vijaya times advertisements
Visit Channel

February 22, 2021

ಡಿ’ಬಾಸ್ ಫ್ಯಾನ್ಸ್ ಬಗ್ಗೆ ಜಗ್ಗೇಶ್ ಹೇಳಿಕೆ ವಿವಾದ: ನವರಸ ನಾಯಕನಿಗೆ ದಚ್ಚು ಅಭಿಮಾನಿಗಳಿಂದ ತರಾಟೆ

ಇನ್ಸ್​ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಜೊತೆಗೆ ಫೋನಿನಲ್ಲಿ ಮಾತನಾಡುವಾಗ ‘ದರ್ಶನ್ ಅವ್ರ ಅಭಿಮಾನಿಗಳ ತರ ತಲೆ ಮಾಂಸ ಕೇಳುವವರಲ್ಲ’ ಎಂಬ ಆಡಿಯೋವೊಂದು ದರ್ಶನ್ ಮತ್ತು ಅವ್ರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಈ ವಿಚಾರವಾಗಿ ಮೈಸೂರಿನಲ್ಲಿ ಜಗ್ಗೇಶ್​ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ‌.

ನನ್ನ ಹೇಳಿಕೆಯನ್ನು ತಪ್ಪು ಅರ್ಥಗಳಿಗೆ ಎಡೆಮಾಡಬೇಡಿ : ಸಾಹಿತಿ ಡಾ.ದೊಡ್ಡರಂಗೇಗೌಡ

ಹಾಸನದಲ್ಲಿ ತಾವು ಆಡಿದ ‘ಭಾರತದ ಸಂವಿಧಾನದಲ್ಲಿ ಮಾರ್ಪಾಡು ಮಾಡುವುದು ಸೂಕ್ತವಾದೀತು’ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, ನಮ್ಮ ಬಹುಮುಖಿ ರಾಷ್ಟ್ರ. ಆದರೂ ಏಕರೂಪದ ಶಿಕ್ಷಣ ಇರಲಿಲ್ಲ. ಈಗ ನಮಗೆ ನಮ್ಮ ದೇಶದಲ್ಲಿ ಏಕರೂಪ ಶಿಕ್ಷಣ ಅನಿವಾರ್ಯ ಎಂದು ಅನಿಸುತ್ತದೆ. ಬಡವರು ಬಡವರಾಗೇ ಉಳಿಯುತ್ತಿದ್ದಾರೆ.

ನನ್ನ ಹೆಸರಿನಲ್ಲೇ ರಾಮನಿದ್ದಾನೆ: ದೇಶಕ್ಕೆ ಬೇಕಿರುವುದು ಗಾಂಧಿಯವರ ಆದರ್ಶ ಪುರುಷ ರಾಮ: ಸಿದ್ದರಾಮಯ್ಯ

ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿರುವಂತಹುದು.

ಪ್ರತಿ ವಿವಾಹ ಕಾರ್ಯಕ್ರಮಕ್ಕೂ ಓರ್ವ ಮಾರ್ಷಲ್ ನೇಮಕ: ಡಾ. ಕೆ. ಸುಧಾಕರ್

ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಡಿಸಿ, ಎಸ್ಪಿ, ಸಿಇಒ, ಆರೋಗ್ಯಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದವನ್ನ ಮಾಡಿದ್ದೇವೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗ್ತಿದೆ. ಹೀಗಾಗಿ ಗಡಿಯಲ್ಲಿ ಮತ್ತಷ್ಟು ನಿಗಾವಹಿಸಿದ್ದೇವೆ.

ಭೀಮಾ ಕೋರೆಗಾಂವ್‌ ಪ್ರಕರಣ: ಕವಿ ವರವರ ರಾವ್‌ಗೆ 6 ತಿಂಗಳ ಜಾಮೀನು

82 ವರ್ಷ ವಯಸ್ಸಿನ ರಾವ್‌ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿದೆ. ವಿಚಾರಣಾಧೀನ ಆರೋಪಿಯ ಸ್ಥಿತಿಯನ್ನು ನೋಡಿಯೂ ಅವರನ್ನು ಜೈಲಿಗೆ ಕಳುಹಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸುವಾಗ ಹೇಳಿದೆ.

ಕಾವೇರಿ ನದಿಜೋಡಣೆ ಕೈಬಿಡಲು ತಮಿಳುನಾಡು ಸರ್ಕಾರವನ್ನು ಒತ್ತಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ತಮಿಳುನಾಡು ಸರ್ಕಾರ ಕಾವೇರಿ ನದಿಯ 45 ಟಿಎಂಸಿ ನೀರನ್ನು ಅಕ್ರಮವಾಗಿ ಬಳಸಿಕೊಂಡು ನದಿ ಜೋಡಣೆ ಯೋಜನೆಯನ್ನು ಶುರು‌ಮಾಡಲು ಹೊರಟಿರುವುದು ಖಂಡನೀಯ. ಈ ಅಕ್ರಮವನ್ನು ತಕ್ಷಣ ನಿಲ್ಲಿಸಬೇಕೆಂದು ಆ ರಾಜ್ಯದ ಮುಖ್ಯಮಂತ್ರಿಗಳನ್ನು
ಆಗ್ರಹಿಸುತ್ತೇನೆ.

ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ

3 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಇಂದು ಮೋಡ ಕವಿದ ವಾತಾವರಣವಿರಲಿದೆ. ನಿನ್ನೆ ಸಂಜೆಯೂ ಬೆಂಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿತ್ತು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬೀದರ್, ಧಾರವಾಡ, ಕಲಬುರ್ಗಿ ಹಾಗೂ ಹಾಸನದಲ್ಲಿ ಫೆ. 23ರವರೆಗೂ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇರಳದಲ್ಲಿ ಕರ್ನಾಟಕ ವಾಹನಗಳಿಗೆ ತಡೆ

ಮಂಗಳೂರು ಸಮೀಪದ ತಲಪಾಡಿ ಚೆಕ್‌ ಪೋಸ್ಟ್‌ ನಲ್ಲಿ ತಪಾಸಣೆ ನಡೆಯುತ್ತಿದ್ದು ಇದಕ್ಕೆ ಕೇರಳ ರಾಜ್ಯದವರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಅಧಿಕಾರಿಗಳು ಜಿಲ್ಲೆಯ ಗಡಿ ಭಾಗದಲ್ಲಿ ಕೇರಳದ ವಾಹನಗಳನ್ನು ತಪಾಸಣೆಗೊಳಪಡಿಸುತ್ತಿದ್ದಾರೆ. ಆದರೆ ಇದಕ್ಕೆ ಪ್ರತಿರೋಧ ಒಡ್ಡಿರುವ ಕೇರಳದ ಕೆಲವು ಸಂಘಟನೆಗಳು ಕರ್ನಾಟಕ ರಾಜ್ಯದ ವಾಹನಗಳನ್ನು ತಲಪಾಡಿ ಗಡಿಯಲ್ಲಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

Petrol Price Today: ಇಂದು ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಕಳೆದ 53 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 24 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 7.30 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 14ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿತ್ತು.

ನಟ ರಾಘವೇಂದ್ರ ರಾಜಕುಮಾರ್ ಮನೆಗೆ ಜಗ್ಗೇಶ್‌ ಭೇಟಿ: ಹಿರಿಯ ನಟನ ಆರೋಗ್ಯ ವಿಚಾರಿಸಿದ ನವರಸ ನಾಯಕ

ಆರೋಗ್ಯದಲ್ಲಿ ಕೊಂಚ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೆ. ಈ ಬಗ್ಗೆ ಯಾರು ಆತಂಕಪಡುವಂತಹದ್ದು ಏನೂ ಆಗಿಲ್ಲ ಎಂದು ರಾಘವೇಂದ್ರ ರಾಜ್‌ಕುಮಾರ್‌ ಅವರು ಹೇಳಿದ್ದಾರೆ.