vijaya times advertisements
Visit Channel

July 26, 2021

ಗುಜರಾತ್ ನಲ್ಲಿ ಭಾರೀ ಮಳೆ

ಇಂದು ಮುಂಜಾನೆ 6ಗಂಟೆಗೆ ಕೊನೆಯಾಗುವಂತೆ 24 ಗಂಟೆಯಲ್ಲಿ ಸೌರಾಷ್ಟ್ರ ಸೇರಿ ಗುಜರಾತ್​​ನ ಅನೇಕ ಕಡೆಗಳಲ್ಲಿ ವಿಪರೀತ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ. ಅದರಲ್ಲೂ ಸೌರಾಷ್ಟ್ರದ ರಾಜಕೋಟಾ ಜಿಲ್ಲೆಯ ಲೊಧಿಕಾ ತಾಲೂಕಿನಲ್ಲಿ 24 ಗಂಟೆಯಲ್ಲಿ ಅತಿಹೆಚ್ಚು ಅಂದರೆ 198 ಮಿಮೀ ಮಳೆಯಾಗಿದೆ. ಹಾಗೇ, ಛೋಟೌಡ್​ಪುರ್​​ನಲ್ಲಿ 190 ಎಂಎಂ, ಕ್ವಾಂತ್​ನಲ್ಲಿ 182 ಮಿಮೀ ಮಳೆಬಿದ್ದಿದೆ. ಇದರ ಹೊರಾತಿಗೆ ಮಹೀದಾಗರ್​, ಖೇದಾ, ವಡೋದರಾ, ಪಂಚಮಹಲ್​, ಅರ್ವಲ್ಲಿ, ಮೊರ್ಬಿ ಸೇರಿ ಹಲವೆಡೆ 100 ಮಿಮೀ ಗೂ ಅಧಿಕ ಪ್ರಮಾಣದಲ್ಲಿ ಮಳೆ ಯಾಗಿದೆ.

ಮುಂದೆ ಉತ್ತಮ ವ್ಯಕ್ತಿಯಾಗಬೇಕಾದರೆ ನಿಮ್ಮ ಮಕ್ಕಳಿಗೆ ಈಗಿನಿಂದಲೇ ಈ ವಿಚಾರಗಳನ್ನು ಕಲಿಸಿ..

ಹೌದು, ಈಗಿನ ಕಾಲಕ್ಕೆ ಇದು ಅವಶ್ಯಕವಾಗಿದೆ. ನಿಮ್ಮ ಮಕ್ಕಳಿಗೆ ಸೋಲುವುದನ್ನು ಹೇಳಿಕೊಡಬೇಕು. ಕೇವಲ ಗೆಲ್ಲಬೇಕು ಎಂದು ಒತ್ತಡ ಹೇರುತ್ತಿದ್ದರೆ, ಮುಂದೆ ಯಾವುದಾದರೊಂದು ದಿನ ಸೋತರೆ ಅದನ್ನು ಸ್ವೀಕರಿಸಲು ಅವರಿಗೆ ಕಷ್ಟವಾಗುವುದು. ಅನೇಕ ಬಾರಿ ಅವರಿಗೆ ತಮ್ಮ ಸಣ್ಣ ವೈಫಲ್ಯವನ್ನು ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಅದಕ್ಕೆ ಇತ್ತೀಚೆಗೆ ಮಕ್ಕಳ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿರುವುದು. ಅದಕ್ಕೆ ಮಕ್ಕಳಿಗೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಬೇಕು.

ಮರಳು ಮಿಶ್ರಿತ ಬಿರುಗಾಳಿ: 20 ವಾಹನಗಳು ಒಂದಕ್ಕೊಂದು ಡಿಕ್ಕಿ, ಏಳು ಮಂದಿ ಸಾವು

ಮರಳು ಬಿರುಗಾಳಿಯಿಂದಾಗಿ ವಾಹನ ಚಾಲಕರಿಗೆ ಕಣ್ಣು ಬಿಡದಂತಾಗಿದೆ. ಹೀಗಾಗಿ ವಾಹನಗಳು ಒಂದಕ್ಕೊಂದು ಗುದ್ದಿಕೊಂಡಿದ್ದು, ಏಳು ಮಂದಿಯ ಪ್ರಾಣ ಕಳೆದುಕೊಂಡಿದ್ದಾರೆ, ಅನೇಕರು ಗಂಭೀರವಾಗಿ ಗಾಯಗೊಂಡಿದೆ ಎಂದು ಯೂಟಾದ ಸಾರ್ವಜನಿಕ ಸೇವಾ ವಿಭಾಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ

ಭ್ರಷ್ಟ ಬಿಜೆಪಿಯನ್ನ ಚುನಾವಣೆಯಲ್ಲಿ ಸೋಲಿಸಿದಾಗಲೇ ನಾವು ಸಂಭ್ರಮಿಸುವುದು: ಮಾಜಿ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಯಡಿಯೂರಪ್ಪ ಅವರ ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯಿತೆಂದು ಅವರ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ, ಅವರಿಗೆ ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ. ಆದರೆ ಬಿಎಸ್ವೈ ಅವರು ಹೋದರೂ, ಇನ್ನೊಬ್ಬರು ಬಂದರೂ ಅದರ ಭ್ರಷ್ಟತೆಯ ಆತ್ಮ ಬದಲಾಗುವುದಿಲ್ಲ. ದುಡ್ಡಿನ ಬಲದಿಂದ ನಡೆಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ಹಾದಿಯಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತೊಲಗಿದಾಗಲೇ ಕರ್ನಾಟಕದ ಜನತೆಗೆ ನೆಮ್ಮದಿ ಎಂದು ಕಿಡಿಕಾರಿದ್ದಾರೆ.

ಲಸಿಕೆ ತೆಗೆದುಕೊಂಡ ಮೇಲೆ ಕೈ ನೋವು ಬರಲು ಕಾರಣವೇನು?

ತೋಳು ನೋವನ್ನು ಪಡೆಯುವುದು ಕೋವಿಡ್ ಲಸಿಕೆ ಪಡೆದ ಜನರು ಎದುರಿಸುವ ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಒಂದಾಗಿದೆ. ಲಸಿಕೆಯು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರತಿಕ್ರಿಯೆ ನಡೆಸುತ್ತಿರುವ ಪರಿಣಾಮವೇ ತೋಳು ನೋವು ಎಂದು ತಜ್ಞರು ಹೇಳುತ್ತಾರೆ. ಲಸಿಕೆಯ ಈ ಅಡ್ಡಪರಿಣಾಮ ಅನುಭವಿಸುವುದರ ಅರ್ಥ, ಲಸಿಕೆ ಕಾರ್ಯರೂಪದಲ್ಲಿದೆ, ಅಂದುಕೊಂಡಂತೆ ಕಾರ್ಯನಿರ್ವಹಿಸುತ್ತಿದೆ ಎಂದು. ಲಸಿಕೆಯನ್ನು ದೇಹಕ್ಕೆ ಚುಚ್ಚಿದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಅದಕ್ಕೆ ಸ್ಪಂದಿಸುತ್ತದೆ, ರೋಗಕಾರಕದಿಂದ ದೇಹವನ್ನು ರಕ್ಷಿಸಲು ಪ್ರಯತ್ನಿಸುತ್ತದೆ.

ಯಡಿಯೂರಪ್ಪ ಕಣ್ಣೀರು ಪದತ್ಯಾಗವಲ್ಲ ಪದಚ್ಯುತಿ ಎಂದು ಕಾಂಗ್ರೆಸ್; ಮೊದಲು ನಿಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಿ ಎಂದ ಬಿಜೆಪಿ

ಬಿಎಸ್‌ವೈ ಅವರ ವಿದಾಯದಲ್ಲಿ ಲಾಭ ಪಡೆಯಲು ಕಾಂಗ್ರೆಸ್‌ ಹವಣಿಸುತ್ತಿದೆ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಭೀಷ್ಮ. ಪಕ್ಷದ ಏಳಿಗೆಗಾಗಿ ಶ್ರಮಿಸಿದ ಯಡಿಯೂರಪ್ಪ ಅವರು ಪಕ್ಷದ ಶಿಸ್ತಿಗೆ ಒಳಪಟ್ಟು ಸ್ವ-ಇಚ್ಛೆಯಿಂದ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ಬಿ. ಎಸ್‌. ಯಡಿಯೂರಪ್ಪ ಅವರು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸಿದ್ಧಾಂತ, ಆಂತರಿಕ ಶಿಸ್ತಿಗೆ ಒಳಪಟ್ಟು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಹೇಳಿಕೊಂಡಿದೆ.

ಹೈದರಾಬಾದ್: 4.0ಯ ತೀವ್ರತೆಯ ಭೂಕಂಪ

ಭೂಕಂಪದ ಕೇಂದ್ರ ಬಿಂದು ಹೈದರಾಬಾದ್‌ನಿಂದ ದಕ್ಷಿಣಕ್ಕೆ 156 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದಲ್ಲಿದೆ. ಭೂಕಂಪದಲ್ಲಿ ಇದುವರೆಗೆ ಯಾವುದೇ ಹಾನಿ ಅಥವಾ ಸಾವುನೋವುಗಳು ವರದಿಯಾಗಿಲ್ಲ ಎಂದು ತಿಳಿಸಿದೆ

ಹೆದ್ದಾರಿಗಳ ಪಕ್ಕದಲ್ಲಿ ಮದ್ಯದಂಗಡಿಗಳನ್ನು ತೆರೆಯುವಂತಿಲ್ಲ; ಆದೇಶ ನೀಡಿದ ಸುಪ್ರೀಂ ಕೋರ್ಟ್

ಹೈವೇಗಳಿಂದ 500 ಮೀಟರ್ ಅಂತರದೊಳಗೆ ಯಾವುದೇ ಮದ್ಯದಂಗಡಿಗಳೂ ಇರುವಂತಿಲ್ಲ ಎಂದು ಆದೇಶಿಸಲಾಗಿದೆ. ಹಾಗೇ, ಸ್ಥಳೀಯ ಆಡಳಿತದ ವ್ಯಾಪ್ತಿಯಲ್ಲಿರುವ ಹಾಗೂ 20,000ಕ್ಕಿಂತ ಕಡಿಮೆ ಜನರು ವಾಸ ಮಾಡುವ ಸ್ಥಳಗಳಲ್ಲಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದ 220 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಮದ್ಯವನ್ನು ಮಾರಾಟ ಮಾಡುವಂತಿಲ್ಲ.

ಗ್ರೀನ್ ಟೀ ಕುಡಿಯುವುದರಿಂದ ಸೌಂದರ್ಯಕ್ಕೂ ಪ್ಲಸ್ ಪಾಯಿಂಟ್!

ಪ್ರತಿದಿನ ಗ್ರೀನ್ ಟೀ ಕುಡಿಯುವುದು ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ, ನಿಯಮಿತವಾಗಿ ಇದನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ದೇಹದಿಂದ ಹೆಚ್ಚಿನ ಪ್ರಮಾಣದ ನೀರನ್ನು ತೆಗೆದುಹಾಕುತ್ತದೆ. ಈ ಚಹಾದಲ್ಲಿ ಟ್ಯಾನಿನ್ ಇರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಯಡಿಯೂರಪ್ಪನವರು ತಮಗೆ ಕಣ್ಣೀರಿನ ನೋವು, ಕೊಟ್ಟವರಾರು ಎಂಬುದನ್ನು ಬಹಿರಂಗಪಡಿಸಲಿ; ಡಿ.ಕೆ. ಶಿವಕುಮಾರ್

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಸಂತೋಷ ಕಾಣುತ್ತಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವು ಕಾಣುತ್ತಿದೆ. ಆ ನೋವು ಏನು? ಆ ನೋವು ಕೊಟ್ಟವರು ಯಾರು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರಿಗೆ ಸ್ಪಷ್ಟಪಡಿಸಬೇಕು ಎಂದರು