vijaya times advertisements
Visit Channel

July 24, 2021

ಬಂದೂಕು ಹಿಡಿದು ಸೆಲ್ಫಿಗೆ ಪೋಸ್: ಆಕಸ್ಮಿಕವಾಗಿ ಗುಂಡು ಹಾರಿ ನವವಿವಾಹಿತೆ ಸಾವು

ಮೃತಯುವತಿ ರಾಧಿಕಾ ಗುಪ್ತಾ (26) ತನ್ನ ಮಾವನ ಸಿಂಗಲ್‌‌ ಬ್ಯಾರೆಲ್‌ ಬಂದೂಕಿನ ಜೊತೆ ಸೆಲ್ಫಿ ಕ್ಲಿಕ್ಕಿಸುವಲ್ಲಿ ತೊಡಗಿದ್ದಳು. ಆದರೆ ಸೆಲ್ಫಿಗೆ ಪೋಸ್‌ ನೀಡುವ ವೇಳೆ ಬಂದೂಕಿನಲ್ಲಿ ಗುಂಡು ತುಂಬಿರುವುದು ಆಕೆಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಬಂದೂಕಿನ ನಳಿಕೆಯನ್ನು ಎಳೆದಿದ್ದು, ಈ ಸಂದರ್ಭ ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿದೆ.

ಎದೆಹಾಲು ನೀಡುವ ತಾಯಂದಿರು ಈ ಆಹಾರಗಳಿಂದ ದೂರವಿರಿ

ನವಜಾತ ಶಿಶುವಿನಲ್ಲಾಗುವ ಬದಲಾವಣೆಗಳಿಗೆಲ್ಲಾ ನೀವು ನೀಡುವ ಎದೆಹಾಲು ಕೂಡ ಒಂದು ಕಾರಣವಾಗಿರುವದರಿಂದ ನೀವು ಸೇವಿಸುವ ಆಹಾರದ ಮೇಲೂ ನಿಗಾ ವಹಿಸುವುದು ಉತ್ತಮ. ಆದ್ದರಿಂದ ಸ್ತನ್ಯಪಾನ ಮಾಡುವಾಗ ಏನು ತಿನ್ನಬಾರದು ಎಂಬ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ.

ಜುಲೈ 27ರಿಂದ ಭಾರತ ಪ್ರವಾಸ ಆರಂಭಿಸಲಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್

ಭಾರತಕ್ಕೆ ಇದು ಬ್ಲಿಂಕೆನ್‌ ಅವರ ಮೊದಲ ಭೇಟಿಯಾಗಿದೆ. ಈ ಪ್ರವಾಸದ ಸಮಯದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ ಸ್ಪೋಟ; ಏಳು ಮಂದಿ ಸಾವು

ಕಾರ್ಖಾನೆಯೊಂದರ ಕೆಲವು ಕಾರ್ಮಿಕರು ಮತ್ತು ಅವರ ಕುಟುಂಬದವರು ಸಣ್ಣ ಕೊಠಡಿಯೊಂದರಲ್ಲಿ ಮಲಗಿದ್ದರು. ಈ ವೇಳೆ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಈ ಬಗ್ಗೆ ಎಚ್ಚರಿಕೆ ನೀಡಲು ನೆರೆ ಮನೆಯವರು ಬಾಗಿಲು ತಟ್ಟಿದ್ಧಾರೆ.

ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ: ನಳಿನ್ ಕುಮಾರ್‌ ಕಟೀಲ್ ಟೀಕೆ

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅತೀ ಹೆಚ್ಚು ಅವಮಾನ ಮಾಡಿದ್ದೇ ಕಾಂಗ್ರೆಸ್. ಮೊದಲ ಸಚಿವ ಸಂಪುಟದಲ್ಲಿಯೇ ಅಂಬೇಡ್ಕರ್ ನೋವಿನಿಂದ ಹೊರ ಬರುವಂತೆ ಮಾಡಿದರು. ಲೋಕಸಭೆ ಚುನಾವಣೆಗೆ ಅಂಬೇಡ್ಕರ್ ನಿಂತಾಗ ಕಾಂಗ್ರೆಸ್ ಅವರನ್ನು ಸೋಲಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ. ಅವರಿಗೆ ಭಾರತರತ್ನವನ್ನು ಕೊಡಲಿಲ್ಲ.

ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಹೊಟ್ಟೆಯ ನೋವು ತಡೆಯುವುದು ಹೇಗೆ?

ಹೊಟ್ಟೆಯ ಜ್ವರ ಅಥವಾ ಜಠರದ ಸೋಂಕು ನೀರಿನಿಂದ ಹರಡುವ ರೋಗಗಳಲ್ಲಿ ಸಾಮಾನ್ಯವಾಗಿದೆ. ಈ ಸಮಸ್ಯೆಯಿಂದ ನೀವು ಸಹ ತೊಂದರೆಗೀಡಾಗಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ಮಳೆಗಾಲದಲ್ಲಿ ನೀವು ಹೊಟ್ಟೆಯ ಸೋಂಕಿನಿಂದ ದೂರವಿರಬಹುದು.

ನುಗ್ಗೆ ಸೊಪ್ಪಿನಲ್ಲಿದೆ ಕೂದಲಿನ ಸಮಸ್ಯೆ ನಿವಾರಿಸುವ ಶಕ್ತಿ

ಇದು ಪ್ರೋಟೀನ್, ಜೀವಸತ್ವಗಳು, ಬೀಟಾ-ಕ್ಯಾರೋಟಿನ್, ಅಮೈನೋ-ಆಮ್ಲಗಳು ಮತ್ತು ವಿವಿಧ ಫೀನಾಲಿಕ್‌ಗಳ ಉತ್ತಮ ಮೂಲವಾಗಿದ್ದು, ಕೂದಲಿಗೆ ಕೆಲವು ಮಾಂತ್ರಿಕ ಪ್ರಯೋಜನಗಳನ್ನು ನೀಡುವುದು. ಅವುಗಳಾವುವು? ಅದನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ವಿಯೆಟ್ನಾಂ: ಹನೊಯಿನಲ್ಲಿ 15 ದಿನಗಳ ಲಾಕ್‌ಡೌನ್‌

ಈ ವಾರದ ಆರಂಭದಲ್ಲಿ ಎಲ್ಲಾ ಹೊರಾಂಗಣ ಚಟುವಟಿಕೆಗಳು ಮತ್ತು ಅಗತ್ಯವಲ್ಲದ ಸೇವೆಗಳ ಸ್ಥಗಿತಕ್ಕೆ ಸೂಚಿಸಲಾಗಿತ್ತು. ಶುಕ್ರವಾರ ಹನೊಯಿಯಲ್ಲಿ ಕೋವಿಡ್‌ನ 70 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ವಿಯೆಟ್ನಾಂನಲ್ಲಿ ಕಳೆದ 24 ಗಂಟೆಗಳಲ್ಲಿ 7,295 ಹೊಸ ಪ್ರಕರಣಗಳು ಪತ್ತೆಯಾದಂತಾಗಿದೆ.

ಕಳೆದ ೨೪ಗಂಟೆಯಲ್ಲಿ 39,097 ಹೊಸ ಕೊರೊನಾ ಪ್ರಕರಣಗಳು, 546 ಸಾವು

ಕೋವಿಡ್‌ ಪ್ರಕರಣಗಳ ಸಂಖ್ಯೆ 3,13,32,159ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,05,03,166 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ.97.35 ಮತ್ತು ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1.31ರಷ್ಟಿದೆ. ಸತತ 33 ದಿನಗಳಿಂದ ಕೋವಿಡ್‌ ದೃಢ ಪ್ರಮಾಣವು ಶೇ.3ಕ್ಕಿಂತ ಕಡಿಮೆ ದಾಖಲಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ತಮಿಳುನಾಡಿನ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ; ಸಿಎಸ್ಆರ್ ನಿಧಿ ಬಳಕೆಗೆ ಅವಕಾಶ

ಖಾಸಗಿ ಆಸ್ಪತ್ರೆಗಳ ಕೋಟಾದಡಿ ಹಂಚಿಕೆಯಾಗಿರುವ ಲಸಿಕೆಗಳನ್ನು ಕಾರ್ಪೋರೇಟ್‌ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿ ನಿಧಿಯಡಿ (ಸಿಎಸ್‌ಆರ್‌) ಖರೀದಿಸಿ, ಅವುಗಳನ್ನು ಜನರಿಗೆ ಉಚಿತವಾಗಿ ವಿತರಿಸುವಂತೆ ತಮಿಳುನಾಡು ಸರ್ಕಾರ ಕೋರಿದೆ.