Navaratri: ನವರಾತ್ರಿ ಹಿಂದೂಗಳ ಪವಿತ್ರ ಆಚರಣೆಗಳಲ್ಲಿ ಒಂದು. ದುಷ್ಟರನ್ನು ಶಿಕ್ಷಿಸಿ ,ಶಿಷ್ಟರನ್ನು ರಕ್ಷಿಸುವುದು ಈ ಹಬ್ಬದ ಆಚರಣೆಯ ಸಂಕೇತ. ಈ ಹಬ್ಬವನ್ನು 9 ಪವಿತ್ರ ದಿನಗಳಲ್ಲಿ (9 Days) ಆಚರಿಸಲಾಗುತ್ತದೆ.

ಈ ಹಬ್ಬವು ದುರ್ಗಾದೇವಿಯ 9 (Durgadevi) ಅವತಾರಗಳನ್ನು ಪ್ರತಿನಿಧಿಸುತ್ತದೆ, ಮತ್ತು ಪ್ರತಿದಿನವೂ ಒಂದೊಂದು (1st Day) ಮಹತ್ವವನ್ನು ಹೊಂದಿದೆ.
ದುರ್ಗೆಯ 9 ಅವತಾರಗಳಲ್ಲಿ ಮೊದಲನೆಯ ಅವತಾರ ಶೈಲಪುತ್ರಿ (Shailputri) ಅವತಾರ.ಮತ್ತು ಈ ದಿನದ ವಿಶೇಷ ಬಣ್ಣ ಹಳದಿ,ಈ ವರ್ಣವು ಸಂತೋಷ ಸಂಭ್ರಮದ ಪ್ರತೀಕವಾಗಿದೆ.
https://vijayatimes.com/most-expensive-house-in-dubai/
ಶೈಲಪುತ್ರಿ ಎಂದರೆ ಶೈಲ ಎಂದರೆ ಪರ್ವತ,ಪುತ್ರಿ ಎಂದರೆ ಮಗಳು ಎಂದರ್ಥ,ಪರ್ವತನ ಮಗಳೇ ಶೈಲಪುತ್ರಿ.
ದುರ್ಗಾದೇವಿಯ ಅವತಾರವಾದಂತಹ ಶೈಲಪುತ್ರಿಗೆ ಭವಾನಿ,ಪಾರ್ವತಿ, ಹೇಮಾವತಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
ನವರಾತ್ರಿಯ ಮೊದಲ ದಿನದ (1st day) ಕಥೆ- ದೇವಿ ಶೈಲಪುತ್ರಿ
ಹಿಮವಂತನ ಪುತ್ರಿಯಾಗಿ ಜನಿಸಿದ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ,ಈ ದೇವಿಯ ವಾಹನ ವೃಷಭ ವಾಹನ.
ಪೂರ್ವದಲ್ಲಿ ಮೇನಕ ಹಾಗೂ ಹಿಮವಂತರಿಗೆ ಬ್ರಹ್ಮನ ವರದಿಂದಾಗಿ ಮೈನಾಕನು ಎಂಬ ಪರ್ವತ ರಾಜನು ಜನಿಸುತ್ತಾನೆ.ಆದರೆ ಈ ಮೈನಾಕನು ಇಂದ್ರನ ವಜ್ರಾಯುಧಕ್ಕೆ ಭಯಪಟ್ಟು ಸಮುದ್ರ ಗರ್ಭದಲ್ಲಿ ಅವಿತುಕೊಂಡಿರುತ್ತಾನೆ.
https://vijayatimes.com/russia-replies-to-narendra-modi/
ಪುತ್ರ ವಿಯೋಗವನ್ನು ಭರಿಸದ ಮೇನಕ ಮತ್ತು ಹಿಮವಂತ (Himavanta) ದಂಪತಿಗಳು ಮತ್ತೆ ಸಂತಾನ ಪಡೆಯಲು ಆ ಆದಿಶಕ್ತಿಯಾದ ಜಗನ್ಮಾತೆಯು ತಮ್ಮ ಮಗುವಾಗಿ ಹುಟ್ಟಬೇಕು ಎಂದು ಬೇಡಿಕೊಳ್ಳುತ್ತಾರೆ.
ಅವರ ಭಕ್ತಿಗೆ, ತಪಸ್ಸಿಗೆ ಮೆಚ್ಚಿ ಆದಿ ಪರಾಶಕ್ತಿಯು ಅವರ ಮಗಳಾಗಿ ಬರುವುದಾಗಿ ವರವನ್ನು ಕೊಡುತ್ತಾರೆ.ಕೊಟ್ಟ ವರದಂತೆ ತಾಯಿ ಜಗನ್ಮಾತೆ ಜನಿಸುತ್ತಾರೆ.
ಇವರು ಬಾಲ್ಯದಿಂದಲೂ ಆ ಪರಮೇಶ್ವರನನ್ನು ಆರಾಧಿಸುತ್ತಾ ಆತನನ್ನು ತನ್ನ ಪತಿಯಾಗಿ ಪಡೆಯಬೇಕೆಂದು ಧ್ಯಾನಿಸುತ್ತಾ ಬೆಳೆಯುತ್ತಾರೆ.

ಯುಕ್ತ ವಯಸ್ಸಿಗೆ ಬಂದ ನಂತರ ನಾರದ ಮಹರ್ಷಿಗಳು ಹಿಮವಂತನ ಬಳಿ ಬಂದು ಈಕೆ ಈಶ್ವರನ ಪತ್ನಿಯಾಗಲು ಅವತರಿಸಿದ್ದಾಳೆಂದು ಆಕೆಯ ಪೂರ್ತಿ ವೃದ್ದಾಂತವನ್ನು ಹಿಮವಂತನಿಗೆ ವಿವರಿಸುತ್ತಾರೆ.
ಪಾರ್ವತಿ ದೇವಿ (Parvathi Devi) ಮಾಡುತ್ತಿದ್ದಂತಹ ಪರಿಕಾರಗಳನ್ನು ಗಮನಿಸಿ,ಆಕೆಯ ಭಕ್ತಿಯನ್ನು ಮೆಚ್ಚಿ ಈಶ್ವರ ದೇವರು ಸಂತೋಷ ಪಡುತ್ತಾರೆ.
ಕೆಲವು ಕಾಲದ ನಂತರ ಪಾರ್ವತಿ ಪರಮೇಶ್ವರರ ಕಲ್ಯಾಣ ಮಹೋತ್ಸವವು ಸಪ್ತ ಋಷಿಗಳು,ಬ್ರಹ್ಮ,ವಿಷ್ಣು,ದೇವೆಂದ್ರರ ಸಮ್ಮುಖದಲ್ಲಿ ನಾರದ ಮುನಿಗಳ ಪರಿವೀಕ್ಷಣೆಯಲ್ಲಿ ವೈಭವದಿಂದ ಜರುಗಿಸಲಾಗುತ್ತದೆ.
ಈ ವಿಧವಾಗಿ ಶೈಲಪುತ್ರಿಯನ್ನು ಶಿವನು ಪರಿಗ್ರಹಿಸುತ್ತಾನೆ.ಇದು ಶೈಲಪುತ್ರಿಯ ವಿಶಿಷ್ಟ.
- ರಶ್ಮಿತಾ ಕೋಟ್ಯಾನ್