Kodagu : ನಿಜವಾಗ್ಲೂ ಇದೊಂದು ಆತಂಕಕಾರಿ ಸುದ್ದಿ! ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ 12 ವರ್ಷದ ಬಾಲಕ ಕೀರ್ತನ್(12) ಹೃದಯಾಘಾತದಿಂದ (12 year boy heartattack) ನಿನ್ನೆ ಸಾವನ್ನಪ್ಪಿದ್ದಾನೆ.
ಕೊಪ್ಪ ಭಾರತ ಮಾತಾ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದ ಮಂಜಾಚಾರಿ ಅವರ ಪುತ್ರ ಕೀರ್ತನ್ ಸಾವನ್ನಪ್ಪಿದ ದುರಾದೃಷ್ಟ ಬಾಲಕ.

ಅನಾರೋಗ್ಯದಿಂದ ಬಳಲುತ್ತಿದ್ದ ಕೀರ್ತನ್(Keertan) ನನ್ನು ಶನಿವಾರ ತಡರಾತ್ರಿ (ಜ.08) ಆಸ್ಪತ್ರೆ ಕರೆದೊಯ್ಯವ ವೇಳೆ ದಾರಿಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ಚಿಕ್ಕ ಮಕ್ಕಳಲ್ಲಿ ಹೃದಯಾಘಾತ ಸಂಭವಿಸುತ್ತಿರುವ ಘಟನೆ ಹೆಚ್ಚುತ್ತಿದೆ. ಇದು ಹೆತ್ತವರರಲ್ಲೂ ಆತಂಕ ಸೃಷ್ಟಿಸುತ್ತಿದೆ.
ಓದಿ, ಆಡಿ ಬೆಳೆಯೋ ವಯಸ್ಸಲ್ಲಿ ಮಕ್ಕಳು ಸಾವಿನ ಕದತಟ್ಟುತ್ತಿರುವುದು ವೈದ್ಯಲೋಕಕ್ಕೂ ಒಂದು ದೊಡ್ಡ ಸವಾಲಾಗಿದೆ.
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಇತ್ತೀಚೆಗೆ ಮಾತನಾಡಿದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ
ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ (Dr. C. N. Manjunath) ಶೇಕಡಾ 30ರಷ್ಟು ಹೃದಯಾಘಾತವು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸುತ್ತಿದ್ದು,
ಯುವಕರು 10 ರಿಂದ 15 ವರ್ಷಗಳ ಮುಂಚೆಯೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಹೃದಯಾಘಾತದ (12 year boy heartattack) ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಇದ್ದಕ್ಕಿದ್ದಂತೆಯೇ ಅನೇಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.
ಇದನ್ನೂ ಓದಿ : https://vijayatimes.com/honey-singhs-controversy-statement/
ಹಾಗಾಗಿ ಯುವ ಪೀಳಿಗೆ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು? ಹಾಗೂ ತಮ್ಮ ದೈನಂದಿನ ಆರೋಗ್ಯ ತಪಾಸಣೆಗಳನ್ನು ಮಾಡುವಾಗ ಯಾವ ಅಂಶಗಳು ಅನುಸರಿಸಬೇಕು ? ಜೊತೆಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದು ಹೇಗೆ ಬಹಳ ಮುಖ್ಯವಾಗುತ್ತದೆ ಎಂದು ವಿವರಿಸಿದ್ದರು.
ಯುವಕರಲ್ಲಿ ಹೃದಯಾಘಾತದ ಹೆಚ್ಚಳದ ಅಧ್ಯಯನವನ್ನು ಉಲ್ಲೇಖಿಸಿ ಮಾತನಾಡಿದ ಡಾ. ಮಂಜುನಾಥ್(Dr. Manjunath), ಪ್ರತಿಶತ 50 ರಷ್ಟು ಧೂಮಪಾನಿಗಳಲ್ಲಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಕುಟುಂಬದ ಇತಿಹಾಸ ಹೊಂದಿರುವ 16 ಪ್ರತಿಶತದಷ್ಟು ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ.

ಹೃದಯಾಘಾತವು ಜೀವನದ ಒತ್ತಡದಿಂದ ಇರಬಹುವುದು ಅಥವಾ ಹೆಚ್ಚಿನ ನಿರೀಕ್ಷೆಗಳಿಂದಿರಬಹುದು, ತ್ವರಿತ ಸಮಯದಲ್ಲಿ ಯಶಸ್ಸನ್ನು ಸಾಧಿಸುವ ಕಾರಣದಿಂದಾಗಿರಬಹುದು. ಶೇ.70ರಷ್ಟು ಹೃದಯಾಘಾತಗಳು ಕೆಟ್ಟ ಜೀವನಶೈಲಿಯಿಂದ ಉಂಟಾದರೆ, ಇನ್ನೂ ಶೇ.30ರಷ್ಟು ಒತ್ತಡದಿಂದ ಉಂಟಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ : https://vijayatimes.com/sania-mirza-retirement-from-tennis/
ಹೃದಯಾಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು 30 ನಿಮಿಷಗಳಷ್ಟು ವಿಳಂಬ ಮಾಡಿದರೆ ಸಾವಿನ ಸಾಧ್ಯತೆಯು ಪ್ರತಿಶತ 7 ರಷ್ಟು ಹೆಚ್ಚಿಸುತ್ತದೆ.
ಹೃದಯಾಘಾತದ ರೋಗಲಕ್ಷಣಗಳ ಕಂಡುಬಂದಾಗ ವೈದ್ಯಕೀಯ ಸಂಪರ್ಕಕ್ಕೆ 60 ನಿಮಿಷಗಳಿಗಿಂತ ಹೆಚ್ಚು ಸಮಯ ಹಾದುಹೋಗದಂತೆ “ಗೋಲ್ಡನ್ ಅವರ್”(Golden hour) ಚಿಕಿತ್ಸೆ ನೀಡಬೇಕಾಗುತ್ತದೆ. ಇಂತಹ ಕಾರಣದಿಂಮಾಗಿಯೇ ಹೃದಯಾಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ವಿಳಂಬ ಮಾಡಬಾರದು ಎಂದು ಡಾ.ಮಂಜುನಾಥ್ ಎಚ್ಚರಿಕೆ ನೀಡಿದರು
- ಪಂಕಜಾ.ಎಸ್