vijaya times advertisements
Visit Channel

February 27, 2021

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ

ಮನೆಯಲ್ಲಿ ಚಂದ್ರೇಗೌಡ ಅವರ ಪತ್ನಿ ಒಬ್ಬರೇ ಇದ್ದರು. ಅವರ ಕೈ ಮತ್ತು ಬಾಯಿಗೆ ವೇಲ್ ನಿಂದ ಕಟ್ಟಿ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯ ಮಗ ಬಂದು ನೋಡಿ ಕರೆದಿದ್ದಾನೆ. ಒಳಗಿನಿಂದ ಅಮ್ಮನ ಧ್ವನಿ ಕೇಳದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ. ಆಗ ತನ್ನ ತಾಯಿಯನ್ನು ಕಟ್ಟಿಹಾಕಿರುವುದನ್ನು ಕಂಡು ಕಿರುಚಾಡಿದ್ದಾನೆ.

ಬೋರ್ಡಿಂಗ್ ಶಾಲೆಯಿಂದ 317 ಬಾಲಕಿಯರ ಸಾಮೂಹಿಕ ಅಪಹರಣ..!

ವಿದ್ಯಾರ್ಥಿನಿಯೊಬ್ಬಳ ಪೋಷಕರಾದ ನಸೀರು ಅಬ್ದುಲ್ಲಾಹಿ ಮಾತನಾಡಿ, ತಮ್ಮ ಮಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಈ ಶಾಲೆಯಲ್ಲಿ 10 ರಿಂದ 13 ವರ್ಷದ ಮಕ್ಕಳು ಓದುತ್ತಿದ್ದರು ಎಂದು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಈ ಶಾಲೆಯ ಬಳಿ ಸೈನಿಕರ ಉಪಸ್ಥಿತಿ ಬಲವಾಗಿದ್ದರೂ ಸಹ ಮಕ್ಕಳನ್ನು ರಕ್ಷಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂಬುದು ನಿರಾಶಾದಾಯಕವಾಗಿದೆ.

ಬೆಲೆ ಏರಿಕೆಯ ಬಗ್ಗೆ ಸಚಿವರ ಮೌನವೇಕೆ : ಡಿಕೆ ಶಿವಕುಮಾರ್ ಪ್ರಶ್ನೆ

ಇಂಧನದ ಬೆಲೆ ಏರಿಕೆಯಾದ ತಕ್ಷಣ ಇತರ ಎಲ್ಲದರ ಬೆಲೆಯೂ ಹೆಚ್ಚಾಗಲಿದೆ. ಇದರಿಂದ ಬದುಕು ಸಾಗಿಸುವುದೇ ಕಷ್ಟವಾಗಿದೆ. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಬೆಲೆ ಏರಿಕೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದವರು ಇಂದು ಸ್ವತ ಸಚಿವರಾಗಿದ್ದಾರೆ. ಆದರೆ ಬೆಲೆ ಏರಿಕೆಯ ವಿರುದ್ಧ ಅವರು ಮಾತನ್ನೇ ಆಡುತ್ತಿಲ್ಲ.

ಬುಲೆಟ್ ಬೆಲೆ ಏರಿಕೆ :ಬುಲೆಟ್ ಪ್ರಿಯರಿಗೆ ಶಾಕಿಂಗ್!

ಬುಲೆಟ್ ಬೇಸಿಕ್ ಮಾದರಿಯ ಎಕ್ಸ್ ಶೋರೂಂ ಬೆಲೆ ಈಗ 1.30 ಲಕ್ಷಕ್ಕೆ ಏರಿಕೆಯಾಗಿದೆ. 350 ಸಿಸಿಯ ಎಲ್ಲ ಬುಲೆಟ್ ಗಳ ಬೆಲೆ ಕನಿಷ್ಠ 3500 ರೂ. ಏರಿಕೆಯಾಗಿದೆ. ಬುಲೆಟ್ 350(ಸ್ಟ್ಯಾಂಡರ್ಡ್) ಬೆಲೆ ₹1,30,228, ಆಗಿದೆ. ಹಿಂದಿನ ಬೆಲೆಗಿಂತ 3134 ₹ ಹೆಚ್ಚಳವಾಗಿದೆ. ಬುಲೆಟ್ 350 ಇಎಸ್ (ಇಲೆಕ್ಟ್ರಿಕ್ ಸ್ಟಾರ್ಟ್) ಬೆಲೆ ₹1,46,152 ಆಗಿದ್ದು, ಹಳೆಯ ಬೆಲೆಗಿಂತ ₹ 3447 ಹೆಚ್ಚಳವಾದಂತಾಗಿದೆ

ಕೆಆರ್‌ಎಸ್‌ ಡ್ಯಾಂ ಮೇಲೆ ಪೊಲೀಸ್‌ ಜೀಪ್‌ ಬಳಸಿ ಯುವಕ ಜಾಲಿ ರೈಡ್: ಭದ್ರತೆ ಉಲ್ಲಂಘಿಸಿದ್ದಕ್ಕೆ ಜನರ ಕಿಡಿ

ಜೀಪ್‌ ನಿರ್ವಹಣೆ ಹೊತ್ತಿದ್ದ ಪೊಲೀಸ್​ ಅಧಿಕಾರಿಯೇ ಯುವಕನ ಪಕ್ಕದಲ್ಲೇ ಕುಳಿತು ಸಾಥ್‌ ನೀಡಿದ್ದಾರೆ. ಆ ಯುವಕ ವಾಹನ ಚಲಾಯಿಸಿ, ಇಡೀ ವೃತ್ತಾಂತವನ್ನು ವಿಡಿಯೊ ಮಾಡಿಸಿಕೊಂಡಿದ್ದಾನೆ. ಡ್ರೈವರ್ ಸೀಟ್ ಪಕ್ಕ ಕುಳಿತ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದಲೇ ವಿಡಿಯೊ ಮಾಡಿಸಿದ್ದಾನೆ.

ಪೊಲೀಸರೆದುರೇ ಆರೋಪಿ ಆತ್ಮಹತ್ಯೆ; ಬೆಂಗಳೂರು ಸಬ್ ಇನ್ಸ್ಪೆಕ್ಟರ್ ಬಂಧನ

ಸಾವಿಗೀಡಾದ ಸಿದ್ದಲಿಂಗಸ್ವಾಮಿ ಪತ್ನಿ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಸಬ್​ ಇನ್​ಸ್ಪೆಕ್ಟರ್​ ಅನ್ನು ಅಮಾನತುಗೊಳಿಸಲಾಗಿದೆ.

ಇಂಧನ ಬೆಲೆ ಏರಿಕೆ, ಸರ್ಕಾರಿ ಅಧಿಕಾರಿಗಳ ಕಾರು, ಎಲೆಕ್ಟ್ರಿಕ್ ಕಾರುಗಳಾಗಿ ಮಾರ್ಪಾಡು

ದೆಹಲಿ ಸರ್ಕಾರ ಹೊರಡಿಸಿರುವ ಈ ಸುತ್ತೋಲೆಯಲ್ಲಿ ಮುಂದಿನ ಆರು ತಿಂಗಳಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳ ಡಿಸೇಲ್ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಯಿಸಲಾಗುವುದು ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಅಂಚೆ ಕಛೇರಿ ಗ್ರಾಹಕ ಸೇವೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದ ಕರ್ನಾಟಕ

ಈ ಸಿಎಸ್‌ಸಿಗಳ ಮೂಲಕ ನಾಗರಿಕರು ವ್ಯಾಪಾರಿಯಿಂದ ಗ್ರಾಹಕ ಸೇವೆ (ಬಿ 2 ಸಿ) ಮತ್ತು ಸರ್ಕಾರದಿಂದ ನಾಗರಿಕ ಸೇವೆಗಳನ್ನು (ಜಿ 2 ಸಿ) ಪಡೆಯಬಹುದು. ಬಿ 2 ಸಿ ಸೇವೆಗಳಲ್ಲಿ ಮೊಬೈಲ್ ರೀಚಾರ್ಜ್, ನೀರು, ಅನಿಲ ಮತ್ತು ವಿದ್ಯುತ್ ಬಿಲ್‌ಗಳ ಪಾವತಿ, ವಿಮಾ ನವೀಕರಣ, ಇಎಂಐ ಪಾವತಿ, ವಿಮಾನ, ರೈಲು ಮತ್ತು ಬಸ್ ಇತ್ಯಾದಿ ಸೇರಿವೆ.

ಮೂರು ದಿನಗಳ ಕಾಲ ನಡೆಯುವ ಆಟಿಕೆ ಮೇಳಕ್ಕೆ ಮೋದಿ ಚಾಲನೆ

ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಟಾಯ್ ಫೇರ್ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ, ಆಟಿಕೆಗಳಿಂದ ಮಕ್ಕಳ ಮನಸು ವಿಕಸನಗೊಳ್ಳಲು ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ವಿವರಿಸಿದರು.

ಆನೆ ಹೋಗುತ್ತೇ, ನಾಯಿ ಬೊಗಳುತ್ತೇ: ಆಪ್ತ ಸ್ನೇಹಿತನ ಬೆನ್ನಿಗೆ ನಿಂತ ಮಾಜಿ ಸಚಿವ ಮಹದೇವಪ್ಪ

ಮೈಸೂರಿನಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ನಾಯಕರ ವಿರುದ್ದ ದೂಷಣೆ ಮಾಡಿದ್ರು, ಘೋಷಣೆಯನ್ನೂ ಕೂಗಿದ್ರು, ಆದರೆ ಅವರ ಹೆಸರುಗಳೇನು ಚರಿತ್ರೆಯಲ್ಲಿ ಹಾಳಾಯ್ತಾ? ಹಾಗೆಯೇ ಸಿದ್ದರಾಮಯ್ಯ ವಿರುದ್ಧ ಕೂಗಿದ ಘೋಷಣೆಗೆ ಮಹತ್ವ ಕೊಡಬೇಕಿಲ್ಲ.