Trouble for Sadhguru: Police attack on Isha Foundation.
Chennai: ಸದ್ಗುರು ಜಗ್ಗಿ ವಾಸುದೇವ್ (Jaggi Vasudev) ಅವರಿಗೆ ವಿಶ್ವಾದ್ಯಂತ ಲಕ್ಷಾಂತರ ಅನುಯಾಯಿಗಳಿದ್ದಾರೆ. ಸದ್ಗುರು ಅವರ ಆಶ್ರಮದಲ್ಲೂ ನೂರಾರು ಮಂದಿ ನೆಲೆಸಿದ್ದಾರೆ. ಆಧ್ಯಾತ್ಮಿಕ ಗುರುಗಳಾದ ಸದ್ಗುರು ಜಗ್ಗಿ ವಾಸುದೇವ್ ಅವರ ಸ್ವಂತ ಮಗಳೇ ಮದುವೆ ಆಗಿದ್ದಾರೆ. ಆದರೆ, ಸದ್ಗುರು ಅವರ ಆಶ್ರಮದಲ್ಲಿ ಇರುವ ಮಹಿಳೆಯರಿಗೆ ಮಾತ್ರ ತಲೆ ಬೋಳಿಸಿಕೊಂಡು ಪ್ರಾಪಂಚಿಕ ವಿಷಯಗಳಿಂದ ದೂರವಾಗಿ ಸನ್ಯಾಸಿಗಳ ರೀತಿ ಬದುಕಲು ಏಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ (Madras Highcourt) ಪ್ರಶ್ನೆ ಮಾಡಿದೆ.
ಅಷ್ಟಕ್ಕೂ ಕೊಯಮತ್ತೂರಿನಲ್ಲಿ ಇರುವ ತಮಿಳುನಾಡು (Tamilnadu)ಕೃಷಿ ವಿಶ್ವ ವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆದ ಎಸ್. ಕಾಮರಾಜು ಅವರು ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ನ್ಯಾಯಾಲಯದ ಎದುರು ಹಾಜರು ಪಡಿಸುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಎಸ್. ಕಾಮರಾಜು (S Kaamaraju) ಅವರ ಇಬ್ಬರು ಹೆಣ್ಣು ಮಕ್ಕಳು ಕೂಡಾ ನ್ಯಾಯಾಲಯದ ಆದೇಶದ ಅನ್ವಯ ಸೋಮವಾರ ಖುದ್ದು ಹಾಜರಾಗಿದ್ದರು. ಇಬ್ಬರೂ ಮಹಿಳೆಯರು ಈಶಾ ಫೌಂಡೇಷನ್ನಲ್ಲಿ ನೆಲೆಸಿದ್ದಾರೆ.
ತಾವು ತಮ್ಮ ಸ್ವ ಇಚ್ಛೆಯಿಂದ ಈಶಾ ಫೌಂಡೇಷನ್ನಲ್ಲಿ (Isha Foundation) ನೆಲೆಸಿರೋದಾಗಿ ಇಬ್ಬರೂ ಮಹಿಳೆಯರು ಹೇಳಿದ್ದು, ತಮ್ಮನ್ನು ಯಾರೂ ಬಂಧಿಸಿಲ್ಲ ಎಂದು ಹೇಳಿದ್ದಾರೆ. ಇದೀಗ ಈಶಾ ಫೌಂಡೇಷನ್ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಕೊಯಮತ್ತೂರು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ,
ತೊಂಡಮತ್ತೂರ್ನಲ್ಲಿರುವ (Thondamatturu) ಪ್ರತಿಷ್ಠಾನದ ಆಶ್ರಮದ ಮೇಲೆ ಮಂಗಳವಾರ ಸುಮಾರು 150 ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ.ಸನ್ಯಾಸಿನಿಯರಂತೆ ಬದುಕಲು ಯುವತಿಯರನ್ನು ಪ್ರಚೋದಿಸುತ್ತಿರುವುದು ಏಕೆ ಎಂದು ಈಶಾ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಪೊಲೀಸ್ ದಾಳಿ ನಡೆದಿದೆ.