Visit Channel

ಪ್ರಿಯಾಂಕಾ ಉಪೇಂದ್ರ ಟ್ರೇಲರ್ ಗೆ ಕಿಚ್ಚನ ಶುಭಾಶಯ

WhatsApp Image 2021-09-20 at 1.52.34 PM

ಪ್ರಿಯಾಂಕ ಉಪೇಂದ್ರ ‘1980’ ಚಿತ್ರದ ಟ್ರೇಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಂದ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಮಾಡಿದ್ದ ಸುದೀಪ್, ,‌ಈ ಚಿತ್ರದ ಬಿಡುಗಡೆ ವೇಳೆಗೆ ಈಗಿರುವ ಸಂಕಷ್ಟದ ಪರಿಸ್ಥಿತಿ ದೂರವಾಗಿ, ಜನರಿಂದ ‌ಚಿತ್ರಮಂದಿರ ತುಂಬಿ ತುಳುಕುವಂತಾಗಲಿ ಎಂದು ಶುಭ ಕೋರಿದರು.

ಪ್ರಿಯಾಂಕಾ ಪತಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. “ವಿಭಿನ್ನ ಕಥೆಯಿಟ್ಟುಕೊಂಡು, ನಿರ್ದೇಶಕರು ಹೊಸತನ್ನು ಹೇಳ ಹೊರಟ್ಟಿದ್ದಾರೆ. ಚಿತ್ರ ‘ನಮ್ಮ ಫ್ಲಿಕ್ಸ್’ನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹರಸಿ” ಎಂದರು ಉಪೇಂದ್ರ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಧನ್ಯವಾದ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಪ್ಯಾರಲಲ್ ಯುನಿವರ್ಸಲ್ ನ ಈ ಕಥಾಹಂದರ ನೋಡುಗರ ಮನ ಗೆಲ್ಲಲಿದೆ. ಚಿತ್ರೀಕರಣದ ವೇಳೆ ಲಾಕ್ ಡೌನ್ ಮುಂತಾದ ಸಮಸ್ಯೆ ಎದುರಾದವು. ಇಲ್ಲದಿದ್ದರೆ ಕಳೆದ ಮೇನಲ್ಲಿ ಈ ಚಿತ್ರ ತೆರೆಗೆ ಬರಬೇಕಿತ್ತು. ಇದೇ ಅಕ್ಟೋಬರ್ 15ಕ್ಕೆ ಚಿತ್ರ ನಮ್ಮ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಎಂದರು ಪ್ರಿಯಾಂಕ ಉಪೇಂದ್ರ.

ನನ್ನ ಈ ಕಥೆಗೆ ಕೆಲವು ಇಂಗ್ಲೀಷ್ ಸಿನಿಮಾಗಳು ಸ್ಪೂರ್ತಿ ಎನ್ನಬಹುದು. ಪ್ಯಾರಲಲ್ ಯುನಿವರ್ಸಲ್ ಕಥೆ ಆಧಾರಿತ ಚಿತ್ರ ನನಗೆ ತಿಳಿದ ಮಟ್ಟಿಗೆ ಇದೇ ಮೊದಲು ಎನ್ನಬಹುದು. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂಬ ಭರವಸೆ ಇದೆ. ಎಲ್ಲರ ಹಾರೈಕೆ ಇರಲಿ ಎನ್ನುವುದು ನಿರ್ದೇಶಕ ರಾಜ್ ಕಿರಣ್ ಅವರ ಮಾತು. ನವನಟ ನಿರಂಜನ್ ಸುಧೀಂದ್ರ, ನಿರ್ಮಾಪಕ ಜಾಕ್ ಮಂಜು, ನಮ್ಮ ಫ್ಲಿಕ್ಸ್ ನ ವಿಜಯ ಕುಮಾರ್ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಈ ಚಿತ್ರವನ್ನು ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾಶ್ರೀ ಹಾಗೂ ಸ್ವಾಮಿರಾಜ್ ನಿರ್ಮಿಸಿದ್ದಾರೆ.
ಈ ಚಿತ್ರದ ಬಹುತೇಕ ಚಿತ್ರೀಕರಣ ಶನಿವಾರಸಂತೆಯ ಬಳಿ ನಡೆದಿದೆ.
ರಾಜ್ ಕಿರಣ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಪ್ರಿಯಾಂಕ ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಮುಂತಾದವರಿದ್ದಾರೆ. ಚಿಂತನ್ ವಿಕಾಸ್ ಸಂಗೀತ ನಿರ್ದೇಶನ, ಜೀವನ್ ಅಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನ 1980 ಚಿತ್ರಕ್ಕಿದೆ.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.