Bengaluru: ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿರುವ 15% ಕಮಿಷನ್ ಆರೋಪದ ವಿಚಾರವನ್ನು ಮುಂದಿಟ್ಟುಕೊಂಡು ಅಸ್ತ್ರ ಪ್ರಯೋಗಕ್ಕೆ ಬಿಜೆಪಿ (15 percentage congress gvt)
ತಯಾರಿ ನಡೆಸಿಕೊಳ್ಳುತ್ತಿದ್ದು, ಕಮಲ ಪಾಳಯದ ತಂತ್ರಕ್ಕೆ ಕಾಂಗ್ರೆಸ್ ಕೂಡಾ ಪ್ರತಿತಂತ್ರ ರೂಪಿಸುತ್ತಿದೆ. ಕಮಲ ಪಾಳಯವು ಪೇ ಸಿಎಂ (Pay CM) ಮಾದರಿಯಲ್ಲಿ ಪೇ ಸಿಎಸ್ ಅಭಿಯಾವನ್ನು
ಕೆಲವು ಕಡೆಗಳಲ್ಲಿ ನಡೆಸಿದ್ದು, ಮುಂದಿನ ದಿನಗಳಲ್ಲಿ ಹೋರಾಟ (15 percentage congress gvt) ರೂಪಿಸಲು ಚಿಂತನೆ ನಡೆಸುತ್ತಿದೆ.

ಕಾಂಗ್ರೆಸ್ (Congress) ವಿರೋಧ ಪಕ್ಷವಾಗಿದ್ದಾಗ ಬಿಜೆಪಿ ವಿರುದ್ಧ 40% ಕಮಿಷನ್ ಅಸ್ತ್ರವನ್ನು ಬಳಕೆ ಮಾಡಿತ್ತು. ಆದರೆ ಚುನಾವಣೆಯಲ್ಲೂ ಇದು ನಿರೀಕ್ಷೆಗೂ ಮೀರಿ ಫಲ ಕೊಟ್ಟಿತ್ತು.
ಇದೀಗ ಕಾಂಗ್ರೆಸ್ ವಿರುದ್ಧವೂ ಗುತ್ತಿಗೆದಾರರ ಒಂದು ಬಣ 15% ಕಮಿಷನ್ ಆರೋಪ ಮಾಡಿದೆ. ಹಳೆ ಬಿಲ್ ಬಾಕಿ ಬಿಡುಗಡೆಗೆ ಕಮಿಷನ್ (Commission) ಬೇಡಿಕೆ ಇಡಲಾಗಿದೆ ಎಂಬ ಆರೋಪ ಇದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ (D.Kempanna) ಕಮಿಷನ್ ಆರೋಪದ ಬಗ್ಗೆ ನಿರಾಕರಣೆ ಮಾಡಿದ್ದು, 25 ಸಾವಿರ ಕೋಟಿ ಬಾಕಿ ಇರುವುದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು
ಎಂದು ಮನವಿ ಮಾಡಿದ್ದಾರೆ. ಆಗಸ್ಟ್ (August) 31 ರ ಒಳಗಾಗಿ ಬಿಡುಗಡೆ ಮಾಡಿಲ್ಲ ಅಂದರೆ ಮುಂದಿನ ಹೋರಾಟ ರೂಪಿಸುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ದತ್ತುಪುತ್ರನಿಗೆ ನೌಕರಿ: ಸರ್ಕಾರಿ ನೌಕರ ಮೃತಪಟ್ಟ ನಂತರ ದತ್ತುಪುತ್ರ ಸರ್ಕಾರಿ ನೌಕರಿಗೆ ಅರ್ಹ, ಹೈಕೋರ್ಟ್ ಆದೇಶ
ತೀವ್ರ ಸ್ವರೂಪದ ಹೋರಾಟವನ್ನು ರೂಪಿಸಲು ಬಿಜೆಪಿಯು ಸಚಿವ ಚೆಲುವರಾಯ ಸ್ವಾಮಿ (Cheluvarayaswamy) ಅವರ ಮೇಲೆ ಕೇಳಿ ಬಂದಿರುವ ಲಂಚದ ಆರೋಪ ಹಾಗೂ ಬಿಬಿಎಂಪಿ
(BBMP) ಗುತ್ತಿಗೆದಾರರು ಮಾಡಿರುವ ಕಮಿಷನ್ ಬೇಡಿಕೆ ಆರೋಪವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಚಿಂತನೆ ನಡೆಸುತ್ತಿದೆ. ಗೋಡೆ ಬರಹ ಅಥವಾ ಪೋಸ್ಟರ್‌ಗಳನ್ನು
(Poster) ಮಾಡುವ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ತಯಾರಿ ನಡೆಯುತ್ತಿದೆ.

ಸದ್ಯಕ್ಕೆ ವಿರೋಧ ಪಕ್ಷದ ನಾಯಕ ಆಯ್ಕೆಕೊನೆಗೊಳ್ಳಲಿದೆ. ಬಿಜೆಪಿಯು (BJP) ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆಯಾದ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ನಡೆಸುವುದು ಇದರ
ತಂತ್ರವಾಗಿದ್ದು, ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಕೈಹಾಕುತ್ತಿದೆ. ಇನ್ನು ಗುತ್ತಿಗೆದಾರರ ಆರೋಪ ಸಹಜವಾಗಿ ಕಾಂಗ್ರೆಸ್‌ಗೆ (Congress) ಮುಜುಗರ ತಂದೊಡ್ಡಿದ್ದು,
ಬಿಜೆಪಿ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗ ಮಾಡುವ ನಿಟ್ಟಿನಲ್ಲಿ ಸರ್ಕಾರವೂ ತಂತ್ರಗಾರಿಕೆ ಮಾಡುತ್ತಿದೆ.
ಈಗಾಗಲೇ ಚೆಲುವರಾಯಸ್ವಾಮಿ ವಿರುದ್ಧದ ಪತ್ರ ಪ್ರಕರಣವನ್ನು ಸಿಐಡಿಗೆ (CID) ಒಪ್ಪಿಸಿದ್ದು, ಇನ್ನು ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರವಾಗಿ ಎಸ್‌ಐಟಿಯನ್ನು (SIT) ರಚನೆ ಮಾಡಲಾಗಿದೆ.
ಈ ಮೂಲಕ ಬಿಜೆಪಿ ಆರೋಪಕ್ಕೆ ಪ್ರತ್ಯುತ್ತರ ನೀಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಭವ್ಯಶ್ರೀ ಆರ್.ಜೆ