ಜಮ್ಮು ಮತ್ತು ಕಾಶ್ಮೀರದ(terrorists gunned down) ರಾಜೌರಿಯಲ್ಲಿ ಗುರುವಾರ ಮುಂಜಾನೆ ಇಬ್ಬರು ಉಗ್ರರು ಸೇನಾ ಶಿಬಿರವೊಂದಕ್ಕೆ ನುಸುಳಲು ಪ್ರಯತ್ನಿಸಿದ ವೇಳೆ ನಡೆದ ಕಾಳಗದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಇಬ್ಬರೂ ಭಯೋತ್ಪಾದಕರನ್ನು ಎನ್ಕೌಂಟರ್ನಲ್ಲಿ ಹತ್ಯೆ(Murder) ಮಾಡಲಾಗಿದೆ.
ಸೇನಾ ಶಿಬಿರದೊಳಗೆ ನುಗ್ಗಿದ ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಆತ್ಮಾಹುತಿ ದಾಳಿಯಲ್ಲಿ(Suicide Attack) ದುರದೃಷ್ಟವಶಾತ್ ಐವರು ಯೋಧರೂ ಗಾಯಗೊಂಡಿದ್ದಾರೆ.
ಭಯೋತ್ಪಾದಕರು ರಾಜೌರಿ ಜಿಲ್ಲೆಯ, ದರ್ಹಾಲ್ ಪ್ರದೇಶದ ಸೇನಾ ಶಿಬಿರಕ್ಕೆ ನುಗ್ಗಿದ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದರು, ಈ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯೂ(Indian Army) ಪ್ರತಿದಾಳಿ ನಡೆಸಿತು.

“ಕೆಲವು ಭಯೋತ್ಪಾದಕರು ಪರ್ಗಲ್ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದ್ದಾರೆ. ಆದರೆ ನಮ್ಮ ಸೇನೆ ಈ ಸಂದರ್ಭದಲ್ಲಿ ಎನ್ಕೌಂಟರ್ ನಡೆಸಿ, ಉಗ್ರರನ್ನು ಹೊಡೆದುರುಳಿಸಿದ್ದಾರೆ” ಎಂದು ಎಡಿಜಿಪಿ(ADGP) ಮುಖೇಶ್ ಸಿಂಗ್(Mukhesh Singh) ತಿಳಿಸಿದ್ದಾರೆ. ರಜೌರಿ ಜಿಲ್ಲೆ ಮತ್ತು ಜಮ್ಮು ಪ್ರದೇಶದ ಇತರ ಭಾಗಗಳು ಹೆಚ್ಚು ಕಡಿಮೆ ಭಯೋತ್ಪಾದನೆಯಿಂದ ಮುಕ್ತವಾಗಿವೆ. ಆದರೆ ಕಳೆದ ಆರು ತಿಂಗಳಿನಿಂದ ಜಮ್ಮುವಿನಲ್ಲಿ ಭಯೋತ್ಪಾದಕ ಸಂಬಂಧಿತ ಸರಣಿ ಘಟನೆಗಳು ನಡೆಯುತ್ತಿದ್ದವು.
ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉರಿ ಮಾದರಿಯಲ್ಲಿಯೇ ಈ ದುಷ್ಕ್ರತ್ಯ ನಡೆಸಲು ಸಂಚು ರೂಪಿಸಲಾಗಿತ್ತು. ಉಗ್ರರು ಸೇನಾ ಶಿಬಿರಕ್ಕೆ ನುಗ್ಗಲು ಯತ್ನಿಸುತ್ತಿದ್ದರು, ಆದರೆ ಭದ್ರತಾ ಪಡೆಗಳು ಈ ಷಡ್ಯಂತ್ರವನ್ನು ವಿಫಲಗೊಳಿಸಿದ್ದು, ಭದ್ರತಾ ಪಡೆಯ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಈ ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡ ಸೇನಾ ಸಿಬ್ಬಂದಿಗಳಲ್ಲಿ, ಒಬ್ಬ ಅಧಿಕಾರಿಯೂ ಸೇರಿದ್ದಾರೆ.
https://vijayatimes.com/fake-note-scam-culprits-arrested/
ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 16 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮಂಜಿಂದರ್ ಸಿಂಗ್ ಸದ್ಯದ ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ, ಪೊಲೀಸರು ಮತ್ತು ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
- ಪವಿತ್ರ