ಕಲಾಪದಿಂದ 18 ಬಿಜೆಪಿ ಶಾಸಕರು ಅಮಾನತು
ಸ್ಪೀಕರ್ ಯುಟಿ ಖಾದರ್ ಗೆ ಅಗೌರವ
6 ತಿಂಗಳು ಕಲಾಪದಿಂದ ಅಮಾನತು
Bangalore:ವಿಧಾನಸಭೆಯಲ್ಲಿ ಗದ್ದಲ ಕೋಲಾಹಲ ಉಂಟುಮಾಡಿ ಸ್ಪೀಕರ್ ಹುದ್ದೆಗೆ ಅಗೌರವ ತೋರಿದ 18 ಬಿಜೆಪಿ ಶಾಸಕರನ್ನು (BJP MLAs) ಸ್ಪೀಕರ್ ಯು.ಟಿ ಖಾದರ್ (Speaker U.T. Khader) ಮುಂದಿನ 6 ತಿಂಗಳವಾರೆಗೆ ಕಲಾಪದಿಂದ (18 BJP MLAs suspended) ಅಮಾನತು ಮಾಡಿದ್ದಾರೆ.
ಬಿಜೆಪಿ ಶಾಸಕರಾದ ಭೈರತಿ ಬಸವರಾಜ (Bhairati Basavaraj), ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರತ್ನ, ಬಿಪಿ ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್, ರಾಮಮೂರ್ತಿ, ದೊಡ್ಡನಗೌಡ ಪಾಟೀಲ್, ಡಾ. ಅಶ್ವತ್ಥ್ ನಾರಾಯಣ (Dr. Ashwath Narayana), ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗರ, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್ಆರ್ ವಿಶ್ವನಾಥ್ ಅವರನ್ನು ಮಾರ್ಷಲ್ ಗಳು ಕಲಾಪದಿಂದ ಹೊರಗೆ ತಂದು ಬಿಟ್ಟಿದ್ದಾರೆ.ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿ ಅಮಾನತುಗೊಳಿಸಿದವರನ್ನು ಹೆಸರು ಹೇಳುತ್ತಿದ್ದಂತೆಯೇ ಮಾರ್ಷಲ್ಸ್ (Marshalls), ಒಬ್ಬೊಬ್ಬರನ್ನೇ ಎತ್ತಿಕೊಂಡು ಬಂದು ಹೊರಹಾಕಿದ್ದಾರೆ.

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (State politics) ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ಹಾಗೂ ಮುಸ್ಲಿಂ ಮೀಸಲಾತಿ (Muslim reservation) ವಿಚಾರಗಳು ವಿಧಾನಸಭೆ ಕಲಾಪದಲ್ಲಿ ಇಂದು ಬೆಳಗ್ಗೆಯಿಂದಲೇ ಭಾರೀ ಹೈಡ್ರಾಮಾಕ್ಕೆ (Hydrama) ಉಂಟಾಗಿದ್ದು, ಸದನ ಶುರುವಾಗುತ್ತಿದ್ದಂತೆಯೇ ಹನಿಟ್ರ್ಯಾಪ್ (Honeytrap) ವಿಚಾರ ಪ್ರಸ್ತಾಪ ಮಾಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಪ್ರತಿಪಕ್ಷ ಪಟ್ಟು ಹಿಡಿಯಿತು. ನಂತರ ಮುಸ್ಲಿಂ ಮೀಸಲಾತಿ ವಿಧೇಯಕದ ಕುರಿತು ಸರ್ಕಾರ ಚರ್ಚೆಗೆ ಮುಂದಾಯಿತು.
ಇದನ್ನೂ ಓದಿ: ತಮಿಳುನಾಡಿನಲ್ಲಿ ಅಮೆಜಾನ್ , ಫ್ಲಿಪ್ಕಾರ್ಟ್ ಗೋದಾಮುಗಳ ಮೇಲೆ ದಾಳಿ: 3, 600ಕ್ಕೂ ಹೆಚ್ಚು ನಕಲಿ ವಸ್ತುಗಳ ವಶ
ಇದೇ ವೇಳೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ (Speaker) ಮೇಲೆ ಎಸೆಯುತ್ತಾ, ‘ಹನಿಟ್ರ್ಯಾಪ್ ಸರ್ಕಾರ’ (‘Honeytrap government’) ಎಂದು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಸ್ಪೀಕರ್ ಸಹ ಶಾಸಕರು ತಾಳ್ಮೆ ವಹಿಸುವಂತೆ, ಕಲಾಪಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಿದರು.
ಆದರೂ ಸಹ ವಿಪಕ್ಷ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ಸ್ಪೀಕರ್ 18 ಬಿಜೆಪಿ (18 BJP MLAs suspended) ಸದಸ್ಯರನ್ನು 6 ತಿಂಗಳು ಕಲಾಪದಿಂದ ಅಮಾನತುಗೊಳಿಸಿ ರೂಲಿಂಗ್ ಹೊರಡಿಸಿದರು.