vijaya times advertisements
Visit Channel

August 7, 2021

ಪ್ರಥಮ ಟೆಸ್ಟ್‌ 270ರನ್‌ಗಳಿಗೆ ಭಾರತ ಸರ್ವ ಪತನ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯರು ಬುಮ್ರಾ ಮತ್ತು ಶಮಿ ದಾಳಿಗೆ ನಲುಗಿ 183 ರನ್ ಗಳ ಆಲ್ಪ ಮೊತ್ತಕ್ಕೆ ಆಲೌಟ್ಆದರು. ಭಾರತ ಪರ ಬುಮ್ರಾ 4, ಶಮಿ 3, ಶಾರ್ದೂಲ್ ಟಾಕೂರ್ 2 ಹಾಗೂ ಸಿರಾಜ್ 1 ವಿಕೆಟ್ ಕಬಳಿಸಿಕೊಂಡರು.

ರಾಜಕೀಯ ಅಖಾಡಕ್ಕೆ ಮತ್ತೊಬ್ಬ ಐಪಿಎಸ್ ಅಧಿಕಾರಿ ? ಬಿಜೆಪಿಯತ್ತ ರವಿ ಚನ್ನಣ್ಣನವರ್ ಒಲವು ?

ಇದಕ್ಕೆಲ್ಲ ಮುಖ್ಯ ಕಾರಣ ಎಂಬಂತೆ ಇತ್ತೀಚೆಗೆ ರವಿ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಬಿ.ಎಲ್. ಸಂತೋಷ್ ಜೊತೆ ಇರುವ ಇವರ ಪೋಟೋಗಳು ವೈರಲ್ ಆಗಿದ್ದು ರಾಜಕೀಯ ಸೇರುತ್ತಾರೆ ಎಂಬ ಅನುಮಾನಕ್ಕೆ ಮತಷ್ಟು ಪುಷ್ಟಿ ನೀಡಿದಂತಾಗಿದೆ.

ಗೃಹ ಖಾತೆ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ : ಆರಗ ಜ್ಞಾನೇಂದ್ರ

ಎನ್. ಆರ್. ಪುರ ತಾಲೂಕಿನ ವಿವಿಧೆಡೆ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಹಾನಿಯಾದ ಮನೆಗಳಿಗೆ ಹಾಗೂ ಸಂತ್ರಸ್ಥರಿಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳ ದುರಸ್ತಿಗೆ ಕ್ರಮ ವಹಿಸುತ್ತೇನೆ ಎಂದು ಹೇಳಿದರು.

ಖಾತೆ ಹಂಚಿಕೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಅಸಮಾಧಾನ ಸ್ಫೋಟ

ಇದರಲ್ಲಿ ಪ್ರಮುಖವಾಗಿ ಪ್ರಸ್ತುತ ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ತಮ್ಮ ಖಾತೆಯ ಬಗ್ಗೆ ಆಸಮಧಾನ ಹೊರಹಾಕಿದ್ದಾರೆ. ಖಾತೆ ಹಂಚಿಕೆ ಸಂಬಂಧ ಮುಖ್ಯ ಮಂತ್ರಿ ಅವರಿಗೆ ಮನವಿ ಮಾಡಿದ್ದೆ ನನಗೆ ನಾನು ಬಯಸಿದ ಖಾತೆ ಸಿಗದೆ ಇದ್ದಲ್ಲಿ ನಾನು ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು ತಮ್ಮ ಅಸಮಧಾನ ಹೊರಕಾಕಿದ್ದಾರೆ.

ಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನದ ಪದಕ; ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಸಾಧನೆ

ಶನಿವಾರ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಪುರುಷರ ವಿಭಾಗದ ಫೈನಲ್ ನಲ್ಲಿ 87.58 ಮೀಟರ್ ಎಸೆಯುವ ಮೂಲಕ ಈ ಸಾಧನೆ ಮಾಡಿದ ನೀರಜ್ ಚೋಪ್ರಾ, ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಲ್ಲದೇ 100 ವರ್ಷದ ಅಥ್ಲೆಟಿಕ್ಸ್​ ಇತಿಹಾಸದಲ್ಲಿ ಮೊದಲ ಚಿನ್ನ ಗೆದ್ದ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಕೇಂದ್ರ ಸರಕಾರ ಒಂದು ಪಕ್ಷದ್ದಲ್ಲ, ಒಂದು ವ್ಯಕ್ತಿ ಮತ್ತು ಕಂಪನಿಗಳದ್ದು: ರೈತ ನಾಯಕ ರಾಕೇಶ್ ಟಿಕಾಯತ್

ಕಾರ್ಯಕ್ರಮದಲ್ಲಿ ಭಾಗಿಯಾದ ರೈತ ನಾಯಕ ರಾಕೇಶ್ ಟಿಕಾಯತ್, ಕೇಂದ್ರ ಸರಕಾರವನ್ನು ಕೇವಲ ಒಂದು ವ್ಯಕ್ತಿ ಮತ್ತು ಕೆಲವು ಕಂಪನಿಗಳು ನಡೆಸುತ್ತಿವೆ. ಇದು ಒಂದು ಪಕ್ಷದ ಸರಕಾರವಾಗಿದ್ದರೆ ಅದರಲ್ಲಿ ಹಲವು ನಾಯಕರಿರುತ್ತಿದ್ದರು, ಅವರ ಮಧ್ಯೆ ಪರಸ್ಪರ ಚರ್ಚೆ ನಡೆದು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು, ಆದರೆ ಇಲ್ಲಿ ಎಲ್ಲದ್ದಕ್ಕೂ ಒಬ್ಬರ ಮಾತನ್ನೇ ಕಾಯಬೇಕಾಗಿದೆ.

ಟೋಕಿಯೋ ಒಲಿಂಪಿಕ್ಸ್‌: ಕುಸ್ತಿಯಲ್ಲಿ ಕಂಚಿನ ಪದಕ ಮುಡಿಗೇರಿಸಿದ ಭಾರತದ ಭಜರಂಗ್‌ ಪೂನಿಯಾ

ಪುರುಷರ ಪ್ರೀಸ್ಟೈಲ್‌ 65 ಕೆ.ಜಿ ವಿಭಾಗದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪೂನಿಯಾ ಅವರು ಕಜಕಿಸ್ತಾನದ ಡೌಲೆಟ್ ನಿಯಾಜ್ಬೆಕೊವ್ ವಿರುದ್ಧ 8-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.

ಮಹಾರಾಷ್ಟ್ರ: ಒಬಿಸಿ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಹಾಗೂ ಎಂಪಿಎಸ್‌ಸಿ ಪರೀಕ್ಷೆಗೆ ತರಬೇತಿ

ರಾಜ್ಯ ಸರ್ಕಾರ ಈಗಾಗಲೇ ‘ಮಹಾಜ್ಯೋತಿ‘ (ಮಹಾತ್ಮ ಜ್ಯೋತಿಬಾ ಫುಲೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ) ಯೋಜನೆಗೆ ₹150 ಕೋಟಿ ಹಣ ಮಂಜೂರು ಮಾಡಿದೆ, ಅದರಲ್ಲಿ ₹40 ಕೋಟಿಗಳನ್ನು ವಿತರಿಸಿದೆ. ಇದೇ ಯೋಜನೆಯಡಿ ಈ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮಕ್ಕಳು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಸೂಚಿಸುವ ಲಕ್ಷಣಗಳಿವು

ದೇಹಕ್ಕೆ ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ದೊರೆಯದೇ ಇದ್ದಾಗ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ, ಮೂಳೆಗಳ ಸಮಸ್ಯೆ, ಮೆದುಳಿನ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದು. ಇಂತಹ ಪೋಷಕಾಂಶಗಳ ಕೊರತೆಯಿಂದ ನಿಮ್ಮ ಮಕ್ಕಳು ಬಳಲುತ್ತಿದ್ದರೆ, ಅದನ್ನು ಸೂಚಿಸುವ ಕೆಲವೊಂದು ಲಕ್ಷಣಗಳಿವೆ. ಅದನ್ನು ಪೋಷಕರು ಗುರುತಿಸಬೇಕು.

ಮೇಕಪ್ ಇಲ್ಲದೇ ಸುಂದರವಾಗಿ ಕಾಣಲು ಸಲಹೆಗಳು

ಎರಡು ಮೂರು ಲೇಯರ್ ಬಳಸಿ ಮೇಕಪ್ ಮಾಡಿಕೊಳ್ಳುವುದರಿಂದ ಚರ್ಮಕ್ಕೆ ಉಸಿರಾಡಲು ಆಗುವುದಿಲ್ಲ. ಆದ್ದರಿಂದ ಇಲ್ಲಿ ನಾವು ಮೇಕಪ್ ಇಲ್ಲದೇ ಸುಂದರವಾಗಿ ಹೇಗೆ ಕಾಣುವುದು ಎಂಬುದನ್ನು ವಿವರಿಸಿದ್ದೇವೆ.