vijaya times advertisements
Visit Channel

July 5, 2021

ಬಾವಿ ಕಳ್ಳತನವಾಗಿದೆ ಎಂದು ಪೋಲಿಸ್‌ ಠಾಣೆ ಮೆಟ್ಟಿಲೇರಿದ ರೈತ

ಕೈಯಲ್ಲಿ ಪೇಪರ್‌ ಹಿಡಿದು ನಿಂತಿರುವ ಈ ವ್ಯಕ್ತಿಯ ಹೆಸರು ರೈತ ಮಲ್ಲಪ್ಪ ಕುಲುಗಡೆ ಮಾವಿನಹೊಂಡ ಗ್ರಾಮದ ನಿವಾಸಿ ಸದ್ಯ ರಾಯಬಾಗ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ರೈತ ಮಲ್ಲಪ್ಪ ಅವರು ಜಮೀನು ಸರ್ವೆ ನಂಬರ 21/1. ಇದ್ದು ಇವರ ಎಕರೆ ಜಮೀನನ್ನ ಭೇಂಡವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನಹೊಂಡ ಗ್ರಾಮದಲ್ಲಿ ಹೋಂದಿದ್ದಾರೆ.

ಕೆಆರ್‌ಎಸ್‌ ಸೋರಿಕೆ ವಿಚಾರ: ಹೆಚ್‌ಡಿಕೆ ಹೇಳಿಕೆಗೆ ಸಂಸದೆ ಸುಮಲತಾ ಟಾಂಗ್‌

ವಿಧಾನ‌ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ
ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಸಂಸ್ಕೃತಿ, ವ್ಯಕ್ತಿತ್ವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ.

ಡಾ. ಕಾಮಿನಿರಾವ್ ಜನ್ಮದಿನ ಸಂಭ್ರಮ

ಬಂಜೆತನಕ್ಕೆ ಚಿಕಿತ್ಸೆ ನೀಡುವ ಕೆಲಸದ ಜತೆಗೆ ಕಾಮಿನಿ ರಾವ್ ಫೌಂಡೇಷನ್, ಪೂರ್ವಿ ಪ್ರೊಡಕ್ಷನ್ಸ್ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿಯೂ ಕೆಲಸಗಳು ನಡೆಯುತ್ತಿವೆ. ಇದೀಗ ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿದ್ದೇವೆ. ಇದಕ್ಕೆ ನನ್ನ ಇಡೀ ಕುಟುಂಬ ಒಟ್ಟಾಗಿ ಕೆಲಸ ಮಾಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದ್ದು, ಡಾ. ಕಾಮಿನಿ ರಾವ್ ಕೇರ್ಸ್ ಎಕ್ಸ್​​ಲೆನ್ಸ್ ಅವಾರ್ಡ್ಸ್​ ಮೂಲಕ ಪ್ರಶಸ್ತಿಯನ್ನು ಘೋಷಿಸಿದ್ದೇವೆ.

ನಿಶ್ಚಿತಾರ್ಥದ ಸಂಭ್ರಮದಲ್ಲಿ ನಿರ್ದೇಶಕ ಮಂಸೋರೆ

ಕುಟುಂಬದವರು ಹಾಗೂ ಕೆಲವು ಗೆಳೆಯರ ಸಮಕ್ಷಮದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಮದುವೆಗೆ ಆಗಸ್ಟ್ 15ನೇ ತಾರೀಖು ದಿನಾಂಕ ನಿಗದಿ ಆಗಿದೆ. ಮಂಸೋರೆ ಅವರ ವೃತ್ತಿಜೀವನದಲ್ಲಿ ಮಾಧ್ಯಮ ಮಿತ್ರರು ಹಾಗೂ ಚಿತ್ರರಂಗದ ಹಲವಾರು ಸ್ನೇಹಿತರು ಭಾಗಿಯಾಗಿರುವುದರಿಂದ, ಮಾಧ್ಯಮಗಳ ಮೂಲಕವೇ ಅವರೆಲ್ಲರಿಗೂ ತಮ್ಮ ಮದುವೆ ನಿಶ್ಚಯವಾಗಿರುವ ಶುಭಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಅನ್‌ಲಾಕ್ ಬೆನ್ನಲ್ಲೇ BMTC ಪ್ರಯಾಣಿಕರಿಗೆ ಶಾಕ್: ಶೀಘ್ರವೇ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ

ಇಂಧನ ದರಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡುವ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಲಿದೆ. ಈಗಾಗಲೇ ಲಾಕ್ ಡೌನ್, ಇಂಧನ ಬೆಲೆ ಏರಿಕೆಯಿಂದಾಗಿ ಬಿಎಂಟಿಸಿ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಕುತ್ತಿಗೆಯಡಿಯಲ್ಲಿ ಆಗಿರುವ ಕಪ್ಪುತನವನ್ನು ಹೋಗಲಾಡಿಸುವ ಮನೆಮದ್ದುಗಳು

ಕತ್ತಿನ ಭಾಗದಲ್ಲಿ ಕಪ್ಪಾಗಲು ಕಾರಣವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ಮೊದಲ ಕಾರಣವೆಂದರೆ ಸರಿಯಾದ ನೈರ್ಮಲ್ಯ ಕಾಪಾಡಿಕೊಳ್ಳದೇ ಇರುವುದು. ಸೌಂದರ್ಯವರ್ಧಕಗಳಲ್ಲಿನ ರಾಸಾಯನಿಕಗಳು, ಮಾಲಿನ್ಯಕಾರಕಗಳು ಮಧುಮೇಹವೂ ಇದಕ್ಕೆ ಕಾರಣವಾಗುವ ಇತರ ಕೆಲವು ಕಾರಣಗಳು. ಆದರೆ ಚಿಂತಿಸಬೇಡಿ! ನಿಮಗಾಗಿ ನಾವಿಲ್ಲಿ ಕೆಲವೊಂದು ಕೆಲವೊಂದು ಮನೆಮದ್ದುಗಳನ್ನು ಹೊತ್ತು ತಂದಿದ್ದೇವೆ.

ಅಲೋಪತಿ ವಿರುದ್ಧ ಹೇಳಿಕೆ ಕುರಿತು ಜುಲೈ 12ರಂದು ಬಾಬಾ ರಾಮ್​​ದೇವ್ ಮನವಿ ಆಲಿಸಲಿದೆ ಸುಪ್ರೀಂ

ತನಿಖೆಗೆ ತಡೆ ನೀಡಲು ಮತ್ತು ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲು ಬಾಬಾ ರಾಮ್ ದೇವ್ ಮನವಿ ಮಾಡಿದುದರ ಬೆನ್ನಲ್ಲೇ ಅಲೋಪತಿ ಔಷಧದ ಬಳಕೆಯ ಬಗ್ಗೆ ರಾಮ್ ದೇವ್ ಅವರ ಹ ಹೇಳಿಕೆಗಳ ಮೂಲ ದಾಖಲೆಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್‌: ದ್ವಿತೀಯ ಪಿಯುಸಿ ರಿಪೀಟರ್ಸ್‌ಗೆ ಸಿಹಿಸುದ್ದಿ

ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಮಾಹಿತಿ ನೀಡಿದೆ.
ರಿಪೀಟರ್ಸ್‌ಗೆ ಶೇ. 35ರಷ್ಟು ಅಂಕ ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಾಲಿನಲ್ಲಿ 76 ಸಾವಿರ ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ ಎನ್ನಲಾಗಿದೆ.

ಕೆಆರ್‌ಎಸ್‌ ಸೋರುತ್ತಿದ್ರೆ ನೀರು ನಿಲ್ಲಲು ಸುಮಲತಾ ಅವರನ್ನೇ ಅಡ್ಡಲಾಗಿ ಮಲಗಿಸ್ಬೇಕು: ಸಂಸದೆ ವಿರುದ್ಧ ಎಚ್‌ಡಿಕೆ ಟೀಕೆ

ಕೆಆರ್‌ಎಸ್‌ ಅನ್ನು ಇವರೇ ರಕ್ಷಿಸುತ್ತಿದ್ದಾರೆ ಎನ್ನುವ ರೀತಿ ಹೇಳಿದ್ದಾರೆ. ಕೆಆರ್‌ಎಸ್‌ ಸೋರುತ್ತಿದ್ದರೆ ನೀರು ಸೋರದಂತೆ ಸುಮಲತಾರನ್ನು ಮಲಗಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ, ಬರೋದಿಲ್ಲ. ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿ. ಸಂಸದರಾಗಿ ಮಂಡ್ಯ ಕ್ಷೇತ್ರದ ಜನರ ಸೇವೆ ಮಾಡಲಿ ಎಂದಿದ್ದಾರೆ.