ನವದೆಹಲಿ ಅ 4 : ದೇಶದಾದ್ಯಂತದ 150 ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತದೆ ಮತ್ತು 300 ನಿಲ್ದಾಣಗಳನ್ನು ಹೈಸ್ಪೀಡ್ ಕಾರಿಡಾರ್ಗಳ ಜೊತೆ ಸಂಪರ್ಕಿಸಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ವೈಷ್ಣವ್ ಜೋಧ್‌ಪುರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನನಗೆ ಜವಾಬ್ದಾರಿಗಳನ್ನು ನೀಡಿದ್ದಾರೆ ಮತ್ತು ಪ್ರತಿಯೊಬ್ಬ ಪ್ರಯಾಣಿಕರ ಮುಖದಲ್ಲಿ ನಗು ತರುವಂತೆ ನನ್ನ ತಂದೆ ನನಗೆ ತಿಳಿಸಿದ್ದಾರೆ. ಇಬ್ಬರ ನಿರೀಕ್ಷೆಗಳನ್ನು ತಲುಪಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಇಡೀ ದೇಶದಲ್ಲಿ 150 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು, ಅದರಲ್ಲಿ ರಾಜಸ್ಥಾನದ ಎಂಟು ನಿಲ್ದಾಣಗಳು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು, ಜೈಪುರ, ಗಾಂಧಿನಗರ (ಜೈಪುರ), ಜೋಧ್‌ಪುರ, ಅಜ್ಮೀರ್, ಉದಯಪುರ, ಜೈಸಲ್ಮೇರ್, ಬಿಕನೇರ್ ಮತ್ತು ಅಬು ರಸ್ತೆ (ಸಿರೋಹಿ). ಈ ನಿಲ್ದಾಣಗಳನ್ನು ಅಭಿವೃದ್ದಿಗೊಳಿಸಲಾಗುವುದು ಜೊತೆಗೆ 300 ನಿಲ್ದಾಣಗಳನ್ನು ಹೈಸ್ಪೀಡ್ ಕಾರಿಡಾರ್‌ನೊಂದಿಗೆ ಸಂಪರ್ಕಿಸಲಾಗುವುದು ಜೊತೆಗೆ ರಾಜಸ್ಥಾನದ ಉದಯಪುರ ರೈಲ್ವೆ ನಿಲ್ದಾಣವನ್ನು ಟ್ರಾನ್ಸಿಟ್ ಓರಿಯಂಟೆಡ್ ಡೆವಲಪ್ಮೆಂಟ್ ತತ್ವದಡಿ ಡಿಸೈನ್ ಬಿಲ್ಡ್ ಫಿನಾನ್ಸ್ ಆಪರೇಟ್ ಮಾಡೆಲ್ ರೀತಿಯಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ರೈಲು ಮಾರ್ಗಗಳ ವಿದ್ಯುದೀಕರಣದ ಕೆಲಸವು ತ್ವರಿತಗತಿಯಲ್ಲಿ ಪ್ರಗತಿಯಲ್ಲಿದೆ ಮತ್ತು ಅದನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು