2 ಮಿಲಿಯನ್ ಭಾರತೀಯರ ವಾಟ್ಸಾಪ್ ಖಾತೆ ನಿಷೇಧ

ನವದೆಹಲಿ ಡಿ 2 : 2021ರ ಹೊಸ ಐಟಿ ನಿಯಮಗಳ ಅನುಸಾರ ಅಕ್ಟೋಬರ್ ತಿಂಗಳಿನಲ್ಲಿ 2 ಮಿಲಿಯನ್’ಗೂ ಅಧಿಕ ಭಾರತೀಯರ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್‌ನ್ನು ನಿಯಂತ್ರಿಸುತ್ತಿರುವ ಮೆಟಾ ಕಂಪನಿ ಹೇಳಿದೆ.

ವಾಟ್ಸಾಪ್ ಸಂಬಂಧ 500 ಕುಂದು ಕೊರತೆಗಳ ದೂರನ್ನು ಕಂಪನಿಯು ಸ್ವೀಕರಿಸಿದ್ದು, ಇದರಲ್ಲಿ 18 ದೂರುಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯು ಹೇಳಿದೆ.

ಫೇಸ್’ಬುಕ್, ವಾಟ್ಸಾಪ್ ಹಾಗೂ ಇನ್ಸಾಗ್ರಾಮ್ ಅನ್ನು ಒಳಗೊಂಡ ಅಪ್ಲಿಕೇಶನ್’ಗಳ ಮಾತೃ ಸಂಸ್ಥೆಯಾದ ಮೆಟಾ, ಬಳಕೆದಾರರ ಡೇಟಾ ಗೌಪ್ಯತೆಯ ಬಗ್ಗೆ ತೀವ್ರ ಪರಿಶೀಲನೆಯನ್ನು ಎದುರಿಸುತ್ತಿದೆ. ಹೀಗಾಗಿ ಈ ಮೂರು ಪ್ರಮುಖ ಅಪ್ಲಿಕೇಶನ್ ಗಳಲ್ಲಿದ್ದ 21.8 ದಶಲಕ್ಷಕ್ಕೂ ಹೆಚ್ಚು ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಿರುವುದಾಗಿ ಕಂಪನಿಯ ವಕ್ತಾರರು ಹೇಳಿದ್ದಾರೆ.

ಮೇ ತಿಂಗಳಲ್ಲಿ ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ 5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ವೇದಿಕೆಗಳು, ತಾವು ಸ್ವೀಕರಿಸಿದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮದ ವರದಿಗಳನ್ನು ಪ್ರತಿ ತಿಂಗಳು ಪ್ರಕಟಿಸಬೇಕಾಗಿದೆ.

‘ಐಟಿ ನಿಯಮ-2021ರ ಅನುಸಾರ, ಅಕ್ಟೋಬರ್ ತಿಂಗಳ ಐದನೇ ಮಾಸಿಕ ವರದಿಯನ್ನು ಪ್ರಕಟಿಸಿದ್ದೇವೆ. ಈ ಬಳಕೆದಾರ ಸುರಕ್ಷತಾ ವರದಿಯು, ಬಳಕೆದಾರರ ದೂರುಗಳ ವಿವರಗಳು ಮತ್ತು ಕಂಪನಿಯು ತೆಗೆದುಕೊಂಡ ಸಂಬಂಧಿತ ಕ್ರಮದ ವಿವರಗಳನ್ನು ಮತ್ತು ವಾಟ್ಸಾಪ್ ವೇದಿಕೆಯ ದುರುಪಯೋಗವನ್ನು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ’ ಎಂದು ಕಂಪನಿ ತಿಳಿಸಿದೆ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.