• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

10 ವರ್ಷಗಳ ಹಿಂದೆ ಶತದಿನೋತ್ಸವ ಕಂಡ ಯಶಸ್ವಿ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ

Mohan Shetty by Mohan Shetty
in ಮನರಂಜನೆ
10 ವರ್ಷಗಳ ಹಿಂದೆ ಶತದಿನೋತ್ಸವ ಕಂಡ ಯಶಸ್ವಿ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ
0
SHARES
0
VIEWS
Share on FacebookShare on Twitter

Bengaluru : ಕನ್ನಡ ಚಿತ್ರರಂಗದಲ್ಲಿ (10 Years Back Hit Films) 2012 ರಿಂದ 2022ರ ಸಮಯದಲ್ಲಿ ಬಂದ ಒಂದಷ್ಟು ಸಿನಿಮಾಗಳು ಶತದಿನೋತ್ಸವ ಆಚರಿಸಿದ್ದು, ಎಂದಿಗೂ ಜನ ಮಾನಸದಲ್ಲಿ ಅಜರಾಮರವಾಗಿವೆ.

ಅಂತಹ ಕೆಲವು ಸಿನಿಮಾಗಳ ಬಗ್ಗೆ ಮಾಹಿತಿ (10 Years Back Hit Films) ಇಲ್ಲಿದೆ.

12 years


2012 ರಲ್ಲಿ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ : ಈ ಸಿನಿಮಾವು ಬ್ರಿಟೀಷರ ವಿರುದ್ಧ ಹೋರಾಡಿದ ಭಾರತೀಯ ವೀರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ (Sangoli Rayanna) ಜೀವನಗಾಥೆಯಾಗಿದೆ.

ಬಿಡುಗಡೆಯಾದ ಸಮಯದಲ್ಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವು ಒಂದು ದಾಖಲೆಯನ್ನೇ ಸೃಷ್ಟಿಸಿತ್ತು. ಈ ಚಿತ್ರವು 43 ಕೇಂದ್ರಗಳಲ್ಲಿ ಯಶಸ್ವಿ 100 ದಿನಗಳನ್ನು ಪೂರೈಸಿದ ಚಿತ್ರವಾಗಿ ಹೊರಹೊಮ್ಮಿದೆ.

https://fb.watch/h6D5YOtN1R/ ನೀವು ಸಿಟಿಜನ್ ಜರ್ನಲಿಸ್ಟ್ ಆಗಬಹುದು ; ನಿಮ್ಮ ಊರಿನ ಸುದ್ದಿಯನ್ನು ಈಗ ನೀವೇ ವರದಿ ಮಾಡಿ.


2013 ರಲ್ಲಿ ಬಿಡುಗಡೆಯಾದ ಬುಲ್ಬುಲ್ : ದರ್ಶನ್ (Darshan) ಹಾಗೂ ಅಂಬರೀಶ್ (Ambareesh) ಅಭಿನಯದ ಚಿತ್ರ ಬುಲ್ ಬುಲ್ ಬಾಕ್ಸ್ ಆಫೀಸನ್ನೇ ಕೊಳ್ಳೆ ಹೊಡೆದಿತ್ತು. 12 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರವು,

ಆ ಸಮಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 20 ಕೋಟಿ ರೂಪಾಯಿ ಗಳಿಸಿತ್ತು ಎಂದು ವರದಿಗಳು ಹೇಳುತ್ತವೆ. ಈ ಚಲನಚಿತ್ರವು 2013 ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿತ್ತು.

Kannada Hit


2014 ರಲ್ಲಿ ಬಿಡುಗಡೆಯಾದ ಮಿಸ್ಟರ್ & ಮಿಸ್ಸಸ್ ರಾಮಾಚಾರಿ : ಈ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದ ಯಶ್ (Yash) ಅವರು ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡಿದ್ದರು.

ಯಶ್ ಮತ್ತು ರಾಧಿಕಾ ಪಂಡಿತ್ (Radhika Pandit) ಅವರ ಮನೋಜ್ಞ ಅಭಿನಯವೂ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣವಾಗಿತ್ತು.

ಬಿಡುಗಡೆಯಾದ ಮೊದಲ ದಿನವೇ, ಮೂರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದ ಈ ಸಿನಿಮಾ, ಅಮೀರ್ ಖಾನ್ ಅಭಿನಯದ ‘ಪಿಕೆ’ ಚಿತ್ರದ ಕಲೆಕ್ಷನ್ ಗೂ ಸ್ವಲ್ಪ ಹೊಡೆತ ನೀಡಿತ್ತು.

