ಸಮಾಜಕ್ಕೆ ವಾತ್ಸಲ್ಯ ತಂದ ವತ್ಸಲ

ವತ್ಸಲ, ಚಿಕ್ಕ ವಯಸ್ಸಲ್ಲೇ ಜನ ಮೆಚ್ಚೋ ಕೆಲಸ ಮಾಡುತ್ತಿರೋ ಬಾಲೆ. ತನ್ನ ಓದಿನ ಜೊತೆ ಜೊತೆಗೆ ಬಡ ಜೀವಗಳಿಗೆ ಆಸರೆಯಾಗುತ್ತಿರೋ ಅಪರೂಪದ ವಿದ್ಯಾರ್ಥಿ. ವತ್ಸಲ ತನ್ನದೇ ರೀತಿಯ ವಿಶಿಷ್ಟ ಅಭಿಯಾನವನ್ನು ಆರಂಭಿಸಿ ಏಕಾಂಗಿಯಾಗಿ ನಿರಾಶ್ರಿತರಿಗೆ ಸಹಾಯವನ್ನು ಮಾಡುತ್ತಿದ್ದಾಳೆ .

೨೦೧೯ರಲ್ಲಿ ಒಂದು ಜೊತೆ ಬಟ್ಟೆಯ ಅಭಿಯಾನವನ್ನು ಆರಂಭಿಸಿರೋ ವತ್ಸಲ; ಜನರಿಂದ ಬಟ್ಟೆಗಳನ್ನು ಕಲೆಕ್ಟ್ ಮಾಡಿ .. ಅದೇ ಬಟ್ಟೆಗಳನ್ನು ಬಟ್ಟೆಗಾಗಿ ಪರದಾಡೋ ಬಡ ಜೀವಗಳಿಗೆ ಹಂಚುತ್ತಿದ್ದಾರೆ. ಅಚ್ಚರಿಯ ವಿಚಾರ ಅಂದ್ರೆ ಕೇವಲ ಒಂದೇ ವರ್ಷದಲ್ಲಿ ಇವರು  ಸುಮಾರು ೧೦೦೦ಕ್ಕೂ ಹೆಚ್ಚು ಮಂದಿಗೆ ಬಟ್ಟೆಗಳನ್ನು ಹಂಚಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ.  ಕಳೆದ ವರ್ಷ  ಬೆಂಗಳೂರಿನ  ಕೆ.ಆರ್  ಮಾರ್ಕೆಟ್  ಬಳಿ ವ್ಯಕ್ತಿಯೊರ್ವ ಬಟ್ಟೆಗಾಗಿ ಪರಿತಪಿಸುತ್ತಿದ್ದನ್ನು ಗಮನಿಸಿದ ವತ್ಸಲ ತಾನು ಇಂಥವರಿಗಾಗಿ ಸೇವೆ ಮಾಡಬೇಕು ಅನ್ನೋದನ್ನು ನಿರ್ಧರಿಸಿದ್ರು. ಬಳಿಕ ಏಕಾಂಗಿಯಾಗಿ ತನ್ನ ಸೇವೆಗೊಂದು ಪಕ್ಕಾ ರೂಪ ಕೊಟ್ರು. ಒಂದು ಜೊತೆ ಬಟ್ಟೆ ಅಭಿಯಾನ ಪ್ರಾರಂಭಿಸಿದ್ರು. ವತ್ಸಲ ಅವರ ನಿರ್ಧಾರಕ್ಕೆ ಅವರ ಗೆಳತಿಯರೂ ಕೈ ಜೋಡಿಸಿ ಈ ಅಭಿಯಾನದ ಯಶಸ್ಸಿನ ಭಾಗವಾಗಿದ್ದಾರೆ.

ಅಂದಹಾಗೆ ವತ್ಸಲ ಈ ಕೆಲಸಕ್ಕೆ  ಯಾರಿಂದಲೂ ಧನ ಸಹಾಯ ಪಡೆಯುತ್ತಿಲ್ಲ. ತನ್ನ ಕೈಯಿಂದಲೇ ಹಣವನ್ನು ಹಾಕಿ  ಸಮಾಜ ಪರ ಕೆಲಸವನ್ನು ಮಾಡುತ್ತಿದ್ದಾರೆ . ಜೊತೆಗೆ ಇತ್ತೀಚೆಗೆ ವತ್ಸಲ ಸಂಗಡಿಗರು  ಆರ್ಥಿಕವಾಗಿ ನೆರವನ್ನು ನೀಡುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ವಿಜಯನಗರ , ಮಲ್ಲೇಶ್ವರಂ, ರಾಜಾಜಿನಗರ, ಕೋರಮಂಗಲಂ ಸೇರಿದಂತೆ ಹಲವೆಡೆ ನಿರಾಶ್ರಿತರ ನೋವನ್ನು ವತ್ಸಲ ಆಲಿಸೋದರ ಜೊತೆಗೆ ಅಭಿಯಾನವನ್ನು ಮಾಡಿ ಜನರ ಮನ ಗೆದ್ದಿದ್ದಾರೆ.

ಹಾಸನದಲ್ಲಿ ಹುಟ್ಟಿರೋ ವತ್ಸಲ ಬೆಳೆದಿದ್ದು ಓದಿದ್ದು ಬೆಂಗಳೂರಿನಲ್ಲೆ. ಸದ್ಯ ಇವರು  ೨ ವರ್ಷದ ಎಲ್ ಎಲ್ ಬಿ ಯನ್ನು ಮಾಡುತ್ತಿದ್ದಾರೆ.  ತಾವು ಮಾಡೋ  ಕೆಲಸದ  ಯಾವ  ಮಾಹಿತಿಯು ಮನೆಯವರಿಗೆ ಇನ್ನೂ ಗೊತ್ತಿಲ್ಲ..ತಾನು ಮಾಡೋ ಸಮಾಜ ಸೇವಾ ಕೆಲಸ ಕುರಿತು ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡುತ್ತಿದ್ದು ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ವತ್ಸಲ . ಮಾತ್ರವಲ್ಲ ಸಂಸ್ಥೆ ರೂಪಿಸಲು ಹಲವರು ಮುಂದೆ ಬಂದಿದ್ದು ಇದರ ಬಗ್ಗೆ ಯೋಚಿಸುತ್ತಿದ್ದೇನೆ ಎಂದಿದ್ದಾರೆ..ಇದರ ನಡುವೆ ವತ್ಸಲ ಒಬ್ರು ಉತ್ತಮ ಕವಯತ್ರಿ ಹಾಗೂ ಲೇಖಕಿ.  ಜನನಿ ವತ್ಸಲ ಅನ್ನೋ ಕಾವ್ಯ ನಾಮದಿಂದ  ಕರೆಯಲ್ಪಡುವ  ವತ್ಸಲ ಅವರು ಈಗಾಗಲೇ ಕತ್ತಲ ಜಗದ ಅಲೆಮಾರಿ ಅನ್ನೋ  ಒಂದು ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ. ಇವರ ಈ ಕೆಲಸ ನಿಜಕ್ಕೂ ಈಗಿನ ಯುವ ಪೀಳಿಗೆಗೆ ಮಾದರಿ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.