vijaya times advertisements
Visit Channel

October 14, 2021

ರೈತರು ಬಳಸುವ ಡೀಸೆಲ್ಗೆ 20 ರೂ. ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಚಿಂತನೆ

ಚಿತ್ರದುರ್ಗದ ಮುರುಘಾಮಠದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ಕೈಗಾರಿಕೆ ಮೇಳ ಉದ್ಘಾಟಿಸಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಭಾರತದಲ್ಲೇ ಮೊದಲ ಬಾರಿಗೆ ರೈತರು ಬಳಸುವ ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 20 ರೂ. ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ರೈತರು ಬಳಸುವ ಡೀಸೆಲ್ ಗೆ ಸಬ್ಸಿಡಿ ನೀಡಲು ಸಮ್ಮತಿಸಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಇದು ಸಾಧ್ಯವಾಗಿರಲಿಲ್ಲ.

ಕ್ರಿಶ್ಚಿಯನ್ ಮಿಷನರಿಗಳ ಬಗ್ಗೆ ಸರ್ವೇ ನಡೆಸಲು ರಾಜ್ಯ ಸರಕಾರ ಆದೇಶ

ರಾಜ್ಯದಲ್ಲಿ ಮತಾಂತರ ಚಟುವಟಿಕೆ ಹೆಚ್ಚುತ್ತಿರುವ ಆರೋಪದ ಬಗ್ಗೆ ವಿಕಾಸಸೌಧದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಶಾಸಕರಾದ ಗೂಳಿಹಟ್ಟಿ ಶೇಖರ್‌, ಪುಟ್ಟರಂಗ ಶೆಟ್ಟಿ ಬಿ.ಎಂ. ಫಾರೂಕ್, ವಿರೂಪಾಕ್ಷಪ್ಪ ಬಳ್ಳಾರಿ, ಅಶೋಕ್ ನಾಯ್ಕ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಪಾಲ್ಗೊಂಡಿದ್ದರು.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮ – ಕೇಂದ್ರದ ಭರವಸೆ

ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯಗಳ ಕಾರ್ಯದರ್ಶಿಗಳು ಪಿಎಂಒಗೆ ಪ್ರಸ್ತುತಿಗಳನ್ನು ನೀಡಿದ್ದು, ಯಾವುದೇ ವಿದ್ಯುತ್ ವ್ಯತ್ಯಯ ಉಂಟಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಮತ್ತೊಂದೆಡೆ, ವಿನಿಮಯ ಕೇಂದ್ರಗಳಲ್ಲಿ ವಿದ್ಯುತ್ ಅನ್ನು ಪ್ರೀಮಿಯಂನಲ್ಲಿ ಮಾರಾಟ ಮಾಡುವ ಮೂಲಕ ಮತ್ತು ನಂತರ ತಮ್ಮ ರಾಜ್ಯಗಳಲ್ಲಿ ವಿದ್ಯುತ್ ಕಡಿತ ಮಾಡುವ ಮೂಲಕ ಲಾಭ ಮಾಡಲು ನೋಡಬೇಡಿ ಎಂದು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.

ದುರ್ಗಾ ಪೂಜೆ ವೇಳೆ ಗುಂಡಿನ ದಾಳಿ ಓರ್ವ ಸಾವು

ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ, ಮಂಜೀತ್ ಯಾದವ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆತನ ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಬಾಲಕಿಯರು ಸೇರಿದಂತೆ ಮೂವರಿಗೆ ಗಾಯಗಳಾಗಿದೆ ಎಂದು ಅಯೋಧ್ಯೆಯ ಎಸ್‌ಎಸ್ ಪಿವೈಲೇಶ್ ಪಾಂಡೆ ತಿಳಿಸಿದರು. ಈ ಸಂಬಂಧ ಫೈಜಾಬಾದ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಶಾಸಕ ಯತ್ನಾಳ್ ಸಿಡಿ ಕೂಡ ಬಿಡುಗಡೆಗೆ ಆಗುತ್ತಾ ?

ಈ ಬಗ್ಗೆ ನಮ್ಮ ಕಾಂಗ್ರೆಸ್ ಇನಸ್ಟಾಗ್ರಾಮ್‌ನಲ್ಲಿ ಪೇಜ್ ನಲ್ಲಿಯೂ ಈ ಪೋಸ್ಟ್ ಹಾಕಲಾಗಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಜೆಡಿಎಸ್ ಮಿಷನ್ 2023 ಎಂಬ ಪೇಸ್ಟುಕ್ ಅಕೌಂಟ್ನಲ್ಲಿಯೂ ಫೋಟೊ ಹರಿದಾಡುತ್ತಿದೆ. ಬಿಜೆಪಿ ನಾಯಕನ ಸಿಡಿ ಬಿಡುಗಡೆಗೆ ಕ್ಷಣಗಣನೆ ಎಂಬ ಟ್ಯಾಗ್‌ಲೈನ್ ಹಾಕಲಾಗಿದೆ.

ಕಾಶ್ಮೀರ ಎಂದಿಗೂ ಭಾರತದ ಅಂಗ – ಫಾರುಕ್ ಅಬ್ದುಲ್ಲಾ

ಕೌರ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ ಅಬ್ದುಲ್ಲಾ, 1990 ರ ದಶಕದಲ್ಲಿ ಸಿಖ್ ಸಮುದಾಯವು ಕಾಶ್ಮೀರವನ್ನು ತೊರೆಯಲಿಲ್ಲ, ಅನೇಕ ಜನರು ಭಯದಿಂದ ಕಣಿವೆಯನ್ನು ತೊರೆದರು. ನಾವು ನಮ್ಮ ಮನೋಬಲವನ್ನು ಹೆಚ್ಚಿಸಿಕೊಂಡು ಧೈರ್ಯದಿಂದ ಇರಬೇಕು ಎಂದು ಹೇಳಿದರು.. ನಾವು ಧೈರ್ಯದಿಂದ ಹೋರಾಡಬೇಕು. ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕನನ್ನು ಕೊಲ್ಲುವುದು ಇಸ್ಲಾಂ ಸೇವೆ ಅಲ್ಲ, ಅವರು ಭೂತದ ಸೇವೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಟಿಗೊಬ್ಬ-3 ಪ್ರದರ್ಶನ ವಿಳಂಬಕ್ಕೆ ಅಭಿಮಾನಿಗಳ ಆಕ್ರೋಶ

ಅಕ್ಟೋಬರ್ 14ರ ಮುಂಜಾನೆ ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ವಿಷೇಶ ಪ್ರದರ್ಶನ ನೋಡಲು ಕಿಚ್ಚನ ಅಭಿಮಾನಿಗಳು ಚಿತ್ರ ಮಂದಿರಗಳ ಮುಂದೆ ನೆರೆದಿದ್ದು ಥಿಯೇಟರ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. 7 ಗಂಟೆ ಆಗುತ್ತಿದ್ದಂತೆ ಕೋಟಿಗೊಬ್ಬ 3 ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಆದ್ರೆ ತಾಂತ್ರಿಕ ಕಾರಣಗಳಿಂದಾಗಿ ಮಾರ್ನಿಂಗ್ ಶೋ ಕ್ಯಾನ್ಸಲ್ ಆಗಿದೆ. ಶೋ ಕ್ಯಾನ್ಸಲ್ ಮಾಡಿರುವುದಾಗಿ ಚಿತ್ರಮಂದಿರದ ಆಡಳಿತ ಮಂಡಳಿ ಮಂದಿರಗಳ ಮುಂದೆ ಬೋರ್ಡ್ ಹಾಕಿದೆ. ಆನ್ ಲೈನ್ ಮೂಲಕ ಅಮೌಂಟ್ ರೀಫಂಡ್ ಮಾಡುವುದಾಗಿ ತಿಳಿಸಿದೆ. ನೆಚ್ಚಿನ ನಟನ ಸಿನಿಮಾ ನೋಡದೆ ಬೇಸರದಿಂದ ಅಭಿಮಾನಿಗಳು ಆಚೆ ನಿಂತಿದ್ದು ಕೆಲ ಅಭಿಮಾನಿಗಳು ಡಿಸ್ಟ್ರಿಬ್ಯೂಟರ್ಸ್​ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸಾಭೀತಾಗಿದೆ – ಬಿಜೆಪಿ

‘ಕೆಪಿಸಿಸಿ ಆಯೋಜಿಸಿದ್ದ ಮೌನ ಪ್ರತಿಭಟನೆಯನ್ನು ಸಿದ್ದರಾಮಯ್ಯ ಖುದ್ದು ಧಿಕ್ಕರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಡಿಕೆಶಿ ಕನಸು ಕೂಡಾ ಭಗ್ನಗೊಂಡಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಒಡೆದು ನೂರು ಬಾಗಿಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ, ಒಡೆದು ಮೂರು ಬಾಗಿಲಾಗಿದೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಡಿಕೆಶಿ ಬಣ ಸಂಚು ನಡೆಸಿದ್ದರೆ, ಪರಮೇಶ್ವರ ವಿರುದ್ದ ಸಿದ್ದರಾಮಯ್ಯ ಕತ್ತಿ ಮಸೆಯುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ಟಿ20 ವಿಶ್ವಕಪ್‌ಗೆ ಹೊಸ ಜರ್ಸಿ ಬಿಡುಗಡೆ ಮಾಡಿದ ಬಿಸಿಸಿಐ

ಬಿಸಿಸಿಐ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದು, ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಜರ್ಸಿಯ ಬಗೆಗಿನ ಪೋಸ್ಟ್ ಆಗಿದ್ದು, ಈ ಪೋಸ್ಟ್‌ನಲ್ಲಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಆಟಗಾರರು ಹೊಸ ಜರ್ಸಿ ಧರಿಸಿರುವುದು ಕಂಡುಬಂದಿದೆ. ಈ ನೀಲಿ ಜರ್ಸಿಯ ಪ್ರಾಯೋಜಕರು ಬೈಜುಸ್ ಕಂಪನಿಯು ಕಾರ್ಯ ನಿರ್ವಹಿಸುತ್ತಿದೆ.

ಟ20 ವಿಶ್ವಕಪ್‌ – ಗೌರವ ಧನ ನಿರಾಕರಿಸಿದ ಎಂಎಸ್ ಧೋನಿ

ದುಬೈನಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾಕ್ಕೆ ಮಾರ್ಗದರ್ಶಕರಾಗಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಿಸಿಸಿಐನಿಂದ ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ ಎಂದು ಕಾರ್ಯದರ್ಶಿ ಜಯ್ ಶಾ ಮಂಗಳವಾರ ಹೇಳಿದ್ದಾರೆ.