ಹೌಸ್ ಫುಲ್ ಪ್ರದರ್ಶನದ ಜೊತೆಗೆ ಈ ಸಿನಿಮಾ ಯಶಸ್ವಿ 100 ದಿನಗಳನ್ನು ಪೂರೈಸಿತ್ತು.

UPPI 2


2015 ರಲ್ಲಿ ಬಿಡುಗಡೆಯಾದ ಉಪ್ಪಿ 2 : ಉಪ್ಪಿ 2 ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ (Upendra) ಅವರೇ ಬರೆದು ನಿರ್ದೇಶಿಸಿ ನಾಯಕರಾಗಿ ನಟಿಸಿದ್ದಾರೆ.

ಇದು ಬ್ಲಾಕ್ ಬಸ್ಟರ್ ಹಿಟ್ ಉಪೇಂದ್ರ ಚಿತ್ರದ ಮುಂದುವರಿದ ಭಾಗವಾಗಿದ್ದು, ಈ ಚಿತ್ರದಲ್ಲಿ ಕ್ರಿಸ್ಟಿನಾ ಅಖೀವಾ ನಾಯಕಿಯಾಗಿದ್ದಾರೆ.

ಇದನ್ನೂ ಓದಿ : https://vijayatimes.com/kharge-statement-goes-wrong/

ಉಪ್ಪಿ 2 ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ವಿಮರ್ಶೆಯನ್ನು ಪಡೆದಿದ್ದರೂ, ಉತ್ತಮ ಪ್ರದರ್ಶನ ಕಂಡಿತ್ತು. ಕೆಲವು ಕಡೆ ಶತದಿನೋತ್ಸವವನ್ನು ಆಚರಿಸಿತ್ತು.

Kannada


2016 ರಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ : ಕಿರಿಕ್‌ ಪಾರ್ಟಿ (Kirik Party) ಚಿತ್ರವು ದೊಡ್ಡ ಮಟ್ಟಿನ ಯಶಸ್ಸು ಕಂಡ ಚಿತ್ರವಾಗಿದ್ದು, ಬಿಡುಗಡೆಯಾದ ದಿನವೇ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಚಿತ್ರ.

ಕಿರಿಕ್ ಪಾರ್ಟಿ ಸಿನಿಮಾ 150 ದಿನಗಳನ್ನು ಪೂರೈಸಿ ಯಶಸ್ವಿ ಸಿನಿಮಾ ಎಂದು ಕರೆಯಿಸಿಕೊಂಡಿದ್ದು, ಗಳಿಕೆಯಲ್ಲೂ ದಾಖಲೆ ಬರೆದ ಚಿತ್ರವಾಗಿ ಹೊರಹೊಮ್ಮಿದೆ.


2017 ರಲ್ಲಿ ಬಿಡುಗಡೆಯಾದ ರಾಜಕುಮಾರ : ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ರಾಜಕುಮಾರ’ (Rajakumara) ಸಿನಿಮಾ ಹಲವಾರು ಕಾರಣಗಳಿಂದಾಗಿ ಕನ್ನಡ ಚಿತ್ರರಂಗದ ಒಂದು ಅಪೂರ್ವ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ.

Cinema

ಅಪ್ಪು ಅಗಲಿರುವ ಈ ಸಮಯದಲ್ಲಿ ರಾಜಕುಮಾರ ಚಿತ್ರವನ್ನು ನೋಡಿದರೆ, ಪುನೀತ್ ಜೀವನದಂತೆಯೇ ಆ ಚಿತ್ರವಿತ್ತೇನೋ ಎನ್ನುವ ಭಾವನೆ ಮೂಡುತ್ತದೆ. 2017ರಲ್ಲಿ ತೆರೆಕಂಡ ಈ ಚಿತ್ರ ಬಾಕ್ಸಾಫೀಸ್ನಲ್ಲೂ ಹಲವು ದಾಖಲೆ ಬರೆಯುವ ಜೊತೆಗೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿತ್ತು.

ಇದನ್ನೂ ಓದಿ : https://vijayatimes.com/inspiring-transgender-dr-nakshatra/


2018 ರ ಕೆಜಿಎಫ್ ಚಾಪ್ಟರ್ 1 : ಈ ಸಿನಿಮಾ ತನ್ನ ತವರು ನೆಲದಲ್ಲಿ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ಅನ್ನು ಕೊಳ್ಳೆಹೊಡೆದ ಸಿನಿಮಾ.

ಕೆಜಿಎಫ್ ಸಿನಿಮಾ ಕನ್ನಡದ ಹೊರತಾಗಿ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿಯೂ ಬಿಡುಗಡೆಯಾಗಿತ್ತು.

KGF

ದೊಡ್ಡ ಮಟ್ಟದ ಬಜೆಟ್ ನಲ್ಲಿ ತಯಾರಾದ ಈ ಚಲನಚಿತ್ರವು ಚಿತ್ರರಂಗದ ಅತಿದೊಡ್ಡ ಹಿಟ್ ಆಗಿದ್ದು, 100 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರವಾಗುವ ಮೂಲಕ ಚಿತ್ರರಂಗದಲ್ಲಿ ದಾಖಲೆಯನ್ನೇ ಬರೆದಿದೆ.


2019 ರಲ್ಲಿ ಬಿಡುಗಡೆಯಾದ ಕುರುಕ್ಷೇತ್ರ : ಮುನಿರತ್ನ ಅವರ ಕುರುಕ್ಷೇತ್ರ (Kurukshetra) ಚಿತ್ರ ಘೋಷಣೆಯಾದ ದಿನದಿಂದಲೇ ಅದರ ಮೇಲಿದ್ದ ನಿರೀಕ್ಷೆ ಅಪಾರ. ಬಹುತಾರಾಗಣವಿದ್ದು ಅದ್ದೂರಿ ವೆಚ್ಚದಲ್ಲಿ ತಯಾರಾದ ಈ ಚಿತ್ರವು, ಅದ್ಭುತ ಓಪನಿಂಗ್ ಪಡೆದುಕೊಂಡಿತು.

kannada cinemas

3ಡಿ ಮತ್ತು 2ಡಿ ರೂಪದಲ್ಲಿ ತೆರೆಗೆ ಬಂದಿತ್ತು, ಜೊತೆಗೆ ದುರ್ಯೋಧನನ ಅವತಾರದಲ್ಲಿ ದರ್ಶನ್‌ ಅವರನ್ನು ಕಂಡ ಅಭಿಮಾನಿಗಳು ಖುಷಿಯಾಗಿದ್ದರು. ಈ ಐತಿಹಾಸಿಕ ಚಿತ್ರ ‘ಕುರುಕ್ಷೇತ್ರ’ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು.

https://fb.watch/h5G-if5P6z/ ಬಸವೇಶ್ವರ ನಗರ : ವೃದ್ಧರ ಪಿಂಚಣಿಯನ್ನು ಕಿತ್ತು ತಿನ್ನುವ ಬ್ರೋಕರ್ಗಳು!


2021 ರಲ್ಲಿ ಬಿಡುಗಡೆಯಾದ ರಾಬರ್ಟ್ : 2021 ವರ್ಷದ ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ (Robert) ಚಿತ್ರ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು.

ಹಿಂದಿ ಭಾಷೆಗೆ ಡಬ್ಬಿಂಗ್ ಆದ ಚಿತ್ರ ವೀಕ್ಷಣೆಯಲ್ಲಿ ಕೂಡ ಮೈಲಿಗಲ್ಲನ್ನೇ ಸ್ಥಾಪಿಸಿತ್ತು.

Robert


2022 ರಲ್ಲಿ ಬಿಡುಗಡೆಯಾಗಿ ಸ್ಯಾಂಡಲ್ ವುಡ್ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಕೆಜಿಎಫ್ ಪಾರ್ಟ್-2, ಕಾಂತಾರ, ವಿಕ್ರಾಂತ್ ರೋಣ ಸಿನಿಮಾಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ.

ಇದನ್ನೂ ಓದಿ : https://vijayatimes.com/2-marriage-law-in-africa/

ಕೆಜಿಎಫ್-2 ಭರ್ಜರಿ ಯಶಸ್ಸು ಕಂಡ ನಂತರ, ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಪ್ಯಾನ್-ಇಂಡಿಯಾ ಚಲನಚಿತ್ರವಾಗಿ ಹೊರಹೊಮ್ಮಿ ಅದ್ಭುತ ಯಶಸ್ಸು ಪಡೆದಿತ್ತು.

ಇನ್ನು, ಕಾಂತಾರ ಸಿನಿಮಾವಂತೂ ಇಡೀ ಜಗತ್ತೇ ನಮ್ಮ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಅತ್ಯದ್ಭುತ ಸಿನಿಮಾ.

  • ಪವಿತ್ರ
Tags: 100 DaysKannada CinemasSandalwood

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 27, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.