ರಾಮನಗರ, ಡಿ. 05: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿ ತನ್ನ ನೌಕರಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದು, ಮತ್ತೆ 20 ಮಂದಿಯನ್ನ ಕೆಲಸದಿಂದ ವಜಾಗೊಳಿಸಿದೆ.
ಈಗಾಗಲೇ 40 ಮಂದಿ ಕಾರ್ಮಿಕರನ್ನು ಅಮಾನತ್ತುಗೊಳಿಸಿದ್ದ ಕಂಪನಿ ಮತ್ತೆ 20 ಕಾರ್ಮಿಕರನ್ನು ಅಶಿಸ್ತಿನ ಆರೋಪವೊಡ್ಡಿ ಸೇವೆಯಿಂದ ಅಮಾನತುಗೊಳಿಸಿದೆ. ಆರೋಪ ಹೊರೆಸಿ ವಿಚಾರಣೆ ಕಾಯ್ದಿರಿಸಿ ನೋಟಿಸ್ ಜಾರಿ ಮಾಡಿದ ಕಂಪನಿಯ ವಿರುದ್ಧ ಮುಷ್ಕರ ನಿರತ ಕಾರ್ಮಿಕರು ಮತ್ತಷ್ಟು ಕೆರಳಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಕಂಪನಿ, ‘ದುರ್ನಡತೆ ಮತ್ತು ಅಶಿಸ್ತು ನಡತೆಯ ಬಗ್ಗೆ ಪ್ರಾಥಮಿಕ ಪುರಾವೆಗಳು ಲಭಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ’ ತಿಳಿಸಿದೆ.
ನ.6ರಂದು ಒಬ್ಬರು ಮತ್ತು ನ.12ರಂದು 39 ಮಂದಿ ಕಾರ್ಮಿಕರನ್ನು ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿಲಾಗಿತ್ತು.