Visit Channel

October 2, 2021

ಸಾಕು ನಿಲ್ಲಿಸಿ ಶೋಷಣೆ, ನಮ್ಮ ಹಕ್ಕು ನಮಗೆ ನೀಡಿ : ಹಾಲಕ್ಕಿ ಹಕ್ಕೋತ್ತಾಯ.

ಸಿಡಿದೆದ್ದಿದ್ದಾರೆ ಉತ್ತರ ಕನ್ನಡದ ಹಾಲಕ್ಕಿ ಒಕ್ಕಲು ಮಕ್ಕಳು. ಶತಮಾನಗಳ ಶೋಷಣೆಯ ವಿರುದ್ಧ ಹೋರಾಡಲು ಸಿದ್ಧ. ವಿಜಯಟೈಮ್ಸ್ ಅಧ್ಯಯನದಲ್ಲಿ ಬಯಲಾಯ್ತು ಕಟು ಸತ್ಯ! ಮೂಲಭೂತ ಸೌಕರ್ಯಕ್ಕೂ ಪರದಾಡುತ್ತಿದ್ದಾರೆ ಹಾಲಕ್ಕಿ ಮಕ್ಕಳು. ಪರಿಶಿಷ್ಟ ಪಂಗಡ ಸ್ಥಾನಮಾನ ನೀಡದೆ ಹಾಲಕ್ಕಿಗಳಿಗೆ ಅನ್ಯಾಯ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಭಾರೀ ಹಿಂದುಳಿದಿದ್ದಾರೆ ಹಾಲಕ್ಕಿಗಳು. ಬುಡಕಟ್ಟು ಜನಾಂಗದವರಾಗಿದ್ರೂ ಇನ್ನೂ ಸಿಗಲಿಲ್ಲ ಎಸ್ಟಿ ಪಟ್ಟ. ರಾಜಕಾರಣಿಗಳು ಭರವಸೆಯಿಂದ ಮೋಸ ಹೋಗಿದ್ರು ಹಾಲಕ್ಕಿಗಳು

ಮಕ್ಕಳು ಜೊತೆಯಲ್ಲಿಲ್ಲದೆ ಹಲವು ದಿನಗಳಿಂದ ಹಸಿವಿನಿಂದ ನರಳಿ ಪ್ರಾಣಬಿಟ್ಟ ನಿವೃತ್ತ ಮೇಜರ್ !

“ ಈಗಿನ ಕಾಲದಲ್ಲಿ ಎಲ್ಲರಿಗೂ ಕೆಲಸದ, ಹಣದ ಅನಿವಾರ್ಯತೆ ಇದ್ದೇ ಇದೆ. ಹಾಗಂತ ಅಪ್ಪ – ಅಮ್ಮನನ್ನು ಲೆಕ್ಕಿಸದೆ ನಮ್ಮದೇ ಸ್ವಾರ್ಥಕ್ಕೆ ಹಿರಿಯ ಜೀವಗಳನ್ನು ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ” ?

ನಾಗಚೈತನ್ಯ ಸಮಂತಾ ಅಕ್ಕಿನೇನಿ ದಾಂಪತ್ಯದಲ್ಲಿ ಬಿರುಕು, ವಿಚ್ಚೇದನಕ್ಕೆ ಮುಂದಾದ ಸ್ಟಾರ್ ಜೋಡಿ

ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆದರೆ, ವಿಚ್ಛೇದನದ ವದಂತಿ ಬಗ್ಗೆ ಈ ಜೋಡಿ ಇದುವರೆಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಎಲ್ಲಾ ಉಹಾಪೋಹಗಳಿಗೆ ತೆರೆ ಬಿದ್ದಿದ್ದು, ಪತಿ ನಾಗಚೈತನ್ಯ ಅವರಿಂದ ದೂರ ಆಗುತ್ತಿರುವುದಾಗಿ ಸಮಂತಾ ಹೇಳಿದ್ದಾರೆ

ಟಾಟಾ ಗ್ರೂಪ್‌ ಪಾಲಾದ ಏರ್ ಇಂಡಿಯಾ

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಹರಸಾಹಸಕ್ಕೆ ಕೊನೆಗೂ ಮುಕ್ತಿ ದೊರೆತಿದ್ದು, ಟಾಟಾ ಸಮೂಹ ಹರಾಜಿನಲ್ಲಿ ಏರ್ ಇಂಡಿಯಾವನ್ನು ಖರೀದಿ ಮಾಡಿದೆ.

ಗ್ರಾಹಕರ ಮನ ಸೆಳೆದ ಐಸ್ ಕ್ರೀಂ ಸ್ಟಿಕ್ ಇಡ್ಲಿ

ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಸೇವರಿ
ರೈಸ್ ಕೇಕ್ ರೆಸಿಪಿ ವಿಭಿನ್ನವಾಗಿ ತಯಾರಿಸಿದ್ದಾರೆ. ಚಟ್ಟೆ ಹಾಗೂ ಸಾಂಬಾರ್ ಜೊತೆಗೆ ಐಸ್‌ಕ್ರೀಮ್‌ನಂತೆ ಕಾಣುವ ಈ ಇಡ್ಲಿಯನ್ನು ನೋಡಲು ವಿಚಿತ್ರ ಅನಿಸುತ್ತದೆ. ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದ ಸೇವರಿ ರೈಸ್ ಕೇಕ್ ಭಾರೀ ವೈರಲ್ ಆಗಿದೆ.

ಹೆಡ್ ಫೋನ್ ಹಾಕಿ ವಾಹನ ಚಾಲನೆ ಮಾಡಿದ್ರೆ ಇನ್ಮುಂದೆ ಬೀಳುತ್ತೆ 1000 ರೂ ದಂಡ

ಫೋನ್ ಜೇಬಿನಲ್ಲಿಟ್ಟುಕೊಂಡು ಬ್ಲ್ಯೂಟೂತ್ ಅಥವಾ ಇಯರ್ ಫೋನ್ ಡಿವೈಸ್ ಮೂಲಕ ಮಾತನಾಡುವುದು ಕೂಡ ನಿಯಮ ಉಲ್ಲಂಘನೆಯಾಗಲಿದೆ. ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಹೀಗಾಗಿ, ವಾಹನ ಸವಾರರು ಎಚ್ಚೆತ್ತುಕೊಳ್ಳುವುದು ಒಳಿತು ಎಂದು ತಿಳಿಸಿದ್ದಾರೆ.

ಪೊಲೀಸ್‌ ಮನೆಗೆ ಕನ್ನ ಹಾಕಿದ ಖದೀಮರು

ಪೊಲೀಸ್ ಕ್ವಾರ್ಟಸ್ ನಲ್ಲಿ ಸಿಸಿಟಿವಿ ಇಲ್ಲದೆ ಇರುವುದು ಕಳ್ಳರಿಗೆ ಬಂಡವಾಳ ಮಾಡಿಕೊಂಡ ಖದೀಮರು ಭಾರತ್ ಬಂದ್ ಕರ್ತವ್ಯ ಕ್ಕೆ ಹಾಜರಾಗಿದ್ದ ಹೆಡ್ ಕಾನ್ಸ್ ಟೇಬಲ್ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಬಂದೋಬಸ್ತ್ ಕರ್ತವ್ಯಕ್ಕೆ ಬೆಳ್ಳಗ್ಗೆ 6 ಗಂಟೆಗೆ ಬೀಗ ಹಾಕಿ ಹೋಗಿದ್ದ ಹೆಡ್ ಕಾನ್ಸ್ ಟೇಬಲ್ ಮರುದಿನ ಬೆಳಗ್ಗೆ ಕ್ವಾರ್ಟಸ್ ಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ.

ಟಿ20 ವಿಶ್ವಕಪ್ ಹಿನ್ನಲೆ ಐಪಿಎಲ್‌ನಿಂದ ಹಿಂದೆ ಸರಿದ ಗೇಲ್

ನಾನು ಟಿ-20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಸಹಾಯ ಮಾಡುವತ್ತ ಗಮನ ಹರಿಸಲು ಬಯಸುತ್ತೇನೆ ಮತ್ತು ದುಬೈನಲ್ಲಿ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ. ನನಗೆ ಸಮಯ ನೀಡಿದ ಪಂಜಾಬ್ ಕಿಂಗ್ಸ್‌ಗೆ ನನ್ನ ಧನ್ಯವಾದಗಳು, ಹಾಗೂ ನನ್ನ ಶುಭಾಶಯಗಳು ಮತ್ತು ನಾನು ಯಾವಾಗಲೂ ತಂಡದೊಂದಿಗೆ ಇರುತ್ತೇನೆ ಎಂದು ಗೇಲ್ ಹೇಳಿದ್ದಾರೆ.

ಸಿನಿಮೀಯ ರೀತಿಯಲ್ಲಿ ವಕೀಲನ ಅಪಹರಣ

ವಕೀಲ ರವೀಂದ್ರ ಕುಲಕರ್ಣಿ ಖಾಸಗಿ ಕಂಪನಿಯೊಂದರ ಲೀಗಲ್ ಅಡ್ವೈಸರ್​ ಆಗಿದ್ದರು. ಅದೇ ಕಂಪನಿಯಲ್ಲಿ ಅಂದ್ರಹಳ್ಳಿಯ ಸಿದ್ದೇಶ್ ಎಂಬುವವರು ಹಣ ಹೂಡಿಕೆ ಮಾಡಿದ್ದರು. ಬೇಸಿಕ್ ಜಾರ್ಜ್​ ಆಗಿ ರವೀಂದ್ರ ಅವರು ಸಿದ್ದೇಶ್​ನಿಂದ 6-7ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಹಣ ವಾಪಸ್​ ನೀಡದಿದ್ದಾಗ ಸಿದ್ದೇಶ್, ಸ್ಯಾಂಡಲ್​ವುಡ್ ಖಳನಟರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್ ಸೇರಿ ರವೀಂದ್ರ ಅವರನ್ನು ಕಿಡ್ನಾಪ್​ ಮಾಡಿದ್ದಾನೆ.

ಸ್ನಾತಕೋತ್ತರ ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್: 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಧಿಸೂಚನೆ ಪ್ರಕಟ

ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಕಾನೂನು, ಸಮಾಜ ಕಾರ್ಯ, ಭೂಗೋಳ ಶಾಸ್ತ್ರ, ಭೂಗರ್ಭ ಶಾಸ್ತ್ರ, ವಾಣಿಜ್ಯ ಶಾಸ್ತ್ರ, ನಿರ್ವಹಣಾ ಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ರಸಾಯನ ಶಾಸ್ತ್ರ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಕವಿಜ್ಞಾನ, ಸಂಖ್ಯಾ ಶಾಸ್ತ್ರ, ಫ್ಯಾಶನ್‌ ಟೆಕ್ನಾಲಜಿ ವಿಷಯಗಳಿಗೆ ನೇಮಕಾತಿ ನಡೆಸಲಾಗುತ್ತದೆ.