ಬೆಂಗಳೂರು, ಏ. 18: ರಾಜ್ಯದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ನಡುವೆ, ಕೊರೊನಾ ಲಸಿಕೆಯ ಕೊರತೆ ಇರುವ ಬಗ್ಗೆಯೂ ಸಾಕಷ್ಟು ಆತಂಕ ಮನೆಮಾಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ದೊರೆಯದೆ ರೋಗಿಗಳು ಪರದಾಡಿದ್ದ ಸಂಗತಿಗಳು ಬೆಳಕಿಗೆ ಬಂದಿತ್ತು.
ಈ ಎಲ್ಲಾ ಆತಂಕದ ಬೆನ್ನಲ್ಲೇ ಶನಿವಾರ ರಾತ್ರಿ ರಾಜ್ಯಕ್ಕೆ ಕೊರೊನಾ ಲಸಿಕೆ ತಲುಪಿದ್ದು, ಕಳೆದ ರಾತ್ರಿ 8:30ರ ವೇಳೆಗೆ ರಾಜ್ಯಾದ್ಯಂತ ಒಟ್ಟು 67,18,709 ಡೋಸ್ ಲಸಿಕೆ ವಿತರಿಸಲಾಗಿದ್ದು ಇಂದು ಒಂದೇ ದಿನ 2,31,870 ಡೋಸ್ ಲಸಿಕೆ ವಿತರಿಸಲಾಗಿದೆ. ಅಲ್ಲದೆ ರಾತ್ರಿ 8 ಗಂಟೆ ವೇಳೆಗೆ ಮತ್ತೊಂದು ಕಂತಿನಲ್ಲಿ ಸುಮಾರು 1.4 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಕರ್ನಾಟಕ ತಲುಪಿದೆ.
ಈ ಔಷಧಗಳನ್ನು ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಇಟ್ಟಿರಿವ ಒಟ್ಟು 33 ಆಸ್ಪತ್ರೆಗಳು ರೆಂಡೆಸಿವಿರ್ ಔಷಧ ಪೂರೈಕೆಗೆ ಮಾಡಲಿದ್ದು, ಪ್ರತಿ ಆಸ್ಪತ್ರೆಗೆ 100 ವೈಯಲ್ ಗಳಷ್ಟು ಔಷಧ ಸರಬರಾಜು ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಳಸಂತೆಯಲ್ಲಿ ಔಷಧಿ ಮಾಡುತ್ತಿದ್ದವರ ಬಂಧನ:
ಒಂದೆಡೆ ರಾಜ್ಯದಲ್ಲಿ ಕೊರೊನಾ ಲಸಿಕೆ ದೊರೆಯದೆ ಜನರು ತೊಂದರೆ ಅನುಭವಿಸುತ್ತಿದ್ದರೆ. ಮತ್ತೊಂದೆಡೆ ಕಾಳ ಸಂತೆಯಲ್ಲಿ ಕೊರೊನಾ ಲಸಿಕೆ ಮಾರಾಟ ಆಗುತ್ತಿರುವ ಸಂಗತಿ ಬೆಳಕಿಗೆ ಬಂಧಿದೆ. ಈ ಜಾಲವನ್ನು ಪತ್ತೆಹಚ್ಚಿರುವ ಬೆಂಗಳೂರು ಸಿಸಿಬಿ ಪೊಲೀಸರು, ಕೊವಿಡ್ ಚಿಕಿತ್ಸೆಗೆ ಬೇಕಾಗಿರೋ ರೆಮ್ಡಿಸಿವಿರ್ ಇಂಜೆಕ್ಷನ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ರಾಜೇಶ್, ಶಕೀಬ್ ಹಾಗೂ ಸೋಹೆಲ್ ಬಂಧಿತರಾಗಿದ್ದು, ಇವರುಗಳು
JUBI-R ಇಂಜೆಕ್ಷನ್ ಅನ್ನು 10,500 ರೂ.ಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.