Gurugram : ಗುರುಗ್ರಾಮ್‌ನ ಹೌಸಿಂಗ್ ಸೊಸೈಟಿಯ ಐವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಮಂಗಳವಾರ ದೀಪಾವಳಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ 15 ವರ್ಷದ (15 year Old was beaten) ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 15 ರಂದು ಸೆಕ್ಟರ್ 49ರ ಆರ್ಕಿಡ್ ಪೆಟಲ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶದ ರೋಹ್ತಾಶ್, ಭೂಪೇಂದರ್ ಸಿಂಗ್, ರಾಧೇಶ್ಯಾಮ್, ಮಾನ್ ಸಿಂಗ್ ಮತ್ತು ರಾಜಸ್ಥಾನದ ಭರತ್‌ಪುರ ಮೂಲದ ಜಿತೇಂದರ್ ಸಿಂಗ್ ಎಂದು ಗುರುತಿಸಲಾಗಿದೆ .
ಪೊಲೀಸರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ (PTI) ವರದಿ ಮಾಡಿದೆ.
ದೀಪಾವಳಿಯ ಹಬ್ಬದ ಪ್ರಯುಕ್ತ ಜಾತ್ರೆಗೆ ಹೋಗಲು ಬಯಸಿದ ಹುಡುಗನಿಗೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದಲ್ಲದೆ, ನಿಂದಿಸಿ ಕೈಯಲ್ಲಿದ್ದ ದೊಣ್ಣೆಗಳಿಂದ ಥಳಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಬಾಲಾಪರಾಧಿ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : https://vijayatimes.com/3-year-old-lodged-complaint/
ವ್ಯಾಲಿ ವ್ಯೂ ಎಸ್ಟೇಟ್ ಸೊಸೈಟಿಯ ನಿವಾಸಿಯಾಗಿರುವ ಬಾಲಕನ ತಾಯಿ ತನ್ನ ದೂರಿನಲ್ಲಿ ಶನಿವಾರ ರಾತ್ರಿ 7.30ರ ಸುಮಾರಿಗೆ ತನ್ನ ಮಗ ತನ್ನ ಸ್ನೇಹಿತರೊಂದಿಗೆ ಆರ್ಕಿಡ್ ಪೇಟೆಯಲ್ಲಿ ದೀಪಾವಳಿ ಜಾತ್ರೆಯನ್ನು ನೋಡಲು ಮನೆಯಿಂದ ಹೊರಟು ಹೋಗಿದ್ದ ಎಂದು ತಿಳಿಸಿದ್ದಾರೆ.
“ನನ್ನ ಮಗ ಮತ್ತು ಅವನ ಸ್ನೇಹಿತರು ಸೊಸೈಟಿ ಗೇಟ್ ತಲುಪಿದಾಗ, ಭದ್ರತಾ ಸಿಬ್ಬಂದಿ ಮತ್ತು ಕೆಲವು ನಿವಾಸಿಗಳು ಅವನನ್ನು ತಡೆದಿದ್ದಾರೆ.
ನನ್ನ ಮಗ ಮತ್ತು ಅವನ ಸ್ನೇಹಿತರು ಸಿಬ್ಬಂದಿಯನ್ನು ಒಳಗೆ ಹೋಗಲು ಬಿಡುವಂತೆ ವಿನಂತಿಸಿದಾಗ, ಸಿಬ್ಬಂದಿ ಅವರನ್ನು ಮನಬಂದಂತೆ ನಿಂದಿಸಿದ್ದಾರೆ.

ಭದ್ರತಾ ಸಿಬ್ಬಂದಿ ಅವರ ವಿರುದ್ಧ ನನ್ನ ಮಗ ಪ್ರಶ್ನಿಸಿ ಪ್ರತಿಭಟಿಸಿದಾಗ, ಸಿಬ್ಬಂದಿ ಅವನನ್ನು ಮತ್ತು ಅವನ ಸ್ನೇಹಿತರನ್ನು ಥಳಿಸಲು ಪ್ರಾರಂಭಿಸಿದರು.
ಕೆಲವು ಜನರು ನನ್ನ ಮಗನನ್ನು ಕೊಲ್ಲುವುದಾಗಿ ಕೂಡ ಬೆದರಿಕೆ ಹಾಕಿದರು ಎಂದು ಬಾಲಕನ ಪೋಷಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
https://fb.watch/gfhno5NCvv/ ವಿಜಯಪುರ : ಭಾರಿ ಮಳೆಗೆ ತತ್ತರಿಸಿದ ರೈತರ ಜೀವನ!
ಮಂಗಳವಾರ ಪೊಲೀಸರು ಈ ಪ್ರಕರಣದಲ್ಲಿ ಐವರು ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ ಎಂದು ಸೆಕ್ಟರ್ 50 ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಕಾವಲುಗಾರರನ್ನು ಜಾಮೀನಿನ ಮೇಲೆ ಬಿಡಲಾಯಿತು. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ ಎನ್ನಲಾಗಿದೆ.