vijaya times advertisements
Visit Channel

October 29, 2021

ಪುನೀತ್ ಸಾವಿನ ದಿನಚರಿ

ನಮ್ಮ ಆಸ್ಪತ್ರೆಗೆ ಬಂದಾಗ ಅವರು ರೆಸ್ಪಾನ್ಸ್​ ಇರಲಿಲ್ಲ. ಹಾರ್ಟ್​ ಲೈನ್​ ಕಂಪ್ಲೀಟ್​ ಸ್ಟ್ರೈಟ್​ ಆಗಿತ್ತು. ಎಲ್ಲ ತಜ್ಞರು ಸುಮಾರು ಮೂರು ಗಂಟೆಗಳ ಕಾಲ ಪುನೀತ್​ ಅವರನ್ನು ಬದುಕಿಸಿಕೊಳ್ಳಲು  ಪ್ರಯತ್ನಿಸಿದರು. ಆದರೂ ನಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ. ಮಧ್ಯಾಹ್ನ 2.30 ಕ್ಕೆ ಡೆತ್​ ಡಿಕ್ಲೇರ್​ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಅತಿಯಾದ ವರ್ಕೌಟ್‌ ಅಪ್ಪುವಿಗೆ ಮುಳುವಾಯಿತೇ ?

ವಯಸ್ಸು ಎಷ್ಟೇ ಆಗಿರಲಿ, ಯಾವ ನಟ ಕೂಡ ಆದರೂ ತೆರೆ ಮೇಲೆ ಸ್ಮಾರ್ಟ್ ಅಂಡ್ ಸ್ಲಿಮ್ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡುತ್ತಾನೆ. ಇದು ಅಪ್ಪುಗೂ ಕೂಡ ಹೊರತಾಗಿರಲಿಲ್ಲ. ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳದಿದ್ದರೆ ಅದು ತನ್ನ ವೃತ್ತಿ ಬದುಕಿಗೆ ಹಿನ್ನಡೆ ಆಗಬಹುದೆನ್ನುವ ಆತಂಕದಿಂದ ಏನೇ ತಪ್ಪಿದ್ರೂ ದಿನನಿತ್ಯ ಜಿಮ್ ಮಾಡೋದನ್ನು ಮಾತ್ರ ಬಿಡುತ್ತಿರಲಿಲ್ಲ.

ಪುನೀತ್‌ ಸಾವಿಗೆ ಕಂಬನಿ ಮಿಡಿದ ಗಣ್ಯರು

ನಟ ಪುನೀತ್ ರಾಜ್‌ಕುಮಾರ್ ಅವರ ಆರೋಗ್ಯದಲ್ಲಿ ಇಂದು (ಅ.29) ಏರುಪೇರು ಉಂಟಾದ ಕಾರಣ, ಕೂಡಲೇ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದ್ದಾರೆ. ವಿಕ್ರಂ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸಕ್ಕೆ ಸ್ಥಳಾಂತರ ಮಾಡಲಾಗಿದೆ

ಪುನೀತ್ ರಾಜ್‌ಕುಮಾರ್‌ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಸಕಲ ಸಿದ್ದತೆ

ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್‌ ವುಡ್‌ ನ ನಟ ಪುನೀತ್‌ ರಾಜ್‌ ಕುಮಾರ್‌ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪುನೀತ್‌ ಶರೀರವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ  ಇಡಲಾಗುವುದು, ಇದಕ್ಕಾಗಿ ಎಲ್ಲಾ ರೀತಿಯ ಏರ್ಪಾಡು ಮಾಡಿಕೊಳ್ಳಲಾಗುತ್ತಿದೆ. ಪುನೀತ್‌ ಅವರ ಮೃತ ಶರೀರವನ್ನು  ಆಸ್ಪತ್ರೆಯಿಂದ ಮೊದಲು ಮನೆಗೆ ತೆಗೆದುಕೊಂಡು ಹೋಗಿ ಬಳಿಕ ಕಂಠೀರವ ಸ್ಟೇಡಿಯಂಗೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿದು ಬಂದಿದೆ.

ಪವರ್ ಸ್ಟಾರ್‌ ವಿಧಿವಶ

ಕನ್ನಡದ ಹೆಸರಾಂತ ನಾಯಕ ನಟ ದಿವಗಂತ ಡಾ. ರಾಜ್‌ಕುಮಾರ್‌ ಅವರ ಪುತ್ರ ಪುನೀತ್‌ ರಾಜ್‌ ಕುಮಾರ್‌ ಇಂದು ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ

ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‌ಕುಮಾರ್‌ಗೆ ಲಘು ಹೃದಯಾಘಾತ

ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಪುನೀತ್ ರಾಜ್‍ಕುಮಾರ್ ಕುಸಿದು ಬಿದ್ದಿದ್ದಾರೆ. ಈ ವೇಳೆ ರಮಣಶ್ರೀ ಆಸ್ಪತ್ರೆಯಲ್ಲಿ ಮೊದಲು ಪ್ರಥಮ ಚಿಕ್ಸಿ ಕೊಡಿಸಲಾಗಿದೆ. ನಂತರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಬಿಟ್ ಕಾಯಿನ್ ಹಗರಣದಲ್ಲಿ ದೊಡ್ಡವರ ಹೆಸರಿದೆ – ಡಿ.ಕೆ. ಶಿವಕುಮಾರ್

ಚುನಾವಣೆ ಬೆನ್ನಲ್ಲೇ ನಿಮ್ಮ ಮನೆ ಮೇಲೂ ಐಟಿ ದಾಳಿ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ಮನೆಗೆ ಯಾವ ಐಟಿ ಅಧಿಕಾರಿಗಳು ಬಂದಿಲ್ಲ. ನನ್ನ ಸ್ನೇಹಿತರ ಧಾರವಾಡದ ಮನೆಗೆ ಹೋಗಿದ್ದಾರೆ. ಅವರು ನನ್ನ ಆಪ್ತರು ಎಂಬ ಬಗ್ಗೆ ಯಾವುದೇ ಅನುಮಾನ ಬೇಡ. ಮೊನ್ನೆ ಬೆಂಗಳೂರಿನಲ್ಲಿ ಕೆಲವರ ಮನೆಗೆ ಹೋಗಿದ್ದಾರೆ. ಎಂದು ಉತ್ತರಿಸಿದರು.

ಫೇಸ್‌ಬುಕ್‌ ಇನ್ಮುಂದೆ ಆಗಲಿದೆ ‘ಮೆಟಾ’

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರ್ಕ ಜುಕರ್‌ಬರ್ಗ್  ‘ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ಕಂಪನಿ ಜನರ ಸಂಪರ್ಕದ ಕೇಂದ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಬೃಹತ್‌ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸಬಹುದು. ಅಲ್ಲದೆ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್‌ 100 ಕೋಟಿ ಜನರನ್ನು ತಲುಪಲಿದೆ’ ಎಂದು ಆಶಿಸಿದರು.