ಉತ್ತರ ಪ್ರದೇಶದಲ್ಲಿ 3ನೇ ಹಂತದ ಚುನಾವಣೆ ಫೆ20 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ಮತ್ತು ಅಪರಾಧ ಪ್ರಕರಣಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ 245 ಮಂದಿ ಕೋಟ್ಯಧಿಪತಿಗಳಿದ್ದು ಹಾಗೆ 135 ಮಂದಿ ಅಪರಾಧ ಪ್ರಕರಣದಲ್ಲಿದ್ದಾರೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದನ್ನು ಗಮನಿಸಿದರೆ ನಮ್ಮ ಚುನಾವಣೆಯಲ್ಲಿ ಹಣಬಲದ ಪಾತ್ರ ಸ್ಪಷ್ಟವಾಗಿದೆ. ಪ್ರಮುಖ ಪಕ್ಷಗಳ ಪೈಕಿ ಎಸ್ಪಿಯ 58 ಅಭ್ಯರ್ಥಿಗಳಲ್ಲಿ 52 (90%) ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

ಬಿಜೆಪಿಯಿಂದ 55 ಅಭ್ಯರ್ಥಿಗಳಲ್ಲಿ 48 (87%), BSPಯ 59 ಅಭ್ಯರ್ಥಿಗಳಲ್ಲಿ 46 (78%), INCಯ 56 ಅಭ್ಯರ್ಥಿಗಳಲ್ಲಿ 29 (52%) ಮತ್ತು AAP ನ 49 ಅಭ್ಯರ್ಥಿಗಳಲ್ಲಿ 18 (37%) ಅಭ್ಯರ್ಥಿಗಳು 1 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಸರಾಸರಿ ಆಸ್ತಿ: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ 2022 ಹಂತ III ರಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ 2.82 ಕೋಟಿ ರೂ. ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ. ಪಕ್ಷವಾರು ಸರಾಸರಿ ಆಸ್ತಿ: ಪ್ರಮುಖ ಪಕ್ಷಗಳಲ್ಲಿ, 58 ಎಸ್ಪಿ ಅಭ್ಯರ್ಥಿಗಳುರೂ. 9.19 ಕೋಟಿ ರೂ ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ. ಬಿಜೆಪಿಯ 55 ಅಭ್ಯರ್ಥಿಗಳು 6.74 ಕೋಟಿ ರೂ., 56 INC ಅಭ್ಯರ್ಥಿಗಳ 4.60 ಕೋಟಿ ರೂ., 59 BSP ಅಭ್ಯರ್ಥಿಗಳ 4.28 ಕೋಟಿ ಮತ್ತು 49 AAP ಅಭ್ಯರ್ಥಿಗಳ 1.31 ಕೋಟಿ ರೂ. ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ.

ಎಸ್ಪಿಯ 58 ಅಭ್ಯರ್ಥಿಗಳಲ್ಲಿ 30 (52%) ಅಭ್ಯಾರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಬಿಜೆಪಿಯ 55 ಅಭ್ಯರ್ಥಿಗಳಲ್ಲಿ 25 (46%) ಅಭ್ಯಾರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. BSP ಯ 59 ಅಭ್ಯರ್ಥಿಗಳಲ್ಲಿ 23 (39%), INCಯ 56 ಅಭ್ಯರ್ಥಿಗಳಲ್ಲಿ 20 (36%) ಮತ್ತು AAPಯ 49 ಅಭ್ಯರ್ಥಿಗಳಲ್ಲಿ 11 (22%) ತಮ್ಮ ಅಫಿಡವಿಟ್ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.
ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಗಳೆಂದರೆ: SPಯ 58 ಅಭ್ಯರ್ಥಿಗಳಲ್ಲಿ 21 (36%)ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.

ಬಿಜೆಪಿ 55 ಅಭ್ಯರ್ಥಿಗಳಲ್ಲಿ 20 (36%), BSPಯ 59 ಅಭ್ಯರ್ಥಿಗಳಲ್ಲಿ 18 (31%)ಅಭ್ಯರ್ಥಿಗಳು, ಇನ್ನೂ INC ಯಿಂದ 56 ಅಭ್ಯರ್ಥಿಗಳಲ್ಲಿ 10 (18%)ಅಭ್ಯರ್ಥಿಗಳು ಮತ್ತು AAPಯ 49 ಅಭ್ಯರ್ಥಿಗಳಲ್ಲಿ 11 (22%)ಅಭ್ಯರ್ಥಿಗಳು ತಮ್ಮ ಅಫಿಡವಿಟ್ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ. ಇದರಲ್ಲಿ 11 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. 11 ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಇನ್ನೂ ಇಬ್ಬರು ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು (ಐಪಿಸಿ ಸೆಕ್ಷನ್-302) ಘೋಷಿಸಿಕೊಂಡಿದ್ದಾರೆ. ಜೊತೆಗೆ ಇವರಲ್ಲಿ 18 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಯತ್ನಕ್ಕೆ (IPC ಸೆಕ್ಷನ್-307) ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ.