vijaya times advertisements
Visit Channel

May 6, 2021

ತನ್ನೆಲ್ಲಾ ಚಾಲಕರಿಗೆ ಲಸಿಕೆ ಪಡೆದುಕೊಳ್ಳಲು ಪ್ರೋತ್ಸಾಹ ಧನನ ನೀಡಲು ಮುಂದಾದ ಉಬರ್ ಸಂಸ್ಥೆ!

ಎಲ್ಲಾ ಉದ್ಯಮ ಕ್ಷೇತ್ರಗಳು ತನ್ನ ಉದ್ಯೋಗಿಗಳಿಗೆ ಲಸಿಕೆಯನ್ನು ಹಾಕಿಸಿಕೊಳ್ಲುವಂತೆ ಕೇಳಿಕೊಳ್ಳುತ್ತಿದ್ದು ಮತ್ತು ಎಷ್ಟೋ ಖಾಸಗಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿವೆ, ಮಾತ್ರವಲ್ಲದೇ, ಕೆಲವೊಂದು ಕಂಪೆನಿಗಳು ಲಸಿಕೆಯ ವೆಚ್ಚವನ್ನೂ ಕೂಡ ಭರಿಸುತ್ತಿವೆ. ಅಂತಹ ಕಂಪೆನಿಗಳ ಸಾಲಿಗೆ ಈಗ ಉಬರ್ ಸಂಸ್ಥೆ ಕೂಡ ಸೇರ್ಪಡೆಯಾಗಿದೆ.

ಹೋಮಿಯೋಪತಿ ಔಷಧ ಸೇವಿಸಿ ಒಂದೇ ಕುಟುಂಬದ 8 ಮಂದಿ ಸಾವು

ಛತ್ತೀಸಗಢದ ಬಿಲಾಸ್ ಪುರದಲ್ಲಿ ಒಂದೇ ಕುಟುಂಬದ 8 ಮಂದಿ ಹೋಮಿಯೋಪಥಿ ವೈದ್ಯರೊಬ್ಬರ ಬಳಿಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಆದರೆ ಆ ಹೋಮಿಯೋಪಥಿ ವೈದ್ಯರು ಆ ಕುಟುಂಬದವರಿಗೆ Drosera 30 ಎಂಬಂತ ಮಾತ್ರೆ ನೀಡಿದ್ದಾರೆ. ಹೀಗೆ ವೈದ್ಯರು ನೀಡಿದಂತ ಮಾತ್ರೆ ಸೇವಿಸಿದ ಒಂದೇ ಕುಟುಂಬದ 8 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಭೀಕರ ದುರ್ಘಟನೆಯೊಂದು ಸಂಭವಿಸಿದೆ.

ಸರ್ಕಾರಿ ಆಸ್ಪತ್ರೆಗೆ ಹೊದವರು ಶವವಾಗಿ ಬರುತ್ತಿದ್ದಾರೆ; ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪ

ನಿಮಗೆ ಕೈ ಮುಗಿದು ಕೇಳುತ್ತೇನೆ, ಬಡವರ ಜೀವ ಉಳಿಸಿಕೊಡಿ, ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ, ರಾಜ್ಯದಲ್ಲಿ 56 ಮೆಡಿಕಲ್ ಕಾಲೇಜುಗಳಿವೆ, ಕಾಲೇಜು ವೈದ್ಯರನ್ನು ಕರೆದು ಮಾತನಾಡಿ, ಒಬ್ಬೊಬ್ಬರ ಬಳಿ 700 ಬೆಡ್‌ಗಳಿವೆ ಎಂದರು

ಲಸಿಕೆಯ ಪೇಟೆಂಟ್‌ ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾಕ್ಕೆ ಜೋ ಬೈಡನ್ ಆಡಳಿತ ಬೆಂಬಲ

ಈ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಮತ್ತು ದಕ್ಷಿಣ ಆಫ್ರಿಕಾದ ರಾಜತಾಂತ್ರಿಕರು ಅಮೆರಿಕದ ಸೆನೆಟರ್‌ಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಈಗ ಅಮೆರಿಕ ಸಹ ಬೆಂಬಲ ನೀಡಿದೆ.

ಮೇ.12ರ ನಂತರ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್: ಎಸ್ ಸುರೇಶ್ ಕುಮಾರ್ ಸುಳಿವು

ಈ ಕುರಿತಂತೆ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಹೀಗಿದ್ದೂ ಸೋಂಕಿನ ನಿಯಂತ್ರಣ ಆಗ್ತಾ ಇಲ್ಲ. ಕಳೆದ 12 ದಿನಗಳಿಂದ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳು ಏನ್ ಆಗಿವೆ ಎನ್ನುವ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.

ಕೊರೋನಾದ ಮೂರನೇ ಅಲೆಗೆ ಇಂದೇ ಸಿದ್ದರಾಗಿ: ಕೇಂದ್ರಕ್ಕೆ ಸುಪ್ರೀಮ್ ಸಲಹೆ

ದೇಶವ್ಯಾಪಿ ಆಮ್ಲಜನಕ ಬಿಕ್ಕಟ್ಟಿನ ನಡುವೆ, ದೆಹಲಿಯ COVID-19 ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಪ್ರತಿದಿನ 700 ಮೆ.ಟನ್ ಗೆ ಹೇಗೆ ಹೆಚ್ಚಿಸಲು ಸಾಧ್ಯ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಮುಂದೆ ಹೇಳಿದರು. 700 ಮೆಟ್ರಿಕ್ ಟನ್ ಆಮ್ಲಜನಕದ ಬದಲು, COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ದೆಹಲಿಗೆ 730 ಮೆಟ್ರಿಕ್ ಟನ್ ಪೂರೈಕೆ ಮಾಡಲಿದೆ ಎಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು.

ಕೊರೊನಾ ಲಸಿಕೆ ಹಂಚಿಕೆಯಲ್ಲೂ ಕೇಂದ್ರದಿಂದ ತಾರತಮ್ಯ : ಎಚ್ಡಿಕೆ ಕಿಡಿ

ರಾಜ್ಯಕ್ಕೆ ಕೇಂದ್ರ ಸರ್ಕಾರ ಲಸಿಕೆ ನೀಡುತ್ತಿಲ್ಲವೇ? ರಾಜ್ಯಕ್ಕೆ ಏನು ಬೇಕೋ ಅದನ್ನು ಕೇಳಿ ಪಡೆಯಲು ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲವೇ? ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರಶ್ನಿಸಲು ನಮ್ಮವರಿಗೆ ಬಾಯಿ ಇಲ್ಲವೇ? ಇದೆಲ್ಲ ಗಮನಿಸುತ್ತಿದ್ದರೆ, ಕನ್ನಡರಿಗರನ್ನು ಈ ಸರ್ಕಾರಗಳು ಹಣೆಬರಹಕ್ಕೆ ಬಿಟ್ಟಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಬೇಡಿ, ವಿಷಕಾರಿಯಾಗುತ್ತದೆ!

ಅಂತಹ ಆಹಾರವು ಪೌಷ್ಠಿಕಾಂಶದ ಮೌಲ್ಯವನ್ನು ಮತ್ತು ರುಚಿಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಸೇವಿಸಿದ ವ್ಯಕ್ತಿಗೆ ಅನೇಕ ರೀತಿಯ ಕಾಯಿಲೆಗಳ ಅಪಾಯವನ್ನುಂಟು ಮಾಡುತ್ತದೆ. ಆದ್ದರಿಂದ ಯಾವ ಆಹಾರಗಳನ್ನು ಮತ್ತೆ ಬೇಯಿಸಿ ತಿನ್ನಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಒಂದು ವಾರಗಳ ಕಾಲ ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್

ಈಗಿರುವ ಮಿನಿ ಲಾಕ್​ಡೌನ್​ನಿಂದಾಗಿ ಯಾವುದೇ ಪ್ರಯೋಜನವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮಿನಿ ಲಾಕ್​ ಡೌನ್​ ಹೇರಿದ್ದರೂ ಜನರು ಮನೆಯಿಂದಾಚೆ ಹೊರಬರುತ್ತಿದ್ದುದರಿಂದ ಕಠಿಣ ಕ್ರಮಗಳೊಂದಿಗೆ ಸಂಪೂರ್ಣಲಾಕ್ ಡೌನ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಕವಿರತ್ನ ಕಾಳಿದಾಸ, ಅನುಪಮ ಸಿನಿಮಾಗಳ ನಿರ್ದೇಶಕ ರೇಣುಕಾ ಶರ್ಮಾ ನಿಧನ

ರೇಣುಕಾ ಶರ್ಮ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಹಿರಿಯ ಚಿತ್ರ ನಿರ್ದೇಶಕ ರೇಣುಕಾಶರ್ಮ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಕೋವಿಡ್ ನಿಂದಾಗಿ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗಾಗಿ ದಾಖಲಾಗಿದ್ದರು.