vijaya times advertisements
Visit Channel

August 3, 2021

ಅದೆ‍‍ಷ್ಟೇ ಕಷ್ಟ ಎದುರಾದರೂ ಬಡವರೊಂದಿಗೆ ದೇಶವಿದೆ!

ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಕಾರ್ಯಕ್ರಮವನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯಗಳಲ್ಲಿ ಗುಜರಾತ್ ಕೂಡ ಒಂದು ಎಂದು ಪ್ರಧಾನಿ ಶ್ಲಾಘಿಸಿದರು. ಆಧಾರ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲಾಗಿದೆ ಮತ್ತು ಸರ್ಕಾರಿ ಪಡಿತರ ಅಂಗಡಿಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಅನುಮೋದಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮತ್ತೆ ಶುರುವಾಯ್ತು ಕೊರೊನಾ ಟೆನ್ಷನ್: 1674 ಹೊಸ ಪ್ರಕರಣ ಪತ್ತೆ, 38 ಮಂದಿ ಬಲಿ

ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, 3ನೇ ಅಲೆಯ ಆತಂಕ ಸದ್ದಿಲ್ಲದೆ ಶುರುವಾದಂತಿದೆ. ರಾಜಧಾನಿ ಬೆಂಗಳೂರಿನಲ್ಲಿ 477 ಹೊಸ ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ 1376 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಮಹಾಮಾರಿಯ ಹೊಡೆತಕ್ಕೆ ರಾಜ್ಯದಲ್ಲಿ 38 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,21,021 ಪರೀಕ್ಷೆಗಳನ್ನು ಮಾಡಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 24,280ಕ್ಕೆ ಏರಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ: ಕೆಂಪುಕೋಟೆಯಲ್ಲಿ ನಡೆಯುವ ಸಮಾರಂಭಕ್ಕೆ ಭಾರತೀಯ ಒಲಂಪಿಕ್ಸ್ ಆಟಗಾರರಿಗೆ ಆಹ್ವಾನ

ಕೆಂಪು ಕೋಟೆಯಲ್ಲಿ ಪ್ರಧಾನಿಯವರು ಎಲ್ಲರನ್ನು ವೈಯಕ್ತಿಕವಾಗಿ ಭೇಟಿಯಾಗಲಿದ್ದು, ಸಂವಹನ ನಡೆಸುತ್ತಾರೆ. ಭಾರತದ 228 ಸದಸ್ಯರ ತಂಡವು 119 ಆಟಗಾರರನ್ನ ಒಳಗೊಂಡ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಭಾರತೀಯ ಒಲಿಂಪಿಕ್ ತಂಡದಲ್ಲಿ ಪಿವಿ ಸಿಂಧು, ಮನು ಭಾಕರ್, ಮೇರಿ ಕೋಮ್, ಮೀರಾಬಾಯಿ ಚಾನು, ವಿನೇಶ್ ಫೋಗಟ್, ದೀಪಿಕಾ ಕುಮಾರ್ ಸೇರಿದ್ದಾರೆ.

ಗರ್ಭಿಣಿಯರು ಸೇವಿಸುವ ಆಹಾರದ ಬಗೆಗಿನ ತಪ್ಪು ಕಲ್ಪನೆಗಳಿವು..

ಈ ಬದಲಾವಣೆಗೆ ತಕ್ಕಂತೆ ಆಕೆ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ. ಇಂತಹ ಸಮಯದಲ್ಲಿ ಆಹಾರ ಸೇವನೆಯ ವಿಚಾರದಲ್ಲಿ ನಿಜವೆಂದು ನಂಬಿಕೊಂಡು ಬಂದ ಕೆಲವು ತಪ್ಪು ಕಲ್ಪನೆಗಳಿವೆ.

ಮಧ್ಯ ಚೀನಾದ ವುಹಾನ್‌ನಲ್ಲಿ ವರ್ಷದ ನಂತರ ಕಾಣಿಸಿಕೊಂಡ ಕೊರೊನಾ ಸೋಂಕು

ಈಗ ಕೊರೊನಾ ಸೋಂಕು ಪತ್ತೆಯಾದವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಇದು ಸ್ಥಳೀಯವಾಗಿಯೇ ಪತ್ತೆಯಾದ ಪ್ರಕರಣ ಎಂದು ಅಲ್ಲಿನ ಆಡಳಿತ ಹೇಳಿದೆ. ಹಾಗೇ, ಇದೀಗ ಕೊರೊನಾ ಪತ್ತೆಯಾದ ಬೆನ್ನಲ್ಲೇ, ಇಡೀ ವುಹಾನ್‌ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ತಪಾಸಣೆ ಮಾಡುವುದಾಗಿ ಸ್ಥಳೀಯ ಸರ್ಕಾರ ತಿಳಿಸಿದೆ.

ದಾವಣಗೆರೆಯಲ್ಲಿ ಆಗಸ್ಟ್ 3ರ ರಾತ್ರಿಯಿಂದ ನೈಟ್ ಕರ್ಫ್ಯೂ: ಡಿ ಸಿ ಮಹಾಂತೇಶ ಬೀಳಗಿ

ಈ ಸಮಯದಲ್ಲಿ ತುರ್ತು ಸೇವೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಅನಗತ್ಯವಾಗಿ ಓಡಾಡುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾಂತೇಶ ಬೀಳಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ..

ಚೀನಾಪ್ರವಾಹ: ಮೃತಪಟ್ಟವರ ಸಂಖ್ಯೆ 302ಕ್ಕೆ ಏರಿಕೆ

ಹೆನಾನ್ ಪ್ರಾಂತ್ಯದ ರಾಜಧಾನಿ ಜೆಂಗ್‌ಜೌನಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರವಾಹ ಉಂಟಾಗಿತ್ತು. ಪರಿಣಾಮವಾಗಿ 292 ಮಂದಿ ಮೃತಪಟ್ಟು 47 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯಾಡಳಿತ ತಿಳಿಸಿದೆ.

ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಂಡವರು ಈ ನೈರ್ಮಲ್ಯ ಸಲಹೆಗಳನ್ನು ಪಾಲಿಸಲೇಬೇಕು

ಆದರೆ ಈ ಕ್ಲಿಪ್ ಹಾಕಿಕೊಂಡವರು ಪಡುವ ಪಾಡು, ಹೇಳತಿರದು. ಏಕೆಂದರೆ ತಿಂದ ಆಹಾರ, ಆ ಕ್ಲಿಪ್ ಸಂದಿಯಲ್ಲಿ ಸಿಲುಕುವುದೇ ಹೆಚ್ಚು. ಇದು ಒಸಡಿನ ಸಮಸ್ಯೆಗಳು, ಹಲ್ಲು ಹುಳಹಿಡಿಯುವಿಕೆ, ಬಾಯಿಯ ದುರ್ವಾಸನೆ ಇತ್ಯಾದಿಗಳಿಗೆ ಕಾರಣವಾಗಬಹುದು.

ಜನರಿಗೆ ವ್ಯಾಕ್ಸಿನ್ ಮೂರನೇ ಡೋಸ್ ನೀಡುವುದು ಅಗತ್ಯವೇ?: ಬಾಂಬೆ ಹೈಕೋರ್ಟ್ ಪ್ರಶ್ನೆ

ಒಂದಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಈ ರೀತಿ ಪ್ರಶ್ನಿಸಿದೆ. ಚೀಫ್ ಜಸ್ಟೀಸ್ ದಿಪಾಂಕರ್ ದತ್ತ ಮತ್ತು ಜಸ್ಟೀಸ್ ಜಿ ಎಸ್ ಕುಲಕರ್ಣಿಯವರನ್ನೊಳಗಂಡ ಪೀಠ ಈ ಪ್ರಶ್ನೆ ಕೇಳಿದೆ

ಭಾರತೀಯ ಮೂಲದ 11 ವರ್ಷದ ನತಾಶಾ ಪೇರಿ ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ

ಅಮೆರಿಕದ ಉನ್ನತ ವಿಶ್ವವಿದ್ಯಾಲಯ ನಡೆಸುವ ಸ್ಕಾಲಸ್ಟಿಕ್ ಅಸ್ಸೇಸ್‌ಮೆಂಟ್ ಟೆಸ್ಟ್ (ಎಸ್‌ಎಟಿ) ಮತ್ತು ಅಮೆರಿಕನ್ ಕಾಲೇಜ್ ಟೆಸ್ಟಿಂಗ್(ಎಸಿಟಿ) ಪರೀಕ್ಷೆಯಲ್ಲಿ ನೀಡಿದ ಅದ್ವಿತೀಯ ಫಲಿತಾಂಶ ನತಾಶಾಳನ್ನು ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂದು ಗುರುತಿಸಿದೆ.