vijaya times advertisements
Visit Channel

April 3, 2021

24 ಗಂಟೆಯಲ್ಲಿ 2.5 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣ; ವಿಶ್ವದಾಖಲೆ ಎಂದ ಸಚಿವ ನಿತಿನ್ ಗಡ್ಕರಿ

ಲಖನೌನ ಖುರಾಮ್ ನಗರ ಮೇಲ್ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಿ, ತೆಧಿ ಪುಲಿಯಾ ಫ್ಲೈಓವರ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ನಿತಿನ್​ ಗಡ್ಕರಿ, ರಸ್ತೆ ನಿರ್ಮಾಣದಲ್ಲಿ ಭಾರತ ಇದೀಗ ವಿಶ್ವದಾಖಲೆ ಬರೆದಿದೆ. 24 ಗಂಟೆಯಲ್ಲಿ 2.5 ಕಿಮೀ ದೂರದ ಚತುಷ್ಪಥ ರಸ್ತೆ ಹಾಗೂ 25 ಕಿಮೀ ದೂರದ ಏಕಪಥ ರಸ್ತೆ ನಿರ್ಮಿಸಿ ಗಿನ್ನೀಸ್ ದಾಖಲೆ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.

ಟ್ಯೂಶನ್ ಮುಗಿಸಿ ಹಿಂತಿರುಗುತ್ತಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್: ಬಾಲಕಿ ಆತ್ಮಹತ್ಯೆ…!

ಬಾಲಕಿಯ ಮನೆಯ ಬಳಿಯೇ ಇರುವ ಟವರ್ ಒಂದರ ಬಳಿ ಕಾಪಸಾಡ್ ಗ್ರಾಮದ ನಾಲ್ವರು ಯುವಕರು ಬಾಲಕಿಯನ್ನು ಅಪಹರಿಸಿ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಮೀರತ್​ನ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ ಕೇಶವ್ ಕುಮಾರ್ ತಿಳಿಸಿದ್ದಾರೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಪುತ್ರಿ ಮನೆ ಮೇಲೆ ಐಟಿ ದಾಳಿ

ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ಕೆಲವೆಡೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದ ಮಾಹಿತಿ ಆಧಾರದ ಮೇಲೆ ತಮಿಳುನಾಡಿನ ವಿವಿಧೆಡೆ ದಾಳಿ ನಡೆಸಿದ್ದಾಗಿ ನೇರ ತೆರಿಗೆಗಳ ಕೇಂದ್ರ ಮಂಡಳಿ ಹೇಳಿದೆ. ಇನ್ನು ದಾಳಿಯ ವೇಳೆ, ತೆರಿಗೆ ವಂಚನೆಗೆ ಸಂಬಂಧಪಟ್ಟ ಹಲವು ವಿಚಾರಗಳು ಗೊತ್ತಾಗಿವೆ ಎಂಬ ಮಾಹಿತಿ ಇದೆ.

ಸರ್ಕಾರದ ನಿರ್ಧಾರಕ್ಕೆ ಸಿನಿ ಸ್ಟಾರ್‌ಗಳ ಆಕ್ಷೇಪ; ಸರ್ಕಾರದ ನಿರ್ಧಾರ ಗೌರವಿಸುವುದು ನಮ್ಮ ಕರ್ತವ್ಯ ಎಂದ ಸುದೀಪ್

ಸರ್ಕಾರದ ಈ‌ ನಿರ್ಧಾರದ ಬಗ್ಗೆ ನಟ‌ ಕಿಚ್ಚ ಸುದೀಪ್ ಸೇರಿದಂತೆ ‌ಅನೇಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸುದೀಪ್, ಈಗಷ್ಟೇ ಬಿಡುಗಡೆಯಾಗಿರುವ ಚಿತ್ರಗಳಿಗೆ ಸರ್ಕಾರದ ಈ ನಿರ್ಧಾರವು ಆಘಾತ ತಂದಿದೆ. ಈ ನಿರ್ಧಾರದ ಹಿಂದೆ ಸೂಕ್ತವಾದ ಕಾರಣವಿರುವುದರಿಂದಾಗಿ, ಇದನ್ನು ಗೌರವಿಸುವುದೂ ನಮ್ಮ ಕರ್ತವ್ಯ. ಈ ಪರಿಸ್ಥಿತಿಯಲ್ಲೂ ಗೆದ್ದುಬರುವ ಶಕ್ತಿಯು ಯುವರತ್ನ ಚಿತ್ರತಂಡಕ್ಕೆ ಸಿಗಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.

“ಕಬ್ಜ” ಸಿನಿಮಾ ಶೂಟಿಂಗ್ ವೇಳೆ‌ ನಟ ಉಪೇಂದ್ರ ತಲೆಗೆ ಪೆಟ್ಟು: ನಾನು ಆರಾಮವಾಗಿದ್ದೇನೆ ಎಂದು ರಿಯಲ್ ಸ್ಟಾರ್

ಬೆಂಗಳೂರಿನ ಮಿನರ್ವಾ ಮಿಲ್ ನಲ್ಲಿ ಕಳೆದ 30 ದಿನಗಳಿಂದಲೂ ‘ಕಬ್ಜ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅದರಂತೆ ಶನಿವಾರ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು.

ಜಾಗತಿಕ ಲಿಂಗಾನುಪಾತ: 156 ದೇಶಗಳಲ್ಲಿ ಭಾರತಕ್ಕೆ 140 ನೇ ಸ್ಥಾನ

ವಿಶ್ವ ಆರ್ಥಿಕ ವೇದಿಕೆ ಬುಧವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ ದಕ್ಷಿಣ ಏಷ್ಯಾದ ರಾಷ್ಟ್ರಗಳು ಬಹಳ ಹಿಂದಿದೆ. ಈ ವರದಿಯಲ್ಲಿ ಒಟ್ಟು ೧೫೬ ದೇಶಗಳಿದ್ದವು. ಅವುಗಳಲ್ಲಿ ನಮ್ಮ ದೇಶ ೧೪೬ ನೇ ಸ್ಥಾನ ಪಡೆದಿರುವುದು ದೇಶಕ್ಕೆ ಒಂದು ಕಪ್ಪು ಚುಕ್ಕಿಯಂತಾಗಿದೆ. ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ ಮಾತ್ರ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗಿಂತಲೂ ಹಿಂದಿದ್ದು ಉಳಿದೆಲ್ಲಾ ದೇಶಗಳು ಈ ಪಟ್ಟಿಯಲ್ಲಿ ಮುಂದಿವೆ.

ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ ಅನಿವಾರ್ಯ: ಥಿಯೇಟರ್ ರೂಲ್ಸ್ ನಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ- ಸಚಿವ ಸುಧಾಕರ್

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ ಅನಿವಾರ್ಯವಾಗಿದ್ದು, ತಾಂತ್ರಿಕ ಸಲಹಾ ಸಮಿತಿಯ ಸೂಚನೆ ಮೇರೆಗೆ ಮಾರ್ಗಸೂಚಿ ಜಾರಿ ಮಾಡಲಾಗಿದೆ. ನೂತನ ಮಾರ್ಗಸೂಚಿ ಕ್ರಮಗಳು ಏಕಾಏಕಿ ಜಾರಿಗೆ ತಂದಿಲ್ಲ.

ಹೆಂಡತಿ ಮೇಲಿನ ಕೋಪಕ್ಕೆ ಮನೆಗೆ ಬೆಂಕಿಯಿಟ್ಟ ಪತಿರಾಯ: 6 ಮಂದಿ ಸಜೀವ ದಹನ

ಗ್ರಾಮದ ಲೈನ್ ಮನೆಯಲ್ಲಿ ವಾಸವಿದ್ದ ಬೇಬಿ (40), ಸೀತೆ (45), ಪ್ರಾರ್ಥನ (6) ಮೃತರು. ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7), ಪ್ರಕಾಶ್‌ (7) ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭಾಗ್ಯ (40) ಹಾಗೂ ಪಾಚೆ(60) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಹೆಚ್ಚಿದ ಕೊರೋನಾ ಆತಂಕ: ಒಂದೇ ದಿನದಲ್ಲಿ 89,129 ಕೊರೋನಾ ಪ್ರಕರಣ ದಾಖಲು

ಕರ್ನಾಟಕ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಈಗಾಗಲೇ ಪ್ರಕಟವಾಗಿದೆ. ಏಪ್ರಿಲ್ 20ರವರೆಗೆ ಪ್ರಸ್ತುತ ಮಾರ್ಗಸೂಚಿ ಅನ್ವಯವಾಗಲಿದೆ.