Mangalore : ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಮಂಗಳೂರಿನ ಡಾ.ನರೇಂದ್ರ ನಾಯಕ್ (Dr. Narendra Naik) ಅವರು ಈ ಬಾರಿಯೂ ವಿಧಾನಸಭೆ ಚುನಾವಣಾ ಫಲಿತಾಂಶದ ವಿಚಾರದಲ್ಲಿ (10 lakhs for astrologers reward) ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನದ ಸವಾಲು ಒಡ್ಡಿದ್ದಾರೆ.

ನರೇಂದ್ರ ನಾಯಕ್ ಅವರ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ನಿಖರ ಉತ್ತರ ಕೊಟ್ಟ ಜ್ಯೋತಿಷಿಗೆ ಭರ್ಜರಿ ಬಹುಮಾನ (10 lakhs for astrologers reward) ನೀಡುವುದಾಗಿ ಚಾಲೆಂಜ್ ಹಾಕಿದ್ದಾರೆ.
ನರೇಂದ್ರ ನಾಯಕ್ ಅವರು ಕೇಳಿದ ಪ್ರಶ್ನೆಗಳು ಇಂತಿವೆ.
ಯಾವ ಪಕ್ಷ ಕರ್ನಾಟಕದಲ್ಲಿ ಸರಕಾರ ರಚಿಸುತ್ತದೆ?
ನಾವು ಕೇಳುವ 20 ಪ್ರಶ್ನೆಗಳಿಗೆ ಸರಿಯಾದ ಉತ್ತರ ಉತ್ತರಿಸಬೇಕು. ಎಲ್ಲ ಪ್ರಶೆಗಳಿಗೆ ಉತ್ತರಿಸಿದವರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು.
ಕಾಂಗ್ರೆಸ್ (Congress), ಬಿಜೆಪಿ (BJP), ಜೆಡಿಎಸ್ (JDS) ಒಟ್ಟು ಎಷ್ಟು ಸೀಟು ಗೆಲ್ಲುತ್ತವೆ?
ಪಕ್ಷೇತರರು ಎಷ್ಟು ಸೀಟ್ ಗೆಲ್ಲುತ್ತಾರೆ?
ಎಷ್ಟು ಜನ ಮಹಿಳಾ ಶಾಸಕರಾಗಿ ಆಯ್ಕೆಯಾಗುತ್ತಾರೆ? ಇಂತಹ ಒಟ್ಟು 20 ಪ್ರಶ್ನೆಗಳಿರುತ್ತವೆ.
ಇವರೆಗೆ ಡಾ.ನಾಯಕ್ ಅವರಿಗೆ ಊಹೆಗಳಿಂದ ಕೇವಲ ಶೇ.40 ಸರಿ ಉತ್ತರವನ್ನಷ್ಟೇ ಒಬ್ಬ ಜ್ಯೋತಿಷಿ ಕಳುಹಿಸಿದ್ದರು.
ಇವರೆಗೆ 450 ಪ್ರತಿಕ್ರಿಯೆ ಬಂದಿದ್ದರೂ ಅದರಲ್ಲಿ ಒಂದೂ ಉತ್ತರ ಕೂಡ ಸರಿ ಇರಲಿಲ್ಲ.
ಇದನ್ನೂ ಓದಿ : https://vijayatimes.com/karavali-district-polling/
ಈ ಸವಾಲಿಗೆ ಕಾರಣವೇನು?
ಇವರ ತಂದೆ ಬ್ಯಾಂಕ್ ಸಾಲಕ್ಕೆ ತಮ್ಮ ಜಾಗವನ್ನು ಅಡವಿಟ್ಟಿದ್ದರು, ಇದನ್ನು ಸಾಲ ಮರುಪಾವತಿಸಿ ಹಿಂಪಡೆಯಲು ಜ್ಯೋತಿಷಿ ಸಲಹೆಯಂತೆ ಲಾಟರಿ ಟಿಕೆಟ್
ಅನ್ನು ಬಹುಮಾನದ ವಿಶ್ವಾಸದೊಂದಿಗೆ ಟಿಕೆಟ್ ಖರೀದಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಾ.ನಾಯಕ್. ಬೇಸತ್ತು 1976ರಲ್ಲಿ ದಕ್ಷಿಣ ಕನ್ನಡ (Dakshina kannada) ವಿಚಾರವಾದಿ ಸಂಘವನ್ನು ಸ್ಥಾಪಿಸಿದ್ದರು.
ದೇಶಾದ್ಯಂತ ಸಂಚರಿಸಿ 2,000 ಪ್ರದರ್ಶನ ನೀಡಿದ್ದಾರೆ ಮತ್ತು ಇವರು ಜನರಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜಿಸಲು ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ.
ಮಂಗಳೂರಿನ ಕಸ್ತೂರಬಾ ವೈದ್ಯಕೀಯ ಕಾಲೇಜಿನ (Kasturaba Medical College) ಜೀವ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತಿ ಹೊಂದಿದ್ದಾರೆ.

25 ಪ್ರಶ್ನೆಗಳ ಸವಾಲನ್ನು 2009 ರಿಂದ ಆರಂಭಿಸಿ 1 ಲಕ್ಷ ರೂ. ಇದ್ದ ಬಹುಮಾನವನ್ನು ಈಗ 10 ಲಕ್ಷ ರೂ.ಗಳಿಗೇರಿಸಿದ್ದಾರೆ ಮತ್ತು ಪ್ರಶ್ನೆಗಳ ಸಂಖ್ಯೆಯನ್ನು 20ಕ್ಕೆ ಇಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ. ನರೇಂದ್ರ ನಾಯಕ್ ರವರು ಜ್ಯೋತಿಷಿಗಳಿಂದ ಜನರು ವಂಚನೆಗೆ ಒಳಗಾಗಬಾರದು.
ವೈಜ್ಞಾನಿಕ ನೆಲೆಯಲ್ಲಿ ಬದುಕು ಕಟ್ಟಿಕೊಂಡು ಭವಿಷ್ಯ ರೂಪಿಸಬೇಕು.ಮಕ್ಕಳು ಮತ್ತು ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ನನ್ನ ಗುರಿಯಾಗಿದೆ. ಜ್ಯೋತಿಷ್ಯವನ್ನೂ ವಿಜ್ಞಾನವೆಂದು ಸಾಬೀತು ಮಾಡಿದರೆ ನಾನು ಒಪ್ಪಲು ತಯಾರಿದ್ದೇನೆ, ಎಂದು ಹೇಳಿದ್ದಾರೆ.
- ರಶ್ಮಿತಾ ಅನೀಶ್