Visit Channel

September 2, 2021

ಅಗತ್ಯ ವಸ್ತುಗಳ ಬೆಲೆ ಏರಿಕಗೆ ತಡೆಗೆ ಕೇಂದ್ರದೊಂದಿಗೆ ಮಾತುಕತೆ – ಸಿಎಂ ಬೊಮ್ಮಾಯಿ

ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರೊಂದಿಗೆ ಸೆ. 5 ರಂದು ಚರ್ಚೆ ನಡೆಸುವುದಾಗಿ ಸಿ.ಎಂ. ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬಿಬಿಎಂಪಿಯಿಂದ ಪ್ರತಿದಿನ 1 ಲಕ್ಷ ಲಸಿಕೆ ನೀಡುವ ಗುರಿ

ಈಗಾಗಲೇ ಬಿಬಿಎಂಪಿ ಲಸಿಕಾ ವೇಗಕ್ಕೆ ಒತ್ತು ನೀಡಿದ್ದು ಈ ಹಿನ್ನಲೆಯಲ್ಲಿ ಪ್ರಸ್ತುತ ನಗರದಲ್ಲಿ ಗುರುತಿಸಿರುವ ಸ್ಥಿರ ಲಸಿಕಾ ಕೇಂದ್ರ‌ಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2.30 ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ದೈಹಿಕ ಶಿಕ್ಷಕರ ಬೇಡಿಕೆ ಇಡೇರಿಸಲು ಕ್ರಮ – ಬಿ. ಸಿ. ನಾಗೇಶ್

ಈ ಬಗ್ಗೆ ಮಾತನಾಡಿದ ಅವರು ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ನೀಡಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಬೇಡಿಕೆಯಾಗಿತ್ತು. ಈಗ ಆ ಪ್ರಕ್ರಿಯೆ ಮುಗಿದಿದೆ ಎಂದರು

ಬೆಂಗಳೂರು ಹೊರವಲಯದಲ್ಲಿ ಜೋಡಿ ಕೊಲೆ

ಡಿದ ಮತ್ತಿನಲ್ಲಿ ಇಬ್ಬರನ್ನು ಮಾರಕಾಸ್ತ್ರಗಳು ಮತ್ತು ದೊಣ್ಣೆಯಿಂದ ಬಡಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಸಂದ್ರದ ಖಾಲಿ ನಿವೇಶನದಲ್ಲಿ ನಡೆದಿದೆ. ಕೊಲೆಯಾಗಿರುವವರು ಯಾರುಎಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ

2023ರ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಸೆ 28ಕ್ಕೆ ಬಿಡುಗಡೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ 2023ರ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ವತಿಯಿಂದ ಮಿಷನ್ 123 ಆಗಲಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್‌ ಪಕ್ಷವು ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು. ನಂತರದ ದಿನಗಳಲ್ಲಿ 10 ರಿಂದ 15 ಅಭ್ಯರ್ಥಿಗಳ ಹೆಸರು ಪಟ್ಟಿಗೆ ಸೇರಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ದಲಿತ ಯುವಕನಿಗೆ ಮೂತ್ರ ಕುಡಿಸಿ ಆರೋಪಡಿ ಪಿಎಸ್‌ಐ ಬಂಧನ

ಕಿರಗುಂದ ಗ್ರಾಮದ ಮಹಿಳೆಯೊಬ್ಬಳು ಕಾಣೆಯಾಗಿರುವ ಪ್ರಕರಣ ಸಂಬಂಧ ಸಬ್ ಇನ್ಸಪೆಕ್ಟರ್ ಅರ್ಜುನ್, ದಲಿತ ಯುವಕ ಪುನೀತ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಪುನೀತ್ ನೀರು ಕೇಳಿದಾಗ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ್ದರು ಎಂದು ಪುನೀತ್ ಅರ್ಜುನ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು

ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಾಷಯಗಳ ಮಹಾಪೂರ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಟ್ವೀಟ್ ಮಾಡಿ ”ಸಿನಿಮಾ ರಂಗದ ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ದೀರ್ಘ ಆಯಸ್ಸು, ಆರೋಗ್ಯ ನೀಡಲಿ. ಇನ್ನೂ ಹೆಚ್ಚಿನ ಕಲಾತ್ಮಕ ಚಿತ್ರಗಳ ಮೂಲಕ ಜನರ ಮನ ರಂಜಿಸಲಿ ಎಂದು ಹಾರೈಸುತ್ತೇನೆ” ಎಂದರು.

ಹಿಂದಿ ಕಿರುತೆರೆ ನಟ, ಬಿಗ್ ಬಾಸ್‌ 13 ವಿಜೇತ ಸಿದ್ದಾರ್ಥ್ ಶುಕ್ಲಾ ನಿಧನ

40 ವರ್ಷ ವಯಸ್ಸಿನ ಸಿದ್ದಾರ್ಥ್ ಶುಕ್ಲಾ ಅವರಿಗೆ ಗುರುವಾರ ಬೆಳಗ್ಗೆ ತೀವ್ರ ಎದೆನೋವು ಉಂಟಾದ ಕಾರಣ ಅವರನ್ನು ಅಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಿದ್ದಾರ್ಥ್ ಅವರಿಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಅಲಹಬಾದ್ ಹೈಕೋರ್ಟ್ ಸಲಹೆ

ಗೋ ಮಾಂಸ ಭಕ್ಷಣೆ ಮೂಲಭೂತ ಹಕ್ಕು ಅಲ್ಲ ಜೊತೆಗೆ ಗೋವು ಭಾರತೀಯ ಸಂಸ್ಕೃತಿ‌ಯ ಭಾಗವಾಗಿದ್ದು, ಅದನ್ನು ಹತ್ಯೆ ಮಾಡುವ ಹಕ್ಕು ಯಾಗಿಗೂ ಇಲ್ಲ ಎಂದು ಕೋರ್ಟ್ ಹೇಳಿದೆ

ಕಾಶ್ಮೀರ ನಮ್ಮ ಮುಂದಿನ ಗುರಿ ಆಲ್‌ಕೈದಾ

ಅಲ್‌ಕೈದಾ ಭಾರತದ ಕಾಶ್ಮೀರ ಮಾತ್ರವಲ್ಲದೆ ಅದು ಇರಾಕ್, ಸಿರಿಯಾ, ಜೋರ್ಡಾನ್ ಮತ್ತು ಲೆಬನಾನ್‌ ಅನ್ನು ಒಳಗೊಂಡ ಮೆಡಿಟೇರಿಯನ್ ಪ್ರದೇಶ ಅಥವಾ ಲೆವಾಂಟ್, ಲಿಬಿಯಾ, ಮೊರಾಕ್ಕೋ, ಅಲ್ಜೀರಿಯಾ, ಮೌರಿಟಾನಿಯಾ, ಟ್ಯುನಿಷಿಯಾ ಮತ್ತು ಸೋಮಾಲಿಯಾಗಳನ್ನು ಒಳಗೊಂಡ ವಾಯವ್ಯ ಆಫ್ರಿಕಾದ ಇಸ್ಲಾಮಿಕ್ ಮಘ್ರೆಬ್, ಯೆಮೆನ್ ದೇಶಗಳು ನಮ್ಮ ಗುರಿಯಾಗಿದೆ ಎಂದು ತಿಳಿಸಿದೆ.