vijaya times advertisements
Visit Channel

October 9, 2021

ಡೆನ್ಮಾರ್ಕ್ ಪ್ರಧಾನಿ ಜೊತೆ ಮೋದಿ ಮಹತ್ವದ ಮಾತುಕತೆ

ತನ್ನ ಭೇಟಿಯ ಸಮಯದಲ್ಲಿ, ಫ್ರೆಡೆರಿಕ್ಸೆನ್ ಚಿಂತಕರ ಚಾವಡಿಗಳು, ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತ ಮತ್ತು ಡೆನ್ಮಾರ್ಕ್ ಬಲವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೊಂದಿವೆ. 200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಭಾರತದಲ್ಲಿವೆ ಮತ್ತು 60 ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಡೆನ್ಮಾರ್ಕ್‌ನಲ್ಲಿವೆ. ಈ ಭೇಟಿ ಭಾರತ ಮತ್ತು ಡೆನ್ಮಾರ್ಕ್ ನಡುವಿನ ನಿಕಟ ಮತ್ತು ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬಂಟ್ವಾಳದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್

ಅಪ್ರಾಪ್ತ ಬಾಲಕಿ ಮೇಲೆ ಐವರು ಕಾಮುಕರು ಸೇರಿ ಗ್ಯಾಂಗ್ ರೇಟ್ ನಡೆಸಿದ್ದಾರೆ ಎನ್ನಲಾಗುತ್ತಿದೆ. ಎಂಟ್ವಾಳದ ಎಸ್. ವಿ. ಎಸ್. ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಯನ್ನು ಪರಿಚಿತರೇ ಮತ್ತು ಬರಿಸುವ ಚಾಕಲೇಟ್ ನೀಡಿ ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಬಂಟ್ವಾಳದ ಅಮ್ಯಾಡಿಯಲ್ಲಿ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ.

ರೋಚಕ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಯಡಿಯೂರಪ್ಪ, ಮಾಜಿ ಸಿಎಂ ಐಪಿಎಲ್ ಕ್ರೇಜ್‌ಗೆ ಅಭಿಮಾನಿಗಳು ಫಿದಾ

ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ದತ್ತಿ ಪ್ರಶಸ್ತಿ ಕಾರ್ಯಕ್ರಮ ಮುಗಿಸಿ ಶಿಕಾರಿಪುರಕ್ಕೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿ ಅವರು ಐಪಿಎಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಶ್ರಾಂತಿಗೆ ಮೊರೆ ಹೋಗದೇ ಪಕ್ಷದ ಸಂಘಟನೆಗಾಗಿ ಬಿಎಸ್​ವೈ ಜಿಲ್ಲಾ ಪ್ರವಾಸಗಳನ್ನು ಮಾಡುತ್ತಿದ್ದಾರೆ.

ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ತೆಗೆದು ಹಾಕುವಂತಿಲ್ಲ ಟಾಟಾಗೆ ಸರ್ಕಾರ ಸೂಚನೆ

ಈ ಬಗ್ಗೆ ಮಾಹಿತಿ ನೀಡಿದ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಲ್, ಈಗಿರುವ ಎಲ್ಲಾ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಲಾಗುವುದು. ನಮ್ಮ ಬಿಡ್ಡಿಂಗ್ ನಲ್ಲಿ ಗೆದ್ದಿರುವ ಟಾಟಾ ಗ್ರೂಪ್ ನೌಕರರನ್ನು ಕಂಪೆನಿಯಲ್ಲಿ ಉಳಿಸಿಕೊಳ್ಳಬೇಕು. ಅದರರ್ಥ ಒಂದು ವರ್ಷದವರೆಗೆ ಕೆಲಸದಿಂದ ತೆಗೆದುಹಾಕುವಂತಿಲ್ಲ. ಒಂದು ವರ್ಷ ಬಳಿಕ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ಅವರಿಗೆ ಸ್ವಯಂ ನಿವೃತ್ತಿ ಯೋಜನೆಯ ಸೌಲಭ್ಯವನ್ನು ನೀಡಬೇಕು ಎಂದು ಸರ್ಕಾರ ನಿಯಮ ತಂದಿದೆ ಎಂದರು.

ಹಾನಿಗೊಳಗಾಗಿದ್ದ ಮನೆಗೆ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಅವರಿಂದ ಸಹಾಯಧನ

ಡಿಗೆರೆ ಕಸಬಾ ವಲಯದ ಹೆಸ್ಗಲ್ ಗ್ರಾಮದ ಬಿಳಗುಳ ನಿವಾಸಿ ಶ್ರೀಮತಿ ಕಲಾವತಿಯವರ ಮನೆ ಕುಸಿದು ಬಿದ್ದು ಹಾನಿಗೊಳಗಾಗಿತ್ತು . ಇದನ್ನು ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ ಅವರು ಯೋಜನಾಧಿಕಾರಿ ಗಮನಕ್ಕೆ ತಂದು ಅವರ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರಿಗೆ ಮನವಿಯನ್ನು  ಕೂಡ ಸಲ್ಲಿಸಲಾಗಿತ್ತು.

ಮತ್ತೆ ಕೈಕೊಟ್ಟ ಫೇಸ್‌ಬುಕ್‌

ಫೇಸ್‌ಬುಕ್‌ನಲ್ಲಿನ ಪೋಸ್ಟ್‌ನಲ್ಲಿ, ಜನರು ತಮ್ಮ ಸೇವೆಯನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದ್ದಾರೆ ಎಂಬುದನ್ನು ಅರಿತುಕೊಂಡಿದ್ದೇನೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು.

ಆರ್‌ಎಸ್‌ಎಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗಿರುತ್ತಿತ್ತು – ಕೆ.ಎಸ್ ಈಶ್ವರಪ್ಪ

ಇಡೀ ಹಿಂದು ಸಮುದಾಯ ನರೇಂದ್ರ ಮೋದಿ ಅವರ ಜೊತೆಗಿದೆ. ದೇಶಭಕ್ತ ಮುಸ್ಲಿಮರು ಬಿಜೆಪಿ ಜೊತೆಗೆ ಬರುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಿಂದುಗಳ ಓಟಂತೂ ನಮಗೆ ಸಿಗುವುದಿಲ್ಲ  ಮುಸ್ಲಿಮರನ್ನು ಸಂತೃಪ್ತಗೊಳಿಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಗಾಗ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಆರ್ ಎಸ್ ಎಸ್ ತನ್ನ ಛಾಪನ್ನು ಮೂಡಿಸಿದೆ. ದೇಶದ ಆಡಳಿತವನ್ನು ಸಂಘ ನಡೆಸುತ್ತಿಲ್ಲ ಬದಲಾಗಿ ಮಾರ್ಗದರ್ಶನ ನೀಡುತ್ತಿದೆ. ಆರ್ ಎಸ್ ಎಸ್ ಆಡಳಿತ ನಡೆಸುತ್ತಿದೆ ಎಂಬ ವಿಪಕ್ಷಗಳ ಹೇಳಿಕೆ ಭ್ರಮೆಯಾಗಿದೆ ಎಂದರು.

ಟಾಟಾ ತೆಕ್ಕೆಗೆ ಏರ್ ಇಂಡಿಯಾ

 ಟ್ವೀಟ್ ಮಾಡಿರುವ ರತನ್ ಟಾಟಾ, “ಟಾಟಾ ಗ್ರೂಪ್ ಇಂಡಿಯಾ ಬಿಡ್ ಗೆದ್ದಿರುವುದು ನಿಜಕ್ಕೂ ಉತ್ತಮ ಸುದ್ದಿ. ಏರ್ ಇಂಡಿಯಾವನ್ನು ಮರುನಿರ್ಮಾಣ ಮಾಡಲು ಸಾಕಷ್ಟು ಪ್ರಯತ್ನಗಳು ಅಗತ್ಯವಿದೆ ಎಂಬುದು ನಿಜ, ಇದು ವಿಮಾನ ಯಾನ ಉದ್ಯಮದಲ್ಲಿ ಟಾಟಾ ಗ್ರೂಪ್ ಪ್ರಸ್ತುತತೆಗೆ ಬಲಿಷ್ಠ ಮಾರುಕಟ್ಟೆ ಅವಕಾಶವನ್ನು ಒದಗಿಸುತ್ತದೆ ಎಂದು ನಂಬಿದ್ದೇನೆ” ಎಂದಿದ್ದಾರೆ.

ಶಾರದಾಂಬೆ ದರ್ಶನ ಪಡೆದ ರಾಷ್ಟ್ರಪತಿ ಕುಟುಂಬ

ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಉಭಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.