vijaya times advertisements
Visit Channel

March 17, 2021

ಹೊಸ ʼರೇಶನ್ ಕಾರ್ಡ್ʼ ಪಡೆಯುವವರಿಗೆ ಗುಡ್ ನ್ಯೂಸ್

ಭಾರತದ ಪ್ರತಿಯೊಬ್ಬ ನಾಗರಿಕನೂ ಪಡಿತರ ಚೀಟಿಯನ್ನ ಹೊಂದಲು ಅರ್ಹನಾಗಿದ್ದಾನೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನೂ ರೇಶನ್​ ಕಾರ್ಡ್​ನಲ್ಲಿ ಸೇರಿಸಿಕೊಳ್ಳಲಾಗುತ್ತೆ. 18 ವರ್ಷ ತುಂಬಿದ ಬಳಿಕ ಸೂಕ್ತ ದಾಖಲೆಗಳನ್ನ ನೀಡಿ ಪ್ರತ್ಯೇಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬ್ಯಾಂಕ್‌ಗಳ ಖಾಸಗೀಕರಣ ಸರಕಾರದ ಬೇಜವಾಬ್ಧಾರಿತನ: ಅಖಿಲ ಭಾರತ ಬ್ಯಾಂಕ್ ಅಧಿಕಾರಿ ಸಂಘ

ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕರಾದ ಎಚ್.ವಿ. ರಾವ್‌ವರು ಮಾತನಾಡಿ, ನಮ್ಮ ಬದ್ಧತೆ ಏನಿದ್ದರೂ ಸಮಾಜಕ್ಕೆ. ಎಲ್ಲರೂ ಜೊತೆಯಾಗಿ ಇಂತಹ ಬೇಜವಾಬ್ದಾರಿ ಕ್ರಮಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ.

ತರಬೇತಿ ವೇಳೆ ಮಿಗ್-21 ಪತನ: ಪೈಲೆಟ್ ಸಾವು

ಯುದ್ಧ ತರಬೇತಿ ಕಾರ್ಯಾಚರಣೆಗೆ ವಿಮಾನ ಹೊರಟ್ಟಿದ್ದಾಗ ಈ ಅಪಘಾತ ಸಂಭವಿಸಿದೆ. ವಾಯುಪಡೆಯ ಹೇಳಿಕೆಯು ವಾಯುನೆಲೆಯ ಸ್ಥಳವನ್ನು ಬಹಿರಂಗಪಡಿಸಿಲ್ಲ. ಅಫಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

ನಿಲ್ಲದ ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್: ಡಿಕೆಶಿ ಕಾಲೆಳೆದ ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು

ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟ ಮಾಜಿ ಪತ್ರಕರ್ತ ಭವಿತ್‌‌ ಹಾಗೂ ಮೈಸೂರಿನ ಸಂಸದ ಪ್ರತಾಪ್‌‌ ಸಿಂಹ ಅವರ ಫೋಟೋವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿ ತಿರುಗೇಟು ನೀಡಿದೆ.

ಕೊಂಕಣ ರೈಲ್ವೆ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್‍ನಲ್ಲಿ (ಕೆಆರ್‍ಸಿಎಲ್) ಖಾಲಿ ಇರುವ 18 ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳು ಜಮ್ಮು- ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

ಎಫ್ಐಆರ್ ದಾಖಲಾಗುತ್ತಿದ್ದಂತೆ ಹಿತೇಶಾ ಚಂದ್ರಾನಿ ನಾಪತ್ತೆ!

ಡೆಲಿವರಿ ಬಾಯ್ ಕಾಮರಾಜ್ ಅವರ ವಿರುದ್ದ ಹಿತೇಶಾ ಚಂದ್ರಾನಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಿದ್ದರು, ಇದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ದೂರಿನ ಸಂಬಂಧ ಡೆಲಿವರಿ ಬಾಯ್ ಕಾಮರಾಜ್ ಅವರು ಪೊಲೀಸರ ಮುಂದೆ ನಡೆದ ಘಟನೆಯನ್ನು ತಿಳಿಸಿದ್ದಾರೆ.

ಆಸಕ್ತ ಶಾಸಕರು ಜಿಲ್ಲಾಧಿಕಾರಿಗಳ ಜೊತೆ ಗ್ರಾಮ ವಾಸ್ತವ್ಯ ಮಾಡಬಹುದು: ಸಚಿವ ಆರ್ ಅಶೋಕ್

ಗ್ರಾಮೀಣ ಪ್ರದೇಶದ ಜನರ ಕುಂದು ಕೊರತೆಗಳನ್ನು ನೀಗಿಸಲು ಕಂದಾಯ ಇಲಾಖೆ ಕೈಗೊಂಡಿರುವ ‘ಅಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆ’ ಎಂಬ ಕಾರ್ಯಕ್ರಮಕ್ಕೆ ಶಾಸಕರಿಗೆ ಕೂಡಾ ಮಾಹಿತಿ ನೀಡುವುದರ ಜೊತೆಗೆ ಗ್ರಾಮ ವಾಸ್ತವ್ಯಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಮಾಂಸಹಾರಿ ಪಿಜ್ಜಾ ನೀಡಿದ ರೆಸ್ಟೋರೆಂಟ್ ನಿಂದ ೧ ಕೋ.ರೂ ಪರಿಹಾರ ಕೇಳಿ ದೂರು ದಾಖಲಿಸಿದ ಮಹಿಳೆ!

ರೆಸ್ಟೋರೆಂಟ್ ನಿಂದ ಬಂದ ಪಿಜ್ಜಾವನ್ನು ನೋಡಿದ ದೀಪಾಲಿಗೆ ಅಚ್ಚರಿ ಕಾದಿತ್ತು. ಏಕೆಂದರೆ ರೆಸ್ಟೋರೆಂಟ್​ ತಪ್ಪಾಗಿ ಮಾಂಸಾಹಾರಿ ಪಿಜ್ಜಾ ನೀಡಲಾಗಿತ್ತು. ಇದರಿಂದ ಕೋಪಗೊಂಡ ಮಹಿಳೆಯು ಗ್ರಾಹಕ ನ್ಯಾಯಾಲಯಕ್ಕೆ ಪಿಜ್ಜಾ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾಳೆ.

ವಿಮಾನದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ನವದೆಹಲಿ, ಮಾ. 17: ಬೆಂಗಳೂರು-ಜೈಪುರ ನಡುವೆ ಸಂಚರಿಸುತ್ತಿದ್ದ ವಿಮಾನದಲ್ಲಿಯೇ ಬೆಳಿಗ್ಗೆ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂಗತಿ ನಡೆದಿದೆ. ಬುಧವಾರ ಬೆಳಿಗ್ಗೆ ಬೆಂಗಳೂರಿನಿಂದ ಜೈಪುರಕ್ಕೆ ಇಂಡಿಗೋ

ದೇಶದಲ್ಲಿ ಮತ್ತೆ ಕೊರೊನಾ ಆತಂಕ: ಮಾಸ್ಕ್ ಕಡ್ಡಾಯಗೊಳಿಸಲು ಪ್ರಧಾನಿ ಸೂಚನೆ

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮಂಗಳವಾರ ಸಂವಾದ ನಡೆಸಿದ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ಮಾದರಿ ಪರೀಕ್ಷೆಗಳು ಹೆಚ್ಚಾಗಬೇಕು. ಕೆಲ ರಾಜ್ಯಗಳಲ್ಲಿ ದಿಢೀರನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಣ್ಣ ನಗರಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಬೇಕು ಎಂದು ಸೂಚಿಸಿದರು.