vijaya times advertisements
Visit Channel

July 27, 2021

ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದ್ದು, ಆ ಮೂಲಕ ಕಳೆದ ಹಲವು ದಿನಗಳಿಂದ ಯಾರಾಕ್ತಾರೆ ರಾಜ್ಯದ ಮುಂದಿನ ಸಿಎಂ

ಸಾಲದ ‍‍‍‍‍‍‍‍‍‍‍‍‍‍‍‍‍ಶೂಲಕ್ಕೆ ಕರವೇ ಅಧ್ಯಕ್ಷ ನಾರಾಯಣ ಗೌಡ ಸಹೋದರ ಆತ್ಮಹತ್ಯೆ ಯತ್ನ

ನಾಗರಬಾವಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ವಿಷ ಸೇವಿಸಿದ್ದು ತಡವಾಗಿ ಗೊತ್ತಾಗಿದೆ, ಸ್ಥಿತಿ ಗಂಭೀರವಾಗಿದೆ. ಸಾಲಗಾರರ ಕಾಟದಿಂದ ಈ ರೀತಿ ಮಾಡಿಕೊಂಡಿದ್ಧಾರೆ ಎನ್ನುವುದು ಆರಂಭಿಕ ಮಾಹಿತಿ.

ಭಾರತ vs ಶ್ರೀಲಂಕಾ ಸರಣಿ ಮೇಲೆ ಕೊರೊನಾ ಕರಿನೆರಳು: ಟೀಂ ಇಂಡಿಯಾದ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್

ಭಾರತ ಹಾಗೂ ಶ್ರೀಲಂಕಾ ನಡುವೆ ಮಂಗಳವಾರ ರಾತ್ರಿ ಎರಡನೇ ಟಿ20 ಪಂದ್ಯ ನಡೆಯಬೇಕಿತ್ತು. ಆದರೆ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇಂದಿನ ಪಂದ್ಯವನ್ನು ಜು.28(ಬುಧವಾರ)ಕ್ಕೆ ಮುಂದೂಡಲಾಗಿದೆ. ಅಲ್ಲದೇ ಉಭಯ ತಂಡಗಳ ಆಟಗಾರರನ್ನ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಕೃನಾಲ್ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ ಆಟಗಾರರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.

ವಿಜಯ್ ಮಲ್ಯ ವಿರುದ್ಧ ದಿವಾಳಿತನದ ಆದೇಶ ಹೊರಡಿಸಿದ ಬ್ರಿಟನ್ ಕೋರ್ಟ್

ಬ್ರಿಟನ್​ ಕೋರ್ಟ್​ನ ಈ ಆದೇಶದ ಪ್ರಕಾರ ಮುಂದಿನ ದಿನಗಳಲ್ಲಿ ಉದ್ಯಮಿ ವಿಜಯ್ ಮಲ್ಯ ಅವರಿಂದ ಬಾಕಿ ಹಣ ಹಿಂಪಡೆಯಲು ಬ್ಯಾಂಕ್​ಗಳಿಗೆ ಸಹಾಯವಾಗಲಿದೆ ಎಂದು ಹೇಳಲಾಗಿದೆ. ಉದ್ಯಮಿ ವಿಜಯ್ ಮಲ್ಯ ಸಾಲ ಹಿಂಪಡೆಯುವ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು ಎಂದು ಬ್ಯಾಂಕ್​ಗಳ ಒಕ್ಕೂಟ ಕೋರ್ಟ್​ಗೆ ಮನವಿ ಸಲ್ಲಿಸಿತ್ತು. 9 ವಿವಿಧ ಬ್ಯಾಂಕ್​ಗಳಿಗೆ 9 ಸಾವಿರ ಕೋಟಿ ಸಾಲವನ್ನು ಮರು ಪಾವತಿಸಿದೇ ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದರು.

ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಕಾಲಿಟ್ಟ ಚೀನಾ ಸೇನೆ

ಪೂರ್ವ ಲಡಾಖ್​​ನ ವಾಸ್ತವ ನಿಯಂತ್ರಣಾ ಗಡಿ ರೇಖೆ ಬಳಿ ಚೀನಾ ತನ್ನ ಸೇನಾಬಲವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಕಳೆದ ಏಪ್ರಿಲ್​-ಮೇ ತಿಂಗಳಿಂದಲೂ ಇಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಿರಂತರವಾಗಿ ಸಂಘರ್ಷ ಆಗುತ್ತಲೇ ಬರುತ್ತಿದ್ದು, ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದುಕೊಳ್ಳಲಾಗಿತ್ತು. ಆದರೆ ಚೀನಾ ಇಲ್ಲಿ ನಿರಂತರವಾಗಿ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಲೇ ಇದೆ.

ಮಾವಿನ ಹಣ್ಣನ್ನು ಬಳಸುವ ಮೊದಲು ನೀರಿನಲ್ಲಿ ಅದ್ದಿಡಬೇಕು ಯಾಕೆ ಗೊತ್ತಾ?

ಮಾವಿನಹಣ್ಣು ಒಳಗಿನಿಂದ ಬಿಸಿಯಾಗಿದ್ದು, ನೈಸರ್ಗಿಕ ಶಾಖವನ್ನು ಹೊಂದಿರುತ್ತವೆ, ಇದು ವ್ಯಕ್ತಿಯ ಆಂತರಿಕ ವ್ಯವಸ್ಥೆಗೆ ತೊಂದರೆಯಾಗಬಹುದು ಅಥವಾ ಈಗಾಗಲೇ ಮೊಡವೆಗಳಿಂದ ಬಳಲುತ್ತಿದ್ದರ ಸಮಸ್ಯೆ ಹೆಚ್ಚಾಗಬಹುದು. ಮಾವಿನಹಣ್ಣಿನಲ್ಲಿ ಫೈಟಿಕ್ ಆಮ್ಲವೂ ಸಮೃದ್ಧವಾಗಿದ್ದು, ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂ ಅನ್ನು ದುರ್ಬಲಗೊಳಿಸುತ್ತದೆ ಮತ್ತು ಖನಿಜ ಕೊರತೆಯನ್ನು ಉತ್ತೇಜಿಸುತ್ತದೆ.

ಒಲಂಪಿಕ್ಸ್ ಪದಕ ವಿಜೇತೆ ಮೀರಾಬಾಯ್ ಚಾನು ಅವರಿಗೆ ಎರಡು ಕೋಟಿ ರೂ. ನಗದು ಉಡುಗೊರೆ ಮತ್ತು ರೈಲ್ವೇಯಲ್ಲಿ ಕೆಲಸ

ಈ ಕುರಿತು ಟ್ವೀಟ್ ಮಾದಿರುವ ಸಚಿವರು, “ದೇಶಕ್ಕೆ ಕೀರ್ತಿ ತಂದಿರುವ ಮೀರಾಬಾಯ್‌ ಚಾನುರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಭಾರತೀಯ ರೈಲ್ವೇಗೆ ಸಂತಸವಾಗುತ್ತದೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಕೋಟ್ಯಂತರ ಮಂದಿಗೆ ಸ್ಪೂರ್ತಿಯಾಗಿರುವ ಮೀರಾಬಾಯಿಗೆ ಎರಡು ಕೋಟಿ ರೂ.ಗಳ ಇನಾಮು ಹಾಗೂ ಬಡ್ತಿಯನ್ನು ಘೋಷಿಸಲು ಹರ್ಷಿಸುತ್ತೇನೆ. ದೇಶಕ್ಕಾಗಿ ಗೆಲ್ಲುತ್ತಿರಿ” ಎಂದು ಹೇಳಿದ್ದಾರೆ.

ಕಾನ್ ಚಿತ್ರೋತ್ಸವದಲ್ಲಿ ‘ದೇವರ ಕನಸು‘

ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್ ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎನ್ನುವುದೇ ‘ದೇವರ ಕನಸು’ ಚಿತ್ರದ ಎಳೆ.

ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಇಂದು ಸಂಜೆ ನಡೆಯೋ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ಸಿಎಂ ಹೆಸರು ಫೈನಲ್

ಮುಖ್ಯಮಂತ್ರಿ ಸುಸೂತ್ರ ಆಯ್ಕೆ ಪ್ರಕ್ರಿಯೆಗಾಗಿ ದೆಹಲಿಯಿಂದ ವೀಕ್ಷಕರಾಗಿ ಬರುವ ಕೇಂದ್ರ ಸಚಿವರಾದ ಕಿಶನ್‌ ರೆಡ್ಡಿ ಮತ್ತು ಧರ್ಮೇಂದ್ರ ಪ್ರಧಾನ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೊದಲಿಗೆ ಹೊಸ ಮುಖ್ಯಮಂತ್ರಿ ಆಯ್ಕೆಗೆ ಬಗ್ಗೆ ಮಾಹಿತಿ ಸಂಗ್ರಹಿಸಿ ಬಳಿಕ ಹೆಸರು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.

ಆಫ್ರಿಕಾದಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದ ಹಡಗು ಮುಳುಗಿ 57 ಮಂದಿ ಸಾವು

ಹಡಗು ಮೊದಲು ಇಂಜಿನ್​ ಸಮಸ್ಯೆಯಿಂದ ನಿಂತಿತ್ತು. ಆದರೆ ನಂತರ ಕೆಟ್ಟ ಹವಾಮಾನದ ಕಾರಣದಿಂದ ಮುಳುಗಿ ದುರಂತ ಸಂಭವಿಸಿದೆ. ಹೀಗೆ ಪ್ರಾಣಾಪಾಯದಿಂದ ಪಾರಾದವರಲ್ಲಿ ನೈಜೀರಿಯಾ, ಘಾನಾ, ಗಾಂಬಿಯಾದವರು ಇದ್ದಾರೆ ಎಂದು ಹೇಳಲಾಗಿದೆ.