ಚೀನಾದಲ್ಲಿ ಪತ್ತೆ ಆಗಿರುವ HMPV ವೈರಸ್ ನಮ್ಮ ರಾಜ್ಯಕ್ಕೂ ಲಗ್ಗೆ ಇಟ್ಟಿದೆ. ರಾಜ್ಯದ ಇಬ್ಬರು ಮಕ್ಕಳಲ್ಲಿ HMPV ವೈರಸ್ (HMPV virus) ಪತ್ತೆ ಆಗಿದೆ. ಹಾಗೂ ಹೈದರಾಬಾದ್‌ನಲ್ಲಿ (Hyderabad) 2 ತಿಂಗಳ ಮಗುವಿಗೆ ಹೆಚ್‌ಎಂಪಿವಿ ಸೋಂಕು ಪತ್ತೆ ಆಗಿದೆ. ಈ ಮೂಲಕ ಭಾರತದಲ್ಲಿ ಮೂರು ಹೆಚ್‌ಎಂಪಿವಿ ಸೋಂಕು (HMPV infection) ಪತ್ತೆ ಆಗಿದೆ. ತಿಂಗಳ ಹೆಣ್ಣುಮಗು ಹಾಗೂ 8 ವರ್ಷದ ಗಂಡು ಮಗುವಿನಲ್ಲಿ ಈ ವೈರಸ್ ಪತ್ತೆ ಆಗಿದೆ. ಈ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (Indian Council of Medical Research) ಮಾಹಿತಿ ನೀಡಿದೆ.

ಇನ್ನು 3 ತಿಂಗಳ ಹೆಣ್ಣು ಮಗು, 8 ವರ್ಷದ ಗಂಡು ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆ ಆಗಿದ್ದು, ತಿಂಗಳ ಹೆಣ್ಣು ಮಗುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಅದ್ರಲ್ಲಿ 8 ವರ್ಷದ ಮಗುವಿಗೆ ಜನವರಿ 3 ರಂದು ಸೋಂಕು ಪತ್ತೆ ಆಗಿದೆ. ಆ ಮಗು ಬೆಂಗಳೂರಿನ ಬಾಪ್ಟಿಸ್ಟ್ ಆಸ್ಪತ್ರೆಯಲ್ಲಿ (Baptist Hospital, Bangalore) ಚಿಕಿತ್ಸೆ ಪಡೆಯುತ್ತಿದೆ. ಈ ಇಬ್ಬರು ಮಕ್ಕಳಿಗೂ ಕೂಡ ಅಂತಾರಾಷ್ಟ್ರೀಯ ಪ್ರಯಾಣದ (International travel) ಇತಿಹಾಸ ಇಲ್ಲ.ಆದ್ರೂ ಕೂಡ ಸೋಂಕು ಪತ್ತೆ ಆಗಿದೆ.
ಈ ಮಕ್ಕಳಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಆದ್ರೂ ಕೂಡ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಪೋಷಕರಲ್ಲಿ ಆತಂಕ ತಂದಿದೆ. ಈ ವಿಚಾರ ತಿಳೀತಾ ಇದ್ದಂತೆಯೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundurao) ತುರ್ತು ಸಭೆ ಕರೆದಿದ್ದಾರೆ. ಆರೋಗ್ಯಾಧಿಕಾರಿಗಳ (Health Officers) ಜೊತೆ ಸಭೆ ನಡೆಸಿದ ದಿನೇಶ್ ಗುಂಡೂರಾವ್ ತುರ್ತಾಗಿ ಕ್ರಮ ಕೈಗೊಳ್ಳಲು ಹೇಳಿದ್ದಾರೆ.

ಈ ವೈರಸ್ ಮಕ್ಕಳಿಗೆ ತಗುಲಿರೋದ್ರ ಬಗ್ಗೆ ಪ್ರತಿಕ್ರಿಯೆ ನೀಡಿರೋ ದಿನೇಶ್ ಗುಂಡೂರಾವ್ (Dinesh Gundurao), ಆಸ್ಪತ್ರೆಗೆ ದಾಖಲಾಗಿರುವ 8 ವರ್ಷದ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ, ಆರಾಮವಾಗಿದೆ. ಇದು ಹಳೆಯ ವೈರೆಸ್, ಸಹಜ ಎಚ್ಚರಿಕೆ ವಹಿಸಬೇಕಿದೆ ಎಂದಿದ್ದರು. ಇದೀಗ ಐಸಿಎಂಆರ್ (ICMR) ಇಬ್ಬರು ಮಕ್ಕಳಲ್ಲಿ HMPV ವೈರಸ್ ಇದೆ. ಹೀಗಾಗಿ ತುರ್ತು ಸಭೆ ಕರೆದಿದ್ದೇವೆ ಮುಂಜಾಗೃತ ಕ್ರಮ (Precautionary action) ನಾವು ಕೈಗೊಳ್ಳುತ್ತೇವೆ ಅಂದಿದ್ದಾರೆ.
ಇನ್ನು ಮೂರು ಪ್ರಕರಣಗಳು ದಾಖಲಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದೆ. ಹೆಚ್‌ಎಂಪಿವಿ ಜೊತೆ ವಿಶ್ವದಲ್ಲಿ ಉಸಿರಾಟ ಸಮಸ್ಯೆಗಳ (Breathing problems) ಕೇಸ್ ಹೆಚ್ಚಾಗುತ್ತಿವೆ. ಈಗಾಗಲೇ ಬೇರೆ ಬೇರೆ ದೇಶಗಳಲ್ಲೂ ವೈರಸ್ ಪತ್ತೆಯಾಗಿದೆ. ಆದ್ರೆ ಭಾರತದಲ್ಲಿ ಉಸಿರಾಟದ ಸಮಸ್ಯೆಗಳು ಅಷ್ಟೊಂದು ಏರಿಕೆ ಕಂಡು ಬಂದಿಲ್ಲ. ಈ ವೈರಸ್ ಬಗ್ಗೆ ಹೆಚ್ಚು ಆತಂಕ ಪಡುವುದು ಬೇಡ, ಜಾಗೃತರಾಗಿರುವಂತೆ ಹೇಳಿದೆ.