vijaya times advertisements
Visit Channel

May 3, 2021

ಚಾ.ನಗರ ಕೋವಿಡ್‌ ಸೋಂಕಿತರ ಸಾವಿನ ಪ್ರಕರಣ: ಘಟನೆ ಕುರಿತು ರಾಹುಲ್‌ ಗಾಂಧಿ ಟ್ವೀಟ್‌

ಈ ನಡುವೆ ಆಕ್ಸಿಜನ್ ಕೊರತೆಯಿಂದ 23 ಜನ ಕೊರೊನಾ ಸೋಂಕಿತರು ಮೃತರಾಗಿರುವ ಕುರಿತು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರಿಂದ ಮಾಹಿತಿ ಪಡೆದಿದ್ದಾರೆ. ದೂರವಾಣಿ ಮೂಲಕ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ ಸಿಎಂ, ಘಟನೆ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ.

ಸೇನಾ ವಿಮಾನದ ಮೂಲಕ ವಿದೇಶಗಳಿಂದ ಭಾರತಕ್ಕೆ ಆಕ್ಸಿಜನ್ ಕಂಟೇನರ್​ಗಳ ಏರ್​ಲಿಫ್ಟ್

ಈಗಾಗಲೇ ನಾನಾ ದೇಶಗಳು ಭಾರತಕ್ಕೆ ಆಕ್ಸಿಜನ್ ಸರಬರಾಜು ಮಾಡಿವೆ. ದೇಶದ ನಾನಾ ಭಾಗಗಳಿಗೆ ತ್ವರಿತವಾಗಿ ಆಕ್ಸಿಜನ್ ಪೂರೈಕೆ ಮಾಡಲು ಭಾರತೀಯ ವಾಯುಪಡೆ ಕೂಡ ಕೈ ಜೋಡಿಸಿದ್ದು, ಸೇನಾ ವಿಮಾನದ ಮೂಲಕ ಆಕ್ಸಿಜನ್ ಟ್ಯಾಂಕರ್​ಗಳ ಸಾಗಾಟ ಮಾಡಲಾಗುತ್ತಿದೆ.

ಚಾಮರಾಜನಗರ ದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿ ಮತ್ತು ಜನರು ಕಾರಣ ; ಸಚಿವ ಸುರೇಶ್‌ ಕುಮಾರ್‌

ಕೋವಿಡ್‌ ಸೋಂಕಿತರು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರಬೇಡಿ. ಈ ಬಗ್ಗೆ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದೇವೆ. ಆದ್ರೆ ಜನರು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಬಗ್ಗೆ ಡೆತ್‌ ರಿಪೋರ್ಟ್‌ನಲ್ಲಿ ಮಾಹಿತಿ ಪಡೆದುಕೊಳ್ಳುತ್ತೇನೆ.

ಕೊರೋನಾಗೆ ಕಡಿವಾಣ ಹಾಕಲು ಲಾಕ್ ಡೌನ್ ಬಗ್ಗೆ ಆಲೋಚಿಸಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಭಾನುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ. ‘ಲಾಕ್​ಡೌನ್​ನ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ನಮಗೆ ಅರಿವಿದೆ. ಆದರಲ್ಲಿಯೂ ಬಡವರ ಮೇಲೆ ಲಾಕ್​ಡೌನ್​ನ ಪರಿಣಾಮಗಳು ತೀವ್ರತರವಾಗಿರುತ್ತವೆ ಎಂಬುದು ನಮಗೆ ತಿಳಿದಿದೆ. ಲಾಕ್​ಡೌನ್ ಹೇರಿದರೆ ಈ ಸಮುದಾಯದ ಹಿತ ಕಾಪಾಡಲು ಅಗತ್ಯ ಕ್ರಮಗಳನ್ನೂ ಸರ್ಕಾರಗಳು ತೆಗೆದುಕೊಳ್ಳಬೇಕು’.

ಕಳೆದ ಒಂದೇ ದಿನದಲ್ಲಿ ಕೊರೋನಾದಿಂದ 3, 417 ಮಂದಿ ಸಾವು

ದೆಹಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಆಕ್ಸಿಜನ್ ಸಿಗದೆ 12 ಮಂದಿ ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ 2021 ಮೇ 3 ಮಧ್ಯರಾತ್ರಿಗಿಂತ ಮುಂಚೆ ಆಕ್ಸಿಜನ್ ಕೊರತೆ ನೀಗಿಸುವ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ.

ಚಾಮರಾಜನಗರ: ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಗೆ 12, ಒಟ್ಟು 23 ಸೋಂಕಿತರು ಸಾವು: ಸರ್ಕಾರದ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ

ಆಮ್ಲಜನಕ ಕೊರತೆಯಿಂದ 12 ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನಿಖರ ಸಂಖ್ಯೆಯನ್ನು ಆಸ್ಪತ್ರೆ, ಜಿಲ್ಲಾಡಳಿತ ಮುಚ್ಚಿಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ 24 ಮಂದಿ ಸಾವು

ನಿನ್ನೆ ರಾತ್ರಿ ಆಕ್ಸಿಜನ್ ಖಾಲಿಯಾಗಿದೆ ಎಂದು ರೋಗಿಗಳ ಸಂಬಂಧಿಕರ ಆರೋಪ ಮಾಡುತ್ತಿದ್ದು, ಜಿಲ್ಲಾಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಆಕ್ಸಿಜನ್ ಕೊರತೆಯಿಂದ ನನ್ನ ಅಣ್ಣ ಮೃತ ಪಟ್ಟಿದ್ದಾನೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಭರ್ಜರಿ ಜಯ; ದೀದಿಗೆ ಮೋದಿ ಅಭಿನಂದನೆ

ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿರುವ ಮಮತಾ ದೀದಿಗೆ ಅಭಿನಂದನೆಗಳು. ಬಂಗಾಳಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದ್ದು, ಕೋವಿಡ್​ ವಿರುದ್ಧದ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದಿದ್ದಾರೆ.

ಮುಂದಿನ ಸಿಎಂ ಹುದ್ದೆ ಕನಸು ಕಾಣುತ್ತಿರುವ ನೀವು ಕನಿಷ್ಠ ಸ್ವಂತ ಪಕ್ಷಕ್ಕಾದರೂ ಮೋಸ ಮಾಡುವುದನ್ನು ಬಿಡಿ: ಸಿದ್ದುಗೆ ಎಚ್‌ಡಿಕೆ ಟಾಂಗ್‌

ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ, ಬಸವ ಕಲ್ಯಾಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಕ್ಕಾಗಿ ಕಾಂಗ್ರೆಸ್ ಸೋತಿದೆ ಎಂದು ಹೇಳಿದ್ದೀರಿ.