vijaya times advertisements
Visit Channel

October 13, 2021

ಟೊಮೆಟೋ ಸಂಕಟ

ಎಪಿಎಂಸಿ ಅಧಿಕಾರಿಗಳು ಸತ್ತಿದ್ದಾರಾ? ಚಿಂತಾಮಣಿ ಎಪಿಎಂಸಿಯಲ್ಲಿ ಇಷ್ಟೊಂದು ಅವ್ಯಸ್ಥೆ ಇದ್ರೂ ಅಧಿಕಾರಿಗಳು ಏನ್ಮಾಡ್ತಿದ್ದಾರೆ? ರಸ್ತೆ ತುಂಬಾ ಟೊಮೆಟೋ ಚೆಲ್ಲಿ ಕೆಸರುಗದ್ದೆಯಂತಾಗಿದೆ. ರೋಗ ಹರಡೋ ಭೀತಿ ಹೆಚ್ಚಾಗಿದೆ.

ನಕ್ಸಲ್ ನಂಟು ಹಿನ್ನಲೆ, ರಾಜ್ಯದ ಹಲವೆಡೆ NIA ದಾಳಿ

ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ದಾಳಿ ನಡೆಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು, ಥೇಣಿ, ರಾಮನಾಥಪುರಂ, ಸೇಲಂ, ಕನ್ಯಾಕುಮಾರಿ, ಕೃಷ್ಣಗಿರಿ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೇರಳದ ವಯನಾಡ್, ತ್ರಿಶೂರ್ ಮತ್ತು ಕಣ್ಣೂರು ಜಿಲ್ಲೆಗಳಲ್ಲೂ ಪರಿಶೀಲಿಸಿದ್ದಾರೆ.

ಎನ್.ಎ. ಹ್ಯಾರಿಸ್ ಸಂಬಂಧಿ ಬ್ಯಾಗ್‌ನಲ್ಲಿದ್ದ ಜೀವಂತ ಬುಲೆಟ್ ವಶ

ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಅವರ ಅಂಕಲ್ ಫರೂಕ್ ನಲಪಾಡ್ ಬೆಂಗಳೂರಿನಿಂದ ದುಬೈ ವಿಮಾನವನ್ನು ಹತ್ತಲು ಇಂದು ಬೆಳಗ್ಗೆ 9.30ರ ವೇಳೆಗೆ ಬೆಂಗಳೂರಿನ ವಿಮಾನ ನಿಲ್ದಾಣದೊಳಗೆ ಹೋದಾಗ ಅವರ ಕ್ಯಾಬಿನ್ ಬ್ಯಾಗ್​ನಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ. ಅವರು ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್​ನಲ್ಲಿ ಬುಲೆಟ್​ಗಳು ಪತ್ತೆಯಾಗುತ್ತಿದ್ದಂತೆ ತಕ್ಷಣ ಭದ್ರತಾ ಪಡೆಗೆ ಹಾಗೂ ಸಿಐಎಸ್​ಎಫ್ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು.

ರಾಜ್ಯದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್, ದೇಶದ ಮಹಾನಗರ ಪೈಕಿ ಎರಡನೇ ಸ್ಥಾನದಲ್ಲಿ ಬೆಂಗಳೂರು

ಕಿದ್ವಾಯಿ ಮೆಮೋರಿಯನ್ ಇನ್‌ಸ್ಟಿಟ್ಟಯೂಟ್ ಆಫ್ ಆಂಕಾಲಜಿ ನಿರ್ದೇಶಕ ಡಾ. ಸಿ. ರಾಮಚಂದ್ರನ್ ಅವರು ಹೇಳುವಂತೆ ಕಿದ್ವಾಯಿಯಲ್ಲಿ ಪ್ರತಿ ವರ್ಷ ಸುಮಾರು 800 ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತವೆ. ‘ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಶೇ50ಕ್ಕಿಂತ ಹೆಚ್ಚು ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದ ರೋಗಲಕ್ಷಣದೊಂದಿಗೆ ಬರುತ್ತಿದ್ದಾರೆ. ಇದು ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಆರಂಭಿಕ ಹಂತದಲ್ಲಿ ಪತ್ತೆಯಾದಲ್ಲಿ ಆ ಕ್ಯಾನ್ಸರ್ ಅನ್ನು ಗುಣಪಡಿಸುವ ಅವಕಾಶವು ಶೇ 90ರಷ್ಟಿರುತ್ತದೆ.

ಅಫ್ಘಾನಿಸ್ಥಾನವು ಭಯೋತ್ವಾದನೆಯ ಮೂಲವಾಗದಂತೆ ನಿಯಂತ್ರಿಸಬೇಕು – ಪ್ರಧಾನಿ ನರೇಂದ್ರ ಮೋದಿ

ಹಸಿವು ಮತ್ತು ಅಪೌಷ್ಟಿಕತೆಯನ್ನು ಎದುರಿಸುತ್ತಿರುವ ಅಫ್ಘಾನ್ ಜನರ ನೋವನ್ನು ಪ್ರತಿಯೊಬ್ಬ ಭಾರತೀಯರು ಅನುಭವಿಸುತ್ತಾರೆ ಮತ್ತು ಮಾನವೀಯ ನೆರವಿಗೆ ಅಫ್ಘಾನಿಸ್ಥಾನವು ತಕ್ಷಣದ ಮತ್ತು ಅಡೆತಡೆಯಿಲ್ಲದ ಪ್ರವೇಶವನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಅಂತರಾಷ್ಟ್ರೀಯ ಸಮುದಾಯದ ಅಗತ್ಯವನ್ನು ಮೋದಿ ಒತ್ತಿ ಹೇಳಿದರು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ !

ಸೇರಿನಾಯಕನ ಪಾಳ್ಯಂ ಪಂಚಾಯತ್ ಕ್ಷೇತ್ರದ 9 ನೇ ವಾರ್ಡ್‌ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಾರ್ತಿಕ್ ಎನ್ನುವರು ಒಂದೇ ಒಂದು ಮತ ಗಳಿಸಿದ್ದಾರೆ, ಗಮನಾರ್ಹವೆಂದರೆ ಕಾರ್ತಿಕ್ ಕುಟುಂಬದಲ್ಲಿ ಅವರ ಹೆಂಡತಿಯೂ ಸೇರಿದಂತೆ 6ಜನ ಇದ್ದಾರೆ.

ಸಿಂದಗಿ ಉಪಚುನಾವಣೆ, ಅಭ್ಯರ್ಥಿಗಳ ಆಸ್ತಿ ವಿವರ ಸಲ್ಲಿಕೆ

ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಬಳಿ 3 ಲಕ್ಷ ರೂಪಾಯಿ, ಅವರ ಪತ್ನಿ ಲಲಿತಾಬಾಯಿ ಬಳಿ ಒಂದು ಲಕ್ಷ ರೂಪಾಯಿ ನಗದು ಹಣವಿದೆ. ರಮೇಶ್ ಭೂಸನೂರು ಬಳಿ 9 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣಗಳಿವೆ. ಅವರ ಪತ್ನಿ ಲಲಿತಾಬಾಯಿ 4 ಡೈಮಂಡ್ ಹಾಗೂ 500 ಗ್ರಾಂ ಚಿನ್ನದ ಆಭರಣವಿದೆ. ಒಟ್ಟು ಮೌಲ್ಯ 25 ಲಕ್ಷ ಎಂದು ನಾಮಪತ್ರದ ಜೊತೆಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ.

ವೃದ್ದೆಯನ್ನು ಆಸ್ಪತ್ರೆಗೆ ಹೆಗಲ ಮೇಲೆ ಹೊತ್ತೊಯ್ದ ಗ್ರಾಮಸ್ಥರು. ರಸ್ತೆ ಕಾಣದ ಗ್ರಾಮಕ್ಕೆ ಮುಕ್ತಿ ಯಾವಾಗ ?

ಬೈಕ್ ಆಂಬುಲೆನ್ಸ್ ಕೂಡ ಈ ದಾರಿಯಲ್ಲಿ ಸಾಗಲಾರದು, ಕಾಲುದಾರಿಯ ಮುಖಾಂತರವೇ ಪ್ರತಿಯೊಬ್ಬರು ಈ ದಾರಿಯಲ್ಲಿ ಓಡಾಡುತ್ತಿದ್ದಾರೆ, ಸುಮಾರು 70 ವರ್ಷಗಳಿಂದ ಈ ಭಾಗದ ಜನರಿಗೆ ರಸ್ತೆಯ ಸಂಪರ್ಕವೇ ಇಲ್ಲವಾಗಿದೆ. ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನಗಳಾಗಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಕಲ್ಲಿದ್ದಲು ಕೊರತೆ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರಗಳ ಮೊರೆ, ಮುಖ್ಯಮಂತ್ರಿ ನಿವಾಸದಲ್ಲೂ ಪವರ್ ಕಟ್

ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಯಡಿಯೂರಪ್ಪ ನಿವಾಸ ಇರೋ ರಸ್ತೆಯಲ್ಲೂ ಪವರ್ ಕಟ್ ಆಗಿದೆ. ಹೀಗಾಗಿ ಸಿಎಂ ನಿವಾಸ ಕುಮಾರ ಕೃಪಾ ರಸ್ತೆಗೂ ಲೋಡ್ ಶೆಡ್ಡಿಂಗ್‌ನ ಬಿಸಿ ತಟ್ಟಿದಂತಾಗಿದೆ.