vijaya times advertisements
Visit Channel

May 14, 2021

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ: ಕೇಜ್ರಿವಾಲ್‌

ಕಳೆದ 24 ತಾಸುಗಳಲ್ಲಿ ದಿಲ್ಲಿಯಲ್ಲಿ 10ಸಾವಿರಕ್ಕಿಂತ ಕಡಿಮೆ ಕೋವಿಡ್‌ ಪ್ರಕರಣಗಳು ಕಂಡುಬಂದಿವೆ. ಇತ್ತೀಚಿನ ದಿನಗಳಲ್ಲಿ ಇದೇ ಕಡಿಮೆ ಪ್ರಕರಣ ಎಂದು ಅವರು ತಿಳಿಸಿದರು.

ರಾಜ್ಯಕ್ಕೆ ಕೊವಿಡ್ ಲಸಿಕೆ ಯಾವಾಗ ಕೊಡುತ್ತೀರಿ: ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ

ರಷ್ಯಾ ಅಥವಾ ಕ್ಯೂಬಾದಿಂದ ತೆಗೆದುಕೊಂಡು ಬರುವುದಾದರೂ ಸರಿ, ನಮಗೆ ಸಾಧ್ಯವಾದಷ್ಟು ಲಸಿಕೆ ಬೇಕು ಎಂದು ರಾಜ್ಯ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಎಂಆರ್ ಅನಿತಾ ಅವರ ವಿಭಾಗೀಯ ಪೀಠವು ಕೊವಿಡ್ ಲಸಿಕೆಗಳನ್ನು ರಾಜ್ಯಕ್ಕೆ ಯಾವಾಗ ಪೂರೈಸುತ್ತೀರಿ? ಪೂರೈಸುವ ಕಾಲಾವಧಿ ಬಗ್ಗೆ ತಿಳಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿತು.

ಗೋವಾ : ವೈದ್ಯಕೀಯ ಕಾಲೇಜಿನಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ, 13 ರೋಗಿಗಳು ಸಾವು

ರೋಗಿಗಳ ಸಂಬಂಧಿಕರು ಸೋಷಿಯಲ್ ಮೀಡಿಯಾದಲ್ಲಿ ಸಹಾಯ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದು, ಆರೋಗ್ಯ ಕಾರ್ಯದರ್ಶಿ ರವಿ ಧವನ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸರಬರಾಜನ್ನು ಪುನಃಸ್ಥಾಪಿಸಲು ಆಸ್ಪತ್ರೆಗೆ ಧಾವಿಸಿದ್ದಾರೆ. ಮುಂಜಾನೆ 2.30 ರ ಹೊತ್ತಿಗೆ ಈ ಘಟನೆ ಸಂಭವಿಸಿದೆ.

ಕೊರೊನಾ ಲಸಿಕೆ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯಕ್ಕೆ ಸಿದ್ದರಾಮಯ್ಯ ಕಿಡಿ

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಶುಕ್ರವಾರ ಮಾತನಾಡಿದ ಅವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಪ್ರತಿ ವರ್ಷ 2 ಕೋಟಿ ರೂ., ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತಿದ್ದು, ಪ್ರದೇಶಾಭಿವೃದ್ಧಿ ನಿಧಿ ಎಂದು ನೀಡಲಾಗುತ್ತದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ಲಸಿಕೆ ಖರೀದಿಸಲು ರಾಜ್ಯ ಸರಕಾರಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜನರ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಿ, ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ: ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್ಡಿಕೆ ಕಿಡಿ

ಬೆಂಗಳೂರು, ಮೇ. 14: ಕೋವಿಡ್ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಬಗ್ಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜನರ ಆಶಯಕ್ಕೆ ತಕ್ಕಂತೆ

ನಾಳೆ ಕೇರಳ ಪ್ರವೇಶಿಸಲಿದೆ ತೌಕ್ತೆ ಚಂಡಮಾರುತ: ಕರ್ನಾಟಕದಲ್ಲಿ ಮೇ ೧೬ರಂದು ಭಾರಿ ಮಳೆ ನಿರೀಕ್ಷೆ

ನಾಳೆ ಕೇರಳಕ್ಕೆ ಪ್ರವೇಶಿಸಲಿರುವ ತೌಕ್ತೆ ಚಂಡಮಾರುತ ಮೇ 16ರಂದು ಕರ್ನಾಟಕದಲ್ಲಿ ಅಬ್ಬರಿಸಲಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರಂ, ಕಾಸರಗೋಡು, ಕಣ್ಣೂರು, ವಯನಾಡ್, ಕೋಳಿಕೋಡ್, ಮಲಪ್ಪುರಂ, ಕೊಲ್ಲಂ, ಪಥನಾಂತಿಟ್ಟ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಉತ್ತರ ಪ್ರದೇಶ: ಚಂದೌಲಿ, ವಾರಣಾಸಿಯಲ್ಲಿ ಹರಿಯುವ ಗಂಗಾ ನದಿಯಲ್ಲಿ 14 ಮೃತದೇಹ ಪತ್ತೆ

ಧನಪುರದ ಬಡೌರಾ ಘಾಟ್ ಪ್ರದೇಶದಲ್ಲಿನ ಶವಗಳು ಪತ್ತೆಯಾಗಿರುವ ಬಗ್ಗೆ ಚಂದೌಲಿ ನಿವಾಸಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು. ಪತ್ತೆಯಾಗಿರುವ ಮೃತದೇಹಗಳು ಒಂದು ವಾರಕ್ಕಿಂತಲೂ ಹಳೆಯದಾಗಿ ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಹೀಗೆ ಪತ್ತೆಯಾದ ಶವಗಳನ್ನು ಗಂಗಾ ನದಿ ದಡದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ

ರೋಗಲಕ್ಷಣಗಳಿಲ್ಲದೇ, ನಿಮ್ಮ ಜೀವಕ್ಕೆ ಅಪಾಯ ಮಾಡಬಹುದಾದಂತಹ ಕಾಯಿಲೆಗಳ ಬಗ್ಗೆ ತಿಳಿಯಿರಿ

ಹೆಚ್ಚಿನ ರೀತಿಯ ಕ್ಯಾನ್ಸರ್ಗಳು ಆರಂಭಿಕ ಹಂತದಲ್ಲಿ ಲಕ್ಷಣರಹಿತವಾಗಿರುತ್ತವೆ. ತಡವಾಗಿ ಪತ್ತೆಹಚ್ಚುವುದು ಭಾರತದಲ್ಲಿ ಹೆಚ್ಚಿನ ಕ್ಯಾನ್ಸರ್ ಸಾವಿಗೆ ಕಾರಣ ಎಂದು ನಂಬಲಾಗಿದೆ. ಇಂತಹ ನಿಮಗೆ ತಿಳಿಯದೆ ನೀವು ಬಳಲುತ್ತಿರುವ 5 ಕಾಯಿಲೆಗಳನ್ನು ಕೆಳಗೆ ನೀಡಲಾಗಿದೆ.

ನೀವು ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವವರಾ? ಈ ಸ್ಟೋರಿ ನೋಡಿ

ಮೊಬೈಲ್ ಸ್ಕ್ರೋಲಿಂಗ್ ಜನರ ಅಭ್ಯಾಸವಾಗಿ ಮಾರ್ಪಟ್ಟಿದೆ. ಆದರೆ ಇದರ ಅನಾನುಕೂಲದ ಬಗ್ಗೆ ಗಮನ ಕೊಡುವುದಿಲ್ಲ. ನೀವು ಕೂಡ ಮೊದಲು ಎದ್ದು ಮೊಬೈಲ್ ಚೆಕ್ ಮಾಡಿದರೆ, ಅದು ನಿಮ್ಮ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ರಷ್ಯಾದ ಸ್ಪುಟ್ನಿಕ್‌ – ವಿ ಲಸಿಕೆಯ ಪ್ರತಿ ಶಾಟ್‌ಗೆ ದರ ನಿಗದಿ

ಸ್ಪುಟ್ನಿಕ್​ ವಿ ಲಸಿಕೆಯ ಪ್ರತಿ ಡೋಸ್​ನ ಬೆಲೆ 948 ರೂಪಾಯಿ ಆಗಿದ್ದು ಇದಕ್ಕೆ 5 ಪ್ರತಿಶತ ಜಿಎಸ್​ಟಿ ಮೊತ್ತವನ್ನ ಸೇರಿಸಿ 995.40 ರೂಪಾಯಿ ನಿಗದಿಯಾಗಿದೆ. ಆದಾಗ್ಯೂ, ಭಾರತದಲ್ಲೇ ಲಸಿಕೆಯ ಡೋಸ್​ಗಳನ್ನ ತಯಾರು ಮಾಡಿದ್ದಲ್ಲಿ ಈ ದರವು ಕಡಿಮೆಯಾಗಲಿದೆ ಎನ್ನಲಾಗಿದೆ.