vijaya times advertisements
Visit Channel

October 4, 2021

ಶಾರುಖ್ ಮಗ ಇನ್ನೂ ಮಗು – ಸುನೀಲ್ ಶೆಟ್ಟಿ

ಯಾವುದೇ ಕಡೆ ರೇಡ್ ಆದಾಗ ಅಲ್ಲಿನ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಆ ಮಗು ಡ್ರಗ್ಸ್ ಸೇವಿಸಿತ್ತು, ಆ ಮಗು ಹಾಗೆ ಮಾಡಿತ್ತು, ಈ ಮಗು ಹೀಗೆ ಮಾಡಿದೆ ಎಂದೆಲ್ಲ ಹೇಳಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ, ಆ ಮಗುವಿಗೆ ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಸುನಿಲ್ ಶೆಟ್ಟಿ.ತಮ್ಮ ಅಭಿಪ್ರಾಯವನ್ನು ವ್ಯೆಕ್ತಪಡಿಸಿದ್ದಾರೆ.

WeStandWithSRK ಹ್ಯಾಷ್‌ಟ್ಯಾಗ್ ಮೂಲಕ ಶಾರುಖ್ ಫ್ಯಾನ್ಸ್ ಅಭಿಯಾನ

ಆರ್ಯನ್‌ಗೆ ನಿರ್ದೇಶಕನಾಗುವ ಆಸೆಯಿದೆ ಎಂದು ಸ್ವತಃ ಶಾರುಖ್ ಒಂದು ಸಂದರ್ಶನಲ್ಲಿ ಹೇಳಿದ್ದರು. ಲಂಡನ್​ನ ‘ಸೆವೆನ್​ ಓಕ್ಸ್​ ಹೈಸ್ಕೂಲ್​’ನಲ್ಲಿ ಆರ್ಯನ್​ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ, ಅಂದರೆ 2020ರಲ್ಲಿ ಫೈನ್​ ಆರ್ಟ್ಸ್​, ಸಿನಿಮ್ಯಾಟಿಕ್​ ಆರ್ಟ್ಸ್​, ಫಿಲ್ಮ್​ ಮತ್ತು ಟೆಲಿವಿಷನ್​ ಪ್ರೊಡಕ್ಷನ್​ ವಿಷಯಗಳಲ್ಲಿ ಅವರು ಪದವಿ ಪಡೆದಿದ್ದಾರೆ ಎಂದು ಶಾರುಖ್‌ ತಿಳಿಸಿದ್ದರು

ಶಾರುಖ್‌ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಮಗ!

“ ನನ್ನ ಮಗ ಹುಡುಗಿಯರ ಜೊತೆ ಡೇಟ್ ಮಾಡಬಹುದು. ಸಿಗರೇಟ್ ಸೇದಬಹುದು. ಲೈಂಗಿಕತೆ ಮತ್ತು ಮಾದಕವಸ್ತುಗಳನ್ನು ಸಹ ಅನಂದಿಸಬಹುದು. ತಾನು ಯೌವ್ವನದಲ್ಲಿ ಮಾಡಲಾಗದ ಎಲ್ಲಾ ಕೆಲಸಗಳನ್ನು ಮಾಡಲು ಅವನಿಗೆ ಮುಕ್ತವಾದ ಅವಕಾಶವಿದೆ” ಅಂತ ಶಾರುಖ್ ತಮಾಷೆಯಾಗಿ ಹೇಳುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಗೆ ನೈತಿಕ ಬೆಂಬಲ ನೀಡಲು ಬಾಲಿವುಡ್ ಮಂದಿ ರಾತ್ರಿಯಿಂದಲೇ ಶಾರುಖ್ ಖಾನ್ ನಿವಾಸ ‘ಮನ್ನತ್ ಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್, ಶಾರುಖ್ ಖಾನ್ ನಿವಾಸದಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ನೈತಿಕ ಬೆಂಬಲ ಮತ್ತು ಧೈರ್ಯ ತುಂಬುವ ಕೆಲಸ ಮಾಡಿ ಬಂದಿದ್ದಾರೆ. ಇನ್ನೊಂದೆಡೆ ಸುನಿಲ್ ಶೆಟ್ಟಿ ಪೂಜಾ ಭಟ್, ಸುಚಿತ್ರ ಕೃಷ್ಣಮೂರ್ತಿ ಸೇರಿದಂತೆ ಅನೇಕ ಬಾಲಿವುದ ತಾರೆಗಳು ಶಾರುಖ್ ಖಾನ್ ಬೆಂಬಲಕ್ಕೆ ಸಂಕಷ್ಟದ ಸಮಯದಲ್ಲಿ ನಿಂತು ನಮ್ಮ ಟ್ವಿಟರ್ ಖಾತೆಗಳ ಮೂಲಕ ಬಹಿರಂಗವಾದ ಬೆಂಬಲವನ್ನು ನೀಡುತ್ತಿದ್ದಾರೆ.

ಮಹಾ ಮಳೆಗೆ ಮಹಾನಗರ ತತ್ತರ

ಬೆಂಗಳೂರು ಅ 4 :  ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಭಾನುವಾರ ರಾತ್ರಿ ಸುಮಾರು 10 ಗಂಟಿಯಿಂದ 12ಗಂಟೆವರೆಗೆ ಎಡಬಿಡದೆ ಸುರಿದ

ಬೆಳ್ಳಿ ಪರದೆಯಲ್ಲಿ ‘ಫಿಸಿಕ್ಸ್ ಟೀಚರ್’ ಶಿಕ್ಷಣ

ನಾನು ಈ ಚಿತ್ರದಲ್ಲಿ ಜಲಜ ಎಂಬ ಪಾತ್ರ ಮಾಡುತ್ತಿದ್ದೇನೆ. ಸುಮುಖ ‘ಫಿಸಿಕ್ಸ್ ಟೀಚರ್’ ಆದರೆ, ನಾನು ಸೈಕಾಲಜಿ ಟೀಚರ್. ಇದರಲ್ಲಿ ‌ಬರೀ ಫಿಸಿಕ್ಸ್ ಅಷ್ಟೇ ಅಲ್ಲದೇ ಪ್ರೇಮಕಥೆಯೂ ಇದೆ. ಕಥೆ ಕೇಳಿ ತುಂಬಾ ಉತ್ಸುಕಳಾಗಿದ್ದೇನೆ. ಈ ಚಿತ್ರ ನೋಡಿ ಜನ ಬರೀ ಚೆನ್ನಾಗಿದೆ ಅಂತ ಹೇಳುವುದಿಲ್ಲ. ಕೆಲವರಿಗೆ, ಅರ್ಧ ಗಂಟೆ, ಕೆಲವರಿಗೆ ಒಂದು ಗಂಟೆ, ಮತ್ತೆ ಕೆಲವರಿಗೆ ದಿನಗಟ್ಟಲೆ ನಮ್ಮ ಚಿತ್ರದ ಕಥೆ ಕಾಡಲಿದೆ ಎಂದರು ನಾಯಕಿ ಪ್ರೇರಣ ಕಂಬಂ.

ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಮತದ ಯಂತ್ರದಂತೆ ಬಳಸಿದೆ – ಹೆಚ್.ಡಿ. ಕುಮಾರಸ್ವಾಮಿ

ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಮುಸ್ಲಿಮರನ್ನು ರಾಜಕೀಯವಾಗಿ ಬಳಸಿಕೊಂಡು ಶೋಷಣೆ ಮಾಡುತ್ತಿದೆ. ದೇಶದಲ್ಲಿರುವ 19% ಜನರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕೆಲಸ ಈಗ ನಡೆಯುತ್ತಿದೆ. ನಾವೆಲ್ಲರೂ ಒಂದು ಎಂದು ಸಂವಿಧಾನ ಹೇಳಿದರೂ ಬಿಜೆಪಿ ತನ್ನ ಹಿಡನ್ ಅಜೆಂಡಾ ಜಾರಿ ಮಾಡುತ್ತಿದೆ. ನಿಮ್ಮನ್ನು ಸದಾ ಅನುಮಾನದಿಂದ ನೋಡುತ್ತಿದೆ. ಇದನ್ನು ನೋಡುತ್ತಾ ಕಾಂಗ್ರೆಸ್ ಜಾಣ ಮೌನದಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.

ದೇಶದ 150 ರೈಲ್ವೆ ನಿಲ್ದಾಣಗಳ ಮರು ಅಭಿವೃದ್ಧಿ – ಅಶ್ವಿನಿ ವೈಷ್ಣವ್

ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ವೈಷ್ಣವ್ ಜೋಧ್‌ಪುರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನನಗೆ ಜವಾಬ್ದಾರಿಗಳನ್ನು ನೀಡಿದ್ದಾರೆ ಮತ್ತು ಪ್ರತಿಯೊಬ್ಬ ಪ್ರಯಾಣಿಕರ ಮುಖದಲ್ಲಿ ನಗು ತರುವಂತೆ ನನ್ನ ತಂದೆ ನನಗೆ ತಿಳಿಸಿದ್ದಾರೆ. ಇಬ್ಬರ ನಿರೀಕ್ಷೆಗಳನ್ನು ತಲುಪಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ  ಎಂದಿದ್ದಾರೆ.

ಒಎನ್‌ಜಿಸಿ 313 ಹುದ್ದೆಗಳಿಗೆ ನೇಮಕಾತಿ

ದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತ ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೆಟ್ರೋಲಿಯಂ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಇನ್ನುಮೆಂಟೆಷನ್ ಇಂಜಿನಿಯರಿಂಗ್, ಕಿಮಿಕಲ್ ಇಂಜಿನಿಯರಿಂಗ್, ಜಿಯೋಲಾಜಿ, ಜಿಯೋ ಫಿಸಿಕ್ಸ್ ಪದವೀಧರರಾಗಿರಬೇಕು

ಹಡಗಿನಲ್ಲಿ ರೇವ್ ಪಾರ್ಟಿ ಶಾರುಕ್ ಪುತ್ರನ ಬಂಧನ

ಈ ಪ್ರಕರಣದಲ್ಲಿ ಸಿಲುಕಿರುವವರನ್ನು ಎರಡು ದಿನ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತಾದರೂ ನ್ಯಾಯಾಲಯ ಒಂದು ದಿನಕ್ಕೆ ಸಮ್ಮತಿ ಸೂಚಿಸಿದೆ. ಈ ಮಧ್ಯೆ, ಆರ್ಯನ್‌ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಹಿರಿಯ ವಕೀಲ ಸತೀಸ್‌ ಮನ್‌ಶಿಂಧೆ ಹೇಳಿದ್ದಾರೆ. ಎನ್‌ಸಿಬಿ ವಶಕ್ಕೆ ಪಡೆದ ಎಂಟು ಜನರಲ್ಲಿಮೂವರು ಯುವತಿಯರೂ ಇದ್ದಾರೆ. ಅವರೆಲ್ಲರೂ ದಿಲ್ಲಿಮೂಲದವರೆಂದು ತಿಳಿದುಬಂದಿದೆ.

ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ 8 ಮಂದಿ ಸಾವು

ಕೇಶವ ಪ್ರಸಾದ್ ಮೌರ್ಯ ಅವರನ್ನು ಬರಮಾಡಿಕೊಳ್ಳಲು ತೆರಳುತ್ತಿದ್ದ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಕಾರಿನ ಎದುರು ರೈತರು ಪ್ರತಿಭಟನೆ ನಡೆಸಿದರು. ಆಗ ಪ್ರತಿಭಟನಾನಿರತ ರೈತರ ಮೇಲೆಯೇ ನಿಷ್ಕರುಣೆಯಿಂದ ಆಶಿಶ್ ಕಾರು ಚಲಾಯಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ಇಬ್ಬರಲ್ಲ, ಮೂವರು ರೈತರು ಮರಣ ಹೊಂದಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟ ಆರೋಪಿಸಿದೆ. ಆದರೆ ಆಶಿಶ್ ಮಿಶ್ರಾ ಅವರೇ ಕಾರು ಹರಿಸಿದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.