಲ್ಲಿ ಇರುವ ವೆರಿಜೋನ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಡಿಸೆಂಬರ್ 15ರಿಂದ ಯಾಹೂ ಇ- ಮೇಲ್ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.
2017ರಲ್ಲಿ ವೆರಿಜೋನ್ ಕಂಪೆನಿ ಯಾಹೂವನ್ನು ಖರೀದಿ ಮಾಡಿತ್ತು. ಹಿಂದೊಮ್ಮೆ ಅತಿದೊಡ್ಡ ಸಂದೇಶ ಬೋರ್ಡ್ ಎಂದೇ ಪ್ರಸಿದ್ಧಿ ಪಡೆದಿದ್ದ ಯಾಹೂ ಇದೀಗ ತನ್ನ ಅನೇಕ ಹಳೆಯ ಬಳಕೆದಾರರು ಇದುವರೆಗೂ ಯಾಹೂ ಡಾಟ್ ಕಾಮ್ ಬಳಸುತ್ತಿದ್ದಾರೆ. ಅವರು ಬೇರೆ ಯಾವುದೇ ಇ-ಮೇಲ್ಗೆ ವರ್ಗಾವಣೆಗೊಂಡಿಲ್ಲ. ಅಂಥವರ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿತ್ತು. ಆದರೆ ಇದೀಗ ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ ಎಂದು ವೆರಿಜೋನ್ ಕಂಪೆನಿ ಹೇಳಿದೆ. ಈಗಾಗಲೇ ತುಂಬಾ ನಷ್ಟ ಅನುಭವಿಸಿದ್ದೇವೆ. ಆದ್ದರಿಂದ ತಮಗೆ ಬೇರೆ ದಾರಿ ಇಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.
ನೀವು ಸ್ವೀಕರಿಸಿರುವ ಅಥವಾ ನಿಮ್ಮ ಇನ್ಬಾಕ್ಸ್ನಲ್ಲಿ ಬೇರೆಯವರು ಕಳುಹಿಸಿರುವ ಮೆಸೇಜ್. ವಿಡಿಯೋ, ಫೋಟೋಗಳು ಯಾವುದೇ ಕಾರಣಕ್ಕೂ ಡಿಲೀಟ್ ಆಗುವುದಿಲ್ಲ. ಅವು ಸುರಕ್ಷಿತವಾಗಿ ಇರುತ್ತವೆ. ಆದರೆ ಡಿಸೆಂಬರ್ 15ರ ನಂತರ ನೀವು ಮೇಲ್ ಕಳುಹಿಸುವುದು ಹಾಗೂ ಸ್ವೀಕರಿಸುವುದು ಸಾಧ್ಯವಾಗುವುದಿಲ್ಲ ಎಂದಿದೆ.
ಅಮೆರಿಕನ್ ವೈರ್ಲೆಸ್ ಸಂವಹನ ಸೇವಾ ಪೂರೈಕೆದಾರ ವೆರಿಜೋನ್ ಯಾಹೂನ ಇಂಟರ್ನೆಟ್ ವ್ಯವಹಾರವನ್ನು 2017ರಲ್ಲಿ 84.8 ಬಿಲಿಯನ್ ಡಾಲರ್ಗೆ ಖರೀದಿ ಮಾಡಿತ್ತು. 2001ರಲ್ಲಿ ಯಾಹೂ ಇಂಟರ್ನೆಟ್ ಸೇವೆ ಆರಂಭವಾಗಿತ್ತು.