vijaya times advertisements
Visit Channel

August 6, 2021

ಅಭಿವೃದ್ದಿ ಮತ್ತು ಹಿಂದುತ್ವ ನನ್ನ ಮೊದಲ ಆಯ್ಕೆ – ಸಚಿವ ವಿ. ಸುನೀಲ್ ಕುಮಾರ್

ನೂತನ ಜಿಲ್ಲಾ ಉಸ್ತುವಾರಿ ಸಚಿವಾರದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಅವರು ಸಚಿವನಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದೇನೆ. ಇಲ್ಲಿಗೆ ಬರುತ್ತಿರುವುದು ಸಂತೋಷ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಕಾರ್ಕಳ ಜನತೆ ನನ್ನನ್ನು 3 ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಆದ್ದರಿಂದ ಇಂದು ನಾನು ಸಚಿವನಾಗಿದ್ದೇನೆ. ಸಚಿವನಾದರೂ ಕೂಡ ಯಾವುದೇ ಕಾರಣಕ್ಕೂ ಅಭಿವೃದ್ದಿ ಮತ್ತು ಹಿಂದೂತ್ವದ ವಿಷಯದಲ್ಲಿ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ.

ಆಗಸ್ಟ್ 23 ರಿಂದ ಶಾಲಾ, ಕಾಲೇಜುಗಳು ಆರಂಭ – ಬಸವರಾಜ್ ಬೊಮ್ಮಾಯಿ

ಈಗಾಗಲೇ ತಜ್ನರ ಜೊತೆಗೆ ಚರ್ಚಿಸಿದ್ದು, 23ರಿಂದ ಮೊದಲ ಹಂತದಲ್ಲಿ 9,10,11 ಮತ್ತು 12ನೇ ತರಗತಿವರೆಗೆ ಶಾಲಾ ಕಾಲೇಜ್ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ತೀವ್ರತೆಯನ್ನು ಪರಿಶೀಲಿಸಿ 1ರಿಂದ 8ನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು

ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಾವಣೆ ಹಿನ್ನಲೆ ಮೋದಿಗೆ ಪಠಾಣ್ ಟಾಂಗ್

ಈ ಹಿಂದೆ ಗುಜರಾತ್ ನಲ್ಲಿ ನಿರ್ಮಾಣಗೊಂಡ ವಿಶ್ವದ ಅತೀದೊಡ್ಡ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಡಲಾಗತ್ತು. ಇನ್ನು 2018ರಲ್ಲಿ ಲಖನೌನ ಎಕನಾ ಇಂಟರನ್ಯಾಷನಲ್ ಸ್ಟೇಡಿಯಂ ಹೆಸರನ್ನು ಅಟಲ ಬಿಹಾರಿ ವಾಜಪೇಯಿ ಇಂಟರ್ ನ್ಯಾಷನಲ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಪಠಾಣ್ ಟ್ವೀಟ್ ಪರ ವಿರೋಧಕ್ಕೆ ಚರ್ಚೆಯಾಗಿದೆ.

ದೇಶದ ಪ್ರತಿಯೊಬ್ಬರ ಫೋನ್ ಗೂ ಮೋದಿ ಪೆಗಾಸಸ್ ಹಾಕಿದ್ದಾರೆ: ರಾಹುಲ್ ಗಾಂಧಿ

“ಕೇಂದ್ರದ ಉದ್ದೇಶ ಕಾಲೇಜು ಯುನಿವರ್ಸಿಟಿಗಳಲ್ಲಿ ವಿದ್ಯಾರ್ಥಿಗಳ ದನಿಯನ್ನು ಹತ್ತಿಕ್ಕುವುದು, ದೇಶದ ದನಿಯನ್ನು ಹತ್ತಿಕ್ಕುವುದು. ಯುವಕರು ದನಿಯೆತ್ತಿದಾಗ ನರೇಂದ್ರ ಮೋದಿ ಸರಕಾರ ಹೆಚ್ಚು ಕಾಲ ಬಾಳಲು ಸಾಧ್ಯವಿಲ್ಲ. ಪೆಗಾಸಸ್ ನಂತಹ ಚಿಕ್ಕ ವಿಚಾರಕ್ಕೆ ಯಾಕೆ ಕಾಂಗ್ರೆಸ್ ಇಷ್ಟೊಂದು ಮಾತನಾಡುತ್ತಿದೆಯೆಂದು ಕೆಲವರು ಪ್ರಶ್ನಿಸಿದರು.

ಅಂತಾರಾಜ್ಯ ವಾಹನ ಚಾಲಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ; ಸಚಿವ ಸೋಮಶೇಖರ್

ಕೇರಳ- ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೆಕ್ಕನಹಳ್ಳ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದುಕೊಂಡರು.

ಟೋಕಿಯೋ ಒಲಂಪಿಕ್ಸ್: ಸೆಮಿಫೈನಲ್ ನಲ್ಲಿ ಭಜರಂಗ್ ಪೂನಿಯಾಗೆ ಸೋಲು

65 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಬಜರಂಗ್ ಪೂನಿಯಾ ಅಜರ್ಬೈಜಾನ್ ಕುಸ್ತಿಪಟು ಹಾಜಿ ಅಲಿಯೇವ್ ವಿರುದ್ಧ 5-12 ಅಂಕಗಳಿಂದ ಸೋಲು ಕಂಡಿದ್ದಾರೆ. ಇದರೊಂದಿಗೆ ಚಿನ್ನದ ಪದಕ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ

ಇಡಿ ಅಧಿಕಾರಿಗಳು ನೊಟೀಸ್ ಕೊಟ್ಟಿಲ್ಲ, ಅವರು ನಿರೀಕ್ಷೆ ಇಟ್ಟು ಬಂದದಕ್ಕೆ ತಕ್ಕಂತೆ ಸಿಕ್ಕಿಲ್ಲ: ಶಾಸಕ ಜಮೀರ್ ಅಹ್ಮದ್

ತಮ್ಮ ಮನೆ ಮೇಲಿನ ದಾಳಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಜಮೀರ್ ಅಹ್ಮದ್, ಬೆಳಗ್ಗೆ 8 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ಮನೆ ಬಳಿ ಬಂದರು. ಮನೆ ಯಾವಾಗ ನಿರ್ಮಾಣ ಮಾಡಿದ್ದೀರಿ, ಎಲ್ಲಿಂದ ದುಡ್ಡು ತಂದಿರಿ, ಎಷ್ಟು ಖರ್ಚಾಯಿತು, ಕಾಂಟ್ರ್ಯಾಕ್ಟ್ ರ್ ಯಾರು ಅದರ ಅಕೌಂಟ್ ವಿವರ ಎಲ್ಲ ಕೇಳಿದರು.

ಕೂದಲಿಗೆ ಡೈ ಮಾಡಲು ಇಲ್ಲಿವೆ ನ್ಯಾಚುರಲ್ ಹೇರ್ ಕಲರ್ ಗಳು…

ಕೆಲವರು ಸ್ಟೈಲ್ ಗಾಗಿ ಕೂದಲಿಗೆ ಕಲರಿಂಗ್ ಮಾಡಿಕೊಂಡರೆ, ಇನ್ನೂ ಕೆಲವರು ತಮ್ಮ ಬಿಳಿ ಕೂದಲನ್ನು ಮರೆಮಾಡಲು ಡೈ ಮಾಡುತ್ತಾರೆ. ಆದರೆ ಯಾರೂ ನೈಸರ್ಗಿಕವಾಗಿ ಕೂದಲ ಬಣ್ಣಗಳನ್ನು ತಯಾರಿಸಲು ಹೋಗುವುದಿಲ್ಲ. ಅದಕ್ಕಾಗಿ ನಾವಿಂದು ಮನೆಯಲ್ಲಿಯೇ ತಯಾರಿಸಬಹುದಾದ ಹೇರ್ ಕಲರ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕತಾರ್ ನಿಂದ ಹಿಂದಿರುಗಿದ್ದ ಮಂಗಳೂರಿನ ವ್ಯಕ್ತಿಗೆ ಇಟಾ ವೈರಸ್ ದೃಢ

ಇದರ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಸೋಂಕಿತನು ಚಿಕಿತ್ಸೆ ಪಡೆದು ಗುಣಮುಖನಾಗಿದ್ದು, ಆತನ ಸಂಪರ್ಕದಲ್ಲಿದ್ದ 150 ಮಂದಿಯೂ ಸೇಫ್ ಆಗಿದ್ದಾರೆಂದು ತಿಳಿಸಿದ್ದಾರೆ.