vijaya times advertisements
Visit Channel

May 3, 2021

ತಮಿಳುನಾಡು: ಡಿಎಂಕೆ ಗೆದ್ದಿದ್ದಕ್ಕಾಗಿ ನಾಲಗೆ ಕತ್ತರಿಸಿ ಹರಕೆ ತೀರಿಸಿದ ಮಹಿಳೆ

ಹೀಗೊಂದು ಕಷ್ಟಕರವಾದ ಹರಕೆ ತೀರಿಸಿದ ಮಹಿಳೆ ೩೨ ವರ್ಷದ ವನಿತಾ. 2021ರ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದ್ದು, ಅದರಲ್ಲಿ ಡಿಎಂಕೆಗೆ ಬಹುಮತ ಬಂದಿದೆ. ಹೀಗಾಗಿ ಫಲಿತಾಂಶ ಹೊರಬರುತ್ತಿದ್ದಂತೆ ವನಿತಾ ತಮ್ಮ ಹರಕೆ ಸಲ್ಲಿಸಿದ್ದಾರೆ.
ಜನಾದೇಶ ಡಿಎಂಕೆ ಪರವಾಗಿ ಹೊರಬೀಳುತ್ತಿದ್ದಂತೆ ವನಿತಾ ಮುಥಾಲಮ್ಮನ ದೇವಾಲಯಕ್ಕೆ ಹೋಗಿ ತಮ್ಮ ನಾಲಿಗೆ ಕತ್ತರಿಸಿಕೊಂಡಿದ್ದಾರೆ.

`ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಲೋಕಾರ್ಪಣೆ!

ಆಗಿನ ಕಾಲದ ಯುವ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದ ಬಂಗಾರದ ಮನುಷ್ಯ ಚಿತ್ರದ ಪ್ರತಿಯೊಂದು ಘಟನೆಯೂ ವಿಸ್ಮಯ ಮೂಡಿಸುವಂಥದ್ದು. ಹಿಂದೆಂದೂ ಕಂಡು ಕೇಳಿರದ ಮಾಹಿತಿಯನ್ನು ಒಳಗೊಂಡ ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಪುಸ್ತಕ ಲೋಕಾರ್ಪಣೆಯಾಗಿದೆ.

ಬೆಡ್ ಟೀ ಕುಡಿಯುತ್ತಿದ್ದೀರಾ? ಹಾಗಾದರೆ ಈ ಸ್ಟೋರಿ ನೋಡಿ..

ಹೆಚ್ಚಿನ ಜನರು ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯುತ್ತಾರೆ. ಆದರೆ ತಜ್ಞರ ಪ್ರಕಾರ, ಬೆಡ್ ಟೀ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಚಹಾ ನಿಮ್ಮ ಆರೋಗ್ಯವನ್ನು ಹೇಗೆ ಹಾಳುಮಾಡುತ್ತದೆ ಎಂಬುದನ್ನು ತಿಳಿಯಿರಿ.

ಚಾ.ನಗರ ಆಕ್ಸಿಜನ್​ ದುರಂತ: ಸಿಎಂ, ಸಚಿವ ಸುಧಾಕರ್​​ ರಾಜೀನಾಮೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಘಟನೆಯ ನೈತಿಕ ಹೊಣೆ ಹೊತ್ತು, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್‌ ಕೂಡಲೇ ರಾಜೀನಾಮೆ ಕೊಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವೈದ್ಯನೊಬ್ಬನ ಆತ್ಮಹತ್ಯೆಯ ಕಾರಣ ಮನಕಲುಕುವಂತಿದೆ !

ಡಾ. ವಿವೇಕ್ ರೈ ಆತ್ಮಹತ್ಯೆಗೆ ಶರಣಾದ ವೈದ್ಯ. ಈ ಬಗ್ಗೆ ಟ್ವಿಟ್ ಮಾಡಿರುವ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ)ಯ ಮಾಜಿ ಮುಖ್ಯಸ್ಥ ಡಾ. ರವಿ ವಾಂಖೇಡ್ಕರ್, ವಿವೇಕ್ ಓರ್ವ ಪರಿಣಿತ ವೈದ್ಯನಾಗಿದ್ದ. ಅವರು ಉತ್ತರ ಪ್ರದೇಶ ಗೋರಖ್‌ಪುರ್‌ ಮೂಲದವರು. ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ಮಂದಿಯ ಪ್ರಾಣ ಉಳಿಸಿದ್ದಾರೆಂದು ತಿಳಿಸಿದ್ದಾರೆ.

ಚಾಮರಾಜನಗರ ಆಸ್ಪತ್ರೆ ದುರಂತ : ಘಟನೆಯ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಐಎಎಸ್‌ ಅಧಿಕಾರಿ ಶಿವಯೋಗಿ ಕಳಸದ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರ) ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಘಟನೆಯ ಕುರಿತಾಗಿ ತನಿಖಾ ವರದಿಯನ್ನು ಮೂರು ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ.

ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ ಜುಲೈವರೆಗೆ ಮುಂದುವರಿಯಲಿದೆ: ಆಧಾರ್ ಪೂನಾವಾಲಾ

2021 ಜುಲೈ ತಿಂಗಳಲ್ಲಿ ಕೊವಿಡ್ ಲಸಿಕೆಯ ಉತ್ಪಾದನೆ 6-7 ಕೋಟಿ ಡೋಸ್ ನಿಂದ 10 ಕೋಟಿಗೆ ಏರಿಸಲಾಗುವುದು ಎಂದಿದ್ದಾರೆ ಪೂನಾವಾಲಾ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೊವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾದ ಬೆನ್ನಲ್ಲೇ ಪೂನಾವಾಲಾ ಲಸಿಕೆ ಕೊರತೆ ಕುರಿತು ಈ ರೀತಿ ಹೇಳಿದ್ದಾರೆ.

ಐಪಿಎಲ್‌ 2021: ಕೆಕೆಆರ್‌ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್‌: ಇಂದು ನಡೆಯಬೇಕಿದ್ದ ಆರ್‌ಸಿಬಿ-ಕೆಕೆಆರ್‌ ಪಂದ್ಯ ಮುಂದೂಡಿಕೆ

ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಮಿಸ್ಟ್ರೀ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಹಾಗೂ ಬೌಲರ್‌ ಸಂದೀಪ್‌ ವಾರಿಯರ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ತಂಡದ ಸಹ ಆಟಗಾರರು ಹಾಗೂ ವ್ಯವಸ್ಥಾಪನ ಮಂಡಳಿಯಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ.

ಡಾ. ಕೆ ಸುಧಾಕರ್ಗೆ ಖಡಕ್ ವಾರ್ನಿಂಗ್ ನೀಡಿದ ಸಿಎಂ ಯಡಿಯೂರಪ್ಪ

ತಕ್ಷಣವೇ ಚಾಮರಾಜನಗರ ಸೇರಿದಂತೆ ರಾಜದ ಎಲ್ಲಾ ಸಮಸ್ಯೆಗಳು ಸಂಜೆಯೊಳಗೆ ಬಗೆಹರಿಯಬೇಕು. ಇಲ್ಲವಾದರೆ ನಡೆಯುವುದೇ ಬೇರೆ ಎಂದು ಸುಧಾಕರ್‌ಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

ತಮ್ಮ ಜಿಲ್ಲೆಯಲ್ಲಿ 24 ಜನರ ಸಾವಾದರೂ ಡಿಸಿಗೆ ಪರಿವೆಯೇ ಇಲ್ಲ!

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 10.30 ಸುಮಾರಿಗೆ ಆಕ್ಸಿಜನ್ ಸರಬರಾಜು ಮುಗಿದಿದ್ದು, ಈ ದುರಂತಕ್ಕೆ ಕಾರಣವಾಗಿದೆ. ಸದ್ಯ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್ ಗಳು ಸೇರಿದಂತೆ 100 ಆಕ್ಸಿಜನ್ ಬೆಡ್ ಗಳು ಇವೆ.