vijaya times advertisements
Visit Channel

September 30, 2021

ನಿಜಾಮಬಾದ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್

ಕಾಲೇಜಿನಿಂದ ಮನೆಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಲಿಫ್ಟ್ ಕೇಳಿದ್ದು ಯುವಕನ ಜೊತೆ ತೆರಳಿದ್ದಳು. ಆದರೆ, ಐವರು ಯುವಕರಿದ್ದ ತಂಡ ನಾವು ಬೈಕ್ ನಲ್ಲಿ ನಗರಕ್ಕೆ ಒಂದು ಸುತ್ತು ಹೊಡೆಯುತ್ತೇವೆಂದು ಹೇಳಿ, ಯುವತಿಯನ್ನು ಒಟ್ಟಿಗೆ ಕರೆದೊಯ್ದಿದ್ದಾರೆ. ಬಳಿಕ ಯುವತಿಯನ್ನು ಆಸ್ಪತ್ರೆಯ ಹಳೆ ಕಟ್ಟಡ ಒಂದಕ್ಕೆ ಕರೆದೊಯ್ದು ಅಲ್ಲಿದ್ದವಾಚ್ ಮನ್ ಕೊಠಡಿಯಲ್ಲಿ ಅತ್ಯಾಚಾರ ನಡೆಸಿದ್ದಾರೆ.

ರೈಲ್ವೆ ಇಲಾಖೆಯಲ್ಲಿ 3093 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅರ್ಜಿಗಳ ಪರಿಶೀಲನೆಯ ನಂತರ 10 ನೇ ತರಗತಿ ಮತ್ತು ಐಟಿಐ ಪ್ರಮಾಣಪತ್ರ ಕೋರ್ಸ್‌ಗಳಲ್ಲಿ ಅಭ್ಯರ್ಥಿಗಳ ಒಟ್ಟು ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಕೇಂದ್ರದಲ್ಲಿ ಇಂದು ನಾನು ಪೆಟ್ರೋಲಿಯಂ ಸಚಿವನಾಗಿದ್ದರೆ 45 ರೂ.ಗೆ ಒಂದು ಲೀಟರ್‌ ಪೆಟ್ರೋಲ್‌ ಕೊಡುತ್ತಿದ್ದೆ – ವೀರಪ್ಪ ಮೊಯ್ಲಿ

ಈ ಬಗ್ಗೆ ಸೋಲದೇವನಹಳ್ಳಿಯಲ್ಲಿ ಗಾಂಧಿ ನಡಿಗೆ ಕಾರ್ಯಾಗಾರದಲ್ಲಿ ಮಾತನಾಡಿಮಾತನಾಡಿದ ಅವರು ಕಳೆದ ಮೂರು ತಿಂಗಳಿನಿಂದ ರೈತರು ದೇಶದಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ದಿನವು ಅವರ ಕಷ್ಟವೇನೆಂದು ಕೇಳಲಿಲ್ಲ ಇವರು ಒಬ್ಬ ಪ್ರಧಾನಮಂತ್ರಿಯೇ ಎಂದು ಪ್ರಶ್ನಿಸಿದರು.

ರಫ್ತು ಉತ್ತೇಜನಕ್ಕಾಗಿ ಕೇಂದ್ರದಿಂದ 4400 ಕೋಟಿ ನೆರವು

ವಾಣಿಜ್ಯ ಮತ್ತು ರಾಜಕೀಯ ಕಾರಣಗಳಿಂದಾಗಿ ಸಾಗರೋತ್ತರ ಖರೀದಿದಾರರಿಂದ ಪಾವತಿ ಮಾಡದಿರುವ ಅಪಾಯಗಳ ವಿರುದ್ಧ ರಫ್ತುದಾರರಿಗೆ ಕ್ರೆಡಿಟ್ ವಿಮಾ ಸೇವೆಗಳನ್ನು ಒದಗಿಸುವ ಮೂಲಕ ರಫ್ತುಗಳನ್ನು ಉತ್ತೇಜಿಸಲು 1957 ರಲ್ಲಿ ಕಂಪನಿಗಳ ಕಾಯಿದೆಯಡಿಯಲ್ಲಿ ಭಾರತ ಸರ್ಕಾರವು ಇಸಿಜಿಸಿಯನ್ನು ಸ್ಥಾಪಿಸಿತು. ಇದು ರಫ್ತು ಸಾಲಗಾರರಿಗೆ ರಫ್ತು ಕ್ರೆಡಿಟ್ ಸಾಲದ ಅಪಾಯಗಳ ವಿರುದ್ಧ ಬ್ಯಾಂಕುಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ

ಚೀನಾದಲ್ಲಿ ತೀವ್ರ ವಿದ್ಯುತ್ ಅಭಾವ , ಕತ್ತಲ ಕೂಪವಾಗಿರುವ ಚೀನಾ

ಕಾರ್ಖಾನೆಗಳಲ್ಲಿ ಉತ್ಪಾದನೆ ಪಾತಾಳಕ್ಕೆ ಕುಸಿದಿದ್ದು, ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಹೆಚ್ಚಿನ ನಗರಗಳಲ್ಲಿ ವಿದ್ಯುತ್ ಕಡಿತ ಜಾರಿಗೊಳಿಸಲಾಗಿದೆ. ಇಂಧನ ಬಳಕೆಯನ್ನು ತಗ್ಗಿಸುವ ಗುರಿ ಸಾಧಿಸಲು ವಿದ್ಯುತ್ ಕಡಿತವನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ. ವಿದ್ಯುತ್ ವ್ಯತ್ಯದಿಂದ ಮನೆಗಳು ಸ್ತಬ್ಧವಾಗಿದೆ.

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿರುವ ಉದಯೋನ್ಮುಖ ನಟಿ ಸೌಜನ್ಯ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದರು. ಅಲ್ಲದೇ ಚೌಕಟ್ಟು, ಫನ್​ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬೆಸ್ಕಾಂ ಸಿಬ್ಬಂದಿ ಮೇಲೆ ಕಲ್ಲು ದೊಣ್ಣೆಯಿಂದ ಹಲ್ಲೆ

ಘಟನೆಯಲ್ಲಿ ಬೆಸ್ಕಾಂ ಶಾಖಾಧಿಕಾರಿ ರಾಜಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ ಗ್ರಾಮಸ್ಥರು ಹಾಗೂ ಬೆಸ್ಕಾಂ ಸಿಬ್ಬಂದಿಗಳ ನಡುವೆ ಬಿಲ್ ವಿಚಾರವಾಗಿ ಮೊದಲು ಮಾತಿನ ಚಕಮಕಿ ನಡೆದಿದೆ

ಮಂತ್ರಿ ಮಾಲ್‌ನಿಂದ 39ಕೋಟಿ ತೆರಿಗೆ ಬಾಕಿ

ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಮಂತ್ರಿ ಮಾಲ್ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿದೆ. 2017ರಿಂದ ಇದೂವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಮಂತ್ರಿ ಮಾಲ್‌ಗೆ ನೋಟಿಸ್ ಕೊಟ್ಟು ಬಿಬಿಎಂಪಿ ಸುಸ್ತಾಗಿದೆ. ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಎಷ್ಟೇ ಹೇಳಿದರೂ ಮಂತ್ರಿ ಮಾಲ್ ನ ಆಡಳಿತಾಧಿಕಾರಿ ಮಾತ್ರ ಕೇಳುತ್ತಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.

ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನ ನಕಲಿ ಎಂದ ಬ್ಯಾಂಕ್ ಮ್ಯಾನೇಜರ್, ರೊಚ್ಚಿಗೆದ್ದ ಗ್ರಾಮಸ್ಥರಿಂದ ಬ್ಯಾಂಕ್‌ಗೆ ಮುತ್ತಿಗೆ

ಕಷ್ಟಕಾಲಕ್ಕೆ ಚಿನ್ನವನ್ನು ಬ್ಯಾಂಕ್​ನಲ್ಲಿ ಅಡವಿಟ್ಟು ಸಾಲ ಪಡೆದಿದ್ದ ಮಹಿಳೆ  ಚಿನ್ನ ಬಿಡಿಸಿಕೊಳ್ಳಲು ಹೋದಾಗ ಬ್ಯಾಂಕ್​ ಮ್ಯಾನೇಜರ್ ಇದು ನಕಲಿ ಚಿನ್ನ ಎಂದು ಹೇಳಿದ್ದಾರೆ ಈ ಹೇಳಿಕೆಯಿಂದ ಬೇಸತ್ತ ಮಹಿಳೆ ಈ ವಿಷಯವನ್ನು ಮಹಿಳೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಬ್ಯಾಂಕ್​ ಮ್ಯಾನೇಜರ್ ಹೇಳಿಕೆಯಿಂದ ರೊಚ್ಚಿಗೆದ್ದ ಸ್ಥಳೀಯರು ಬ್ಯಾಂಕ್​ಗೆ ಮುತ್ತಿಗೆ ಹಾಕಿ, ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ತಮ್ಮ ಆಕ್ರೋಶ ವೆಕ್ತಪಡಿಸಿದ್ದಾರೆ.

ವಿಜಯ ಟೈಮ್ಸ್‌ ಇಂಪ್ಯಾಕ್ಟ್ : ಮದ್ದೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರಸಗೊಬ್ಬರ ವಶ, ಸಾವಯವ ಹೆಸರಿನಲ್ಲಿ ರೈತರಿಗೆ ವಂಚನೆ

ಮದ್ದೂರಿನ ಜೆಕೆ ಆರ್ಗ್ಯಾನಿಕ್ಸ್ ಕಂಪನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರಸಗೊಬ್ಬರದ ಬಗ್ಗೆ ಜೊತೆಗೆ ಸಾವಯವ ಹೆಸರಿನಲ್ಲಿ ರೈತರಿಗೆ ವಂಚಿಸುತ್ತಿರುವ ಬಗ್ಗೆ ವಿಜಯ ಟೈಮ್ಸ್‌ ಕವರ್ ಸ್ಟೋರಿ ತಂಡ ಕಾರ್ಯಚರಣೆ ನಡೆಸಿ ಜೆಕೆ ಆರ್ಗ್ಯಾನಿಕ್ಸ್ ಕಂಪನಿಯ ಅಕ್ರಮವನ್ನು ಬಯಲಿಗೆಳೆದಿತ್ತು