vijaya times advertisements
Visit Channel

May 1, 2021

ರಚಿತಾ ರಾಮ್ ಈಗ ಶಬರಿ..!

ಇದು ರಚಿತಾ ಅವರ 36ನೇ ಚಿತ್ರವಾಗಿದೆ. ಶ್ರೀರಾಮನವಮಿಯ ದಿನದಂದು ‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಉಗ್ರಾವತಾರ ತಾಳಿರುವ ರಚಿತಾರಾಮ್ ಅವರ ವಿಭಿನ್ನಲುಕ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.

ಉಪ್ಪಿ ಕೈಯ್ಯಲ್ಲಿ ‘ಲಗಾಮ್’ ಭದ್ರ..!

ಕೊರೋನಾ ಸಮಯದಲ್ಲೂ ಇಷ್ಟೊಂದು ಗ್ರ್ಯಾಂಡ್ ಆಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್ ಎನರ್ಜಿ. ಸಿನಿಮಾನೂ ಇಷ್ಟೇ ಗ್ರ್ಯಾಂಡಾಗಿ ಮೂಡಿಬರಲಿದೆ ಎಂಬ ಭರವಸೆ ನನಗಂತೂ ಇದೆ. ಒಳ್ಳೆ ತಂತ್ರಜ್ಞರು, ಒಳ್ಳೆ ಕಲಾವಿದರಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಮೆಸೇಜ್ ಇರುವ ಎಂಟರ್‌ಟೈನರ್ ಚಿತ್ರ. ಲಗಾಮ್ ಕನ್ನಡದ ಲಗಾನ್ ಆಗುತ್ತೆ ಎಂಬ ವಿಶ್ವಾಸವಿದೆ. ಕಬ್ಜಾ ದೊಡ್ಡ ಮಟ್ಟದ ಸಿನಿಮಾ, ಸೆಟ್‌ನಲ್ಲಿಯೇ ಬಹುತೇಕ ಶೂಟಿಂಗ್ ಮಾಡಲಾಗುತ್ತಿದೆ. ಹೀಗಾಗಿಯೇ ಸಾಕಷ್ಟು ಸಮಯ ಬೇಕು.

ಈ ವಾರವೂ ಕಿಚ್ಚನ ಅನುಪಸ್ಥಿತಿಯಲ್ಲೇ ನಡೆಯಲಿದೆ ಬಿಗ್ ಬಾಸ್

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ನಡೆಯಬೇಕಿದ್ದ ವೀಕೆಂಡ್ ಷೋಗಳ ಚಿತ್ರೀಕರಣ ನಡೆಸದಿರಲು ಕಲರ್ಸ್ ಕನ್ನಡ ತೀರ್ಮಾನಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಲರ್ಸ್ ವಾಹಿನಿ, ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ.

ರಾಜ್ಯದ ಮಹಿಳಾ ಸಾಂತ್ವಾನ ಕೇಂದ್ರಗಳ ಸ್ಥಗಿತಕ್ಕೆ ರಾಜ್ಯ ಸರ್ಕಾರ ನಿರ್ಧಾರ; ಸರ್ಕಾರದ ಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ಷೇಪ

ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಟ್ವೀಟ್‌ ಮಾಡಿರುವ ಅವರು, ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳಿಗೆ ಸರ್ಕಾರ ಬೀಗ ಜಡಿಯಲ್ಲ ಎಂದಿದ್ದ ಮುಖ್ಯಮಂತ್ರಿಗಳು ಸದ್ದಿಲ್ಲದಂತೆ ಎಲ್ಲಾ ಜಿಲ್ಲಾ ಮತ್ತು ಕೆಲವು ತಾಲ್ಲೂಕು ಮಟ್ಟದ 71 ಕೇಂದ್ರಗಳ ಸಾಂತ್ವನ‌ ಕೇಂದ್ರಗಳಿಗೆ ಬೀಗ ಜಡಿಸಿ ಮಾತು ತಪ್ಪಿದ್ದಾರೆ.

ಗುಜರಾತ್​ನ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ: 18 ಜನ ಸಜೀವ ದಹನ

ನಾಲ್ಕು ಅಂತಸ್ತಿನ ಈ ಕೋವಿಡ್ ಆಸ್ಪತ್ರೆ ಭರೂಚ್-ಜಂಬುಸಾರ್ ಹೈವೇ ಬಳಿಯಲ್ಲಿದೆ. ಆಸ್ಪತ್ರೆಯ ನೆಲಮಹಡಿಯಲ್ಲಿರುವ ಕೋವಿಡ್ ವಾರ್ಡ್ ಒಂದರಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಅಗ್ನಿ ಆಕಸ್ಮಿಕ ಉಂಟಾಗಿದೆ. ಈ ಘಟನೆಯಲ್ಲಿ ಕೋವಿಡ್ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ವೈದ್ಯಕೀಯ ಸೌಲಭ್ಯಗಳ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದವರ ವಿರುದ್ಧ ದೂರು ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

ಅಲ್ಲದೇ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಸಿಜನ್, ಬೆಡ್, ವೈದ್ಯರ ಕೊರತೆ ಇದೆ ಸಹಾಯ ಮಾಡಿ ಎಂದು ಪೋಸ್ಟ್​ ಕೂಡಾ ಮಾಡಿದ್ದಾರೆ. ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಮಹತ್ವದ ಸಂದೇಶವೊಂದನ್ನು ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಕೇಳಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತಿಲ್ಲ.

ಮಕ್ಕಳೇ, ಪರೀಕ್ಷೆಯ ಸಮಯದಲ್ಲಿ ಈ ಆಹಾರಗಳನ್ನು ಮುಟ್ಟಲೇಬೇಡಿ..

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಬೇಕು ಎಂದಾಗ ಮನಸ್ಸಿಗೆ ಮೊದಲು ಬರುವುದು ಆಹಾರ. ಆಹಾರವೇ ಎಲ್ಲದಕ್ಕೂ ಮೂಲವಾಗಿದೆ. ಮಕ್ಕಳ ಪರೀಕ್ಷೆಯ ದಿನಗಳಲ್ಲಿ ತಿನ್ನಬೇಕಾದ ಆಹಾರಗಳು ಯಾವುವು ಎಂಬುದನ್ನು ಎಲ್ಲರೂ ಸಾಮಾನ್ಯವಾಗಿ ತಿಳಿದಿರುತ್ತಾರೆ.

ಇಸ್ರೇಲ್ ನ ಧಾರ್ಮಿಕ ಉತ್ಸವದ ಕಾಲ್ತುಳಿತದಲ್ಲಿ ೪೪ ಮಂದಿ ಸಾವು

ಇಸ್ರೇಲ್​ನ ಹಾರೆಟ್ಜ್ ಪತ್ರಿಕೆಯ ವರದಿ ಪ್ರಕಾರ, ಈ ದುರಂತದಲ್ಲಿ 44ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ ಡೇ : ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಈ ದಿನಾಚರಣೆಯ ಕುರಿತು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು

ಅಂತರ್ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ:
ಈ ದಿನವು ಕಾರ್ಮಿಕ ಸಂಘದ ಚಳುವಳಿಯಿಂದ ಹುಟ್ಟಿಕೊಂಡಿತು. ನಿರ್ದಿಷ್ಟವಾಗಿ ದಿನಕ್ಕೆ ಎಂಟು ಗಂಟೆಗಳಿಗಾಗಿ ನಡೆದ ಚಳುವಳಿಯಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಮತದಾರರಿಗೆ ಧನ್ಯವಾದ ಹೇಳಿದ ಕುಮಾರಸ್ವಾಮಿ

ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ನಾಯಕರು, ಮುಖಂಡರು ಎಲ್ಲಕ್ಕೂ ಮಿಗಿಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಭಿನಂದನೆಗಳು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಣದ ಅಬ್ಬರ, ಜೆಡಿಎಸ್ ಪಕ್ಷದ ವಿರುದ್ಧ ಮಾಡಿದ ಅಪಪ್ರಚಾರಗಳ ನಡುವೆಯೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಕೈ ಹಿಡಿದ ಜನತೆ ಗೌರವಯುತ ತೀರ್ಪು ನೀಡಿರುವುದನ್ನು ಗೌರವಿಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